ಪ್ರಧಾನ ಮಂತ್ರಿ ಆವಾಸ ಯೋಜನೆಯಿಂದ ಬಡವರಿಗೂ ತಮ್ಮ ಸ್ವಂತ ಮನೆ ಕಟ್ಟುವ ಕನಸು ನನಸಾಗಲಿದೆ..

1
1914

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಧ್ಯಮ ಮತ್ತು ಬಡ ಕುಟುಂಬಗಳಿಗೆ ಸಹಾಯವಾಗಲೆಂದೇ ಮತ್ತು ಅವರ ಸ್ವಂತ ಮನೆಯ ಕನಸನ್ನು ಸಾಕಾರಗೊಳಿಸಲೆಂದೇ ಪ್ರಧಾನಮಂತ್ರಿ ಆವಾಸ್ ಯೋಜನೆ ಎಂಬ ಒಂದು ಹೊಸ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯಡಿ ಏನೆಲ್ಲ ಲಾಭಗಳನ್ನು ಪಡೆಯಬಹುದು ಎಂಬುದು ನಾವು ನಿಮಗೆ ತಿಳಿಸ್ತೀವಿ.

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಹೊಸ ವರ್ಷದ ಆರಂಭದ ದಿನ ರಾಷ್ಟ್ರದ ಪ್ರಜೆಗಳಿಗೆ ಶುಭಾಶಯ ಹೇಳುವ ವೇಳೆ ಬಡವರಿಗೆ ಕಡಿಮೆ ದರದಲ್ಲಿ ಮನೆ ನೀಡುವ ನಿರ್ಧಾರವನ್ನು ಪ್ರಕಟಿಸಿದ್ದರು. ಪ್ರಧಾನಿಗಳ ನಿರ್ಧಾರದ ಬೆನ್ನ ಹಿಂದೆಯೇ ರಾಷ್ಟ್ರೀಕೃತ ಬ್ಯಾಂಕುಗಳು, ಗೃಹ ಸಾಲದ ಮೇಲಿನ ಬಡ್ಡಿ ದರವನ್ನು ಕಡಿಮೆ ಮಾಡುವುದಾಗಿ ಘೋಷಣೆ ಹೊರಡಿಸಿದ್ದವು. ಇದರಿಂದ ಬಡವರು ಕಡಿಮೆ ಹಣದಲ್ಲಿ ಮನೆ ನಿರ್ಮಿಸಲು ಮನೆ ಕಟ್ಟಿಸುವ ಕನಸು ಸಾಕಾರವಾಗುವಂತಿದೆ.

ಈ ಯೋಜನೆಯ ಸಬ್ಸಿಡಿಯ ಲಾಭವನ್ನು ವಾರ್ಷಿಕ ಆದಾಯ 3 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿದ್ದು, ಆರ್ಥಿಕವಾಗಿ ತೀರಾ ಹಿಂದುಳಿದ ವರ್ಗದ ಅಡಿಯಲ್ಲಿ ಬರುವ ಹಾಗೂ ವಾರ್ಷಿಕವಾಗಿ 6 ಲಕ್ಷಕ್ಕಿಂತ ಕಡಿಮೆ ಆದಾಯ ಇರುವ ಗುಂಪಿನಲ್ಲಿ ಬರುವವರು ಪ್ರಧಾನ ಮಂತ್ರಿ ಅವಾಸ ಯೋಜನೆಯ ಸೌಲಭ್ಯವನ್ನು ಪಡೆಯಬಹುದು. ಅವಾಸ ಯೋಜನೆಯ ಸೌಲಭ್ಯ ಪಡೆಯಲು ನೀವು ಪಕ್ಕ ಸ್ವಂತ ಮನೆಯನ್ನು ಹೊಂದಿರಬಾರದು ಎಂಬುದು ಎರಡನೇ ಪ್ರಮುಖ ಮಾನದಂಡವಾಗಿದೆ. ಇನ್ನು ಈ ವರ್ಗದ ಅಡಿಯಲ್ಲಿ ದೇಶದ ಲಕ್ಷಾಂತರ ಜನರು ಬರುವುದರಿಂದ ತುಂಬಾ ಕುಟುಂಬಗಳಿಗೆ ಸ್ವಂತ ಮನೆ ಕಟ್ಟಿಕೊಳ್ಳುವ ಸೌಲಭ್ಯ ಸಿಗಲಿದೆ.

ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಅವಾಸ ಯೋಜನೆಯಡಿ ಎಲ್ಲರಿಗು ಪಕ್ಕ ಮನೆ ಕಲ್ಪಿಸಲು 26 ರಾಜ್ಯಗಳ 2,508 ನಗರಗಳನ್ನು ಆಯ್ಕೆ ಮಾಡಿದೆ. ಮರುಪಾವತಿ ಅವಧಿ ಮೊದಲು 15 ವರ್ಷಗಳಾಗಿತ್ತು. ಆದರೆ ಈಗ ಇದನ್ನು 20 ವರ್ಷಗಳಿಗೆ ಹೆಚ್ಚಿಸಲಾಗಿದೆ. 20 ವರ್ಷಗಳ ಕಾಲಾವಧಿ ಸಾಲದ ಮೇಲೆ ಶೇ. 9ರ ಬಡ್ಡಿದರದಲ್ಲಿ ಶೇ. 3ರ ಸಬ್ಸಿಡಿ ದರದಲ್ಲಿ ಒಟ್ಟು ರೂ. 2.4 ಲಕ್ಷ ಸಬ್ಸಿಡಿ ಗಳಿಸಬಹುದು. ಅಂದರೆ ಪ್ರತಿ ತಿಂಗಳ ಕಂತುಗಳಲ್ಲಿ ಸರಾಸರಿ ರೂ. 2,200 ರವರೆಗೆ ಕಡಿತವಾಗುತ್ತದೆ.

ಈ ಯೋಜನೆಯಡಿ ಎಲ್ಲರಿಗು ಪಕ್ಕ ಮನೆ ಕಲ್ಪಿಸಲು 26 ರಾಜ್ಯಗಳ 2,508 ನಗರಗಳನ್ನು ಆಯ್ಕೆ ಮಾಡಲಾಗಿದೆ. 7 ವರ್ಷಗಳ ಕಾಲಮಿತಿಯಲ್ಲಿ 2 ಕೋಟಿ ಮನೆಗಳನ್ನು ಕಟ್ಟಿಸುವ ಯೋಜನೆಯನ್ನು ಮೋದಿ ಸರ್ಕಾರ ಹಾಕಿಕೊಂಡಿದೆ. ಎಲ್ಲರ ಜೊತೆ ಎಲ್ಲ ವಿಕಾಸ ಎಂಬ ಮೋದಿಯರ ಹೇಳಿಕೆ ಬರಿ ಮಾತಿನಲ್ಲಿ ಮಾತ್ರ ಇದೆ ಎಂದು ಹೇಳುತ್ತಿದ್ದ ವಿರೋಧ ಪಕ್ಷಗಳಿಗೆ ಈ ಯೋಜನೆಯಿಂದ ಬಾರಿ ಮುಖಭಂಗವಾದಂತಾಗಿದೆ.

ಒಟ್ಟಿನಲ್ಲಿ ಡಿಜಿಟಲ್ ಇಂಡಿಯಾ, ಮೇಕ್ ಇನ್ ಇಂಡಿಯಾ, ಸುಕನ್ಯಾ ಸಮೃದ್ಧಿ, ಜನ್ ಧನ್, PMSBY, ಪಿಂಚಣಿ ಯೋಜನೆಯಂತಹ ನೂರಾರು ಯೋಜನೆಗಳ ಮೂಲಕ ಪ್ರಧಾನಿ ಎಲ್ಲ ವರ್ಗದವರ ಕಲ್ಯಾಣಕ್ಕೆ ಮುಂದಾಗಿದ್ದಾರೆ….!