ಕಿಡ್ನಿಯಲ್ಲಿ ಉತ್ಪತ್ತಿಯಾಗುವ ಕಲ್ಲುಗಳಿಗೆ ಈ ಡಾಕ್ಟರ್ ಬಳಿಯಿದೆ ರಾಮಬಾಣದಂತಹ ಔಷಧಿ!!

0
645

ಪುತ್ತೂರು ತಾಲೂಕು ಇರ್ದೆ ಗ್ರಾಮದ ಗವ್ಯಸಿದ್ಧ ಡಾ||ಶಶಿಶೇಖರ ಭಟ್ಟರ ಪರಿಚಯ ನನಗೆ ಬಹಳ ವರ್ಷಗಳದ್ದು. ಅವರು ತಮ್ಮ ಪಂಚಗವ್ಯ ಚಿಕಿತ್ಸಾ ಪದ್ಧತಿಯಿಂದ ಕಿಡ್ನಿ, ಹಾರ್ಟ್ ಪ್ರಾಬ್ಲೆಮ್, ಅಸ್ತಮಾ, ಮಧುಮೇಹ, ಪೈಲ್ಸ್, ಸಂದಿವಾತ, ಚರ್ಮರೋಗ, ಕ್ಯಾನ್ಸರ್ ಹೀಗೇ ಅನೇಕ ಅಸಾಧ್ಯ ರೋಗಗಳ ಚಿಕಿತ್ಸೆಗಳ ಮೂಲಕ ಪರಿಚಿತರು. ಇತ್ತೀಚೆಗೆ ದೇಶೀ ಹಸುವಿನ ಸಗಣಿಯಿಂದ “ಗೋರಂಗ್” ಎಂಬ ಗೋಡೆಗೆ ಬಳಿಯುವ ವಿಷರಹಿತ ರೇಡಿಯೇಷನ್ ಮತ್ತು ಉಷ್ಣತೆಯನ್ನು ತೆಡೆಯುವ ಬಣ್ಣಗಳನ್ನು ಸಂಶೋದಿಸಿದವರು.

Also read: ಕಿಡ್ನಿ ಆರೋಗ್ಯವಾಗಿರಬೇಕೆಂದು ಬಯಸುತ್ತೀರಾ? ಹಾಗಾದರೆ ಈ ಕೆಳಗಿನ ಸಲಹೆಗಳನ್ನು ತಪ್ಪದೆ ಪಾಲಿಸಿ..!

ಇವರು ಮಾಡುವ ಕಿಡ್ನಿಸ್ಟೋನಿನ ಚಿಕಿತ್ಸೆಯು ಅತ್ಯಂತ ಪರಿಣಾಮಕಾರಿಯೂ, ಅವರೇ ಹೇಳುವ ಪ್ರಕಾರ ಶೇಕಡಾ 90ರಷ್ಟು ಜನರಿಗೆ ರಿಪಿಟೀಷನ್ ಇಲ್ಲದ್ದು ಆಗಿದೆ. ನನಗೆ ತಿಳಿದ ಮಟ್ಟಿಗೆ ಸಾಕಷ್ಟು ಜನರಿಗೆ 3ರಿಂದ4 ತಿಂಗಳ ಚಿಕಿತ್ಸೆಯಲ್ಲಿ ಕಿಡ್ನಿಸ್ಟೋನ್ ದೂರವಾಗುತ್ತದೆ. ಆದರೆ ಡಾಕ್ಟರ್ ಪ್ರಕಾರ ಸುಮಾರು 30% ಜನರಿಗೆ ತೀರಾ ಗಟ್ಟಿ ಸ್ಟೋನ್ ಆಗುವುದರಿಂದ ಅವರಿಗಷ್ಟೇ ಹೆಚ್ಚಿನ ಸಮಯದ ಚಿಕಿತ್ಸೆ ಬೇಕಾಗುತ್ತದೆ. ತಾಳ್ಮೆ ಇದ್ದವರಿಗಷ್ಟೇ ಚಿಕಿತ್ಸೆ ಎನ್ನುತ್ತಾರೆ.

ಕಿಡ್ನಿಗಾಗಲೀ ಶರೀರದ ಇತರ ವ್ಯವಸ್ಥೆಗಳಿಗೆ ಯಾವುದೇ ಸೈಡ್ ಎಫೆಕ್ಟ್ ಇಲ್ಲದ ಇವರ ಚಿಕಿತ್ಸೆ, ಪ್ರತಿ 2 ತಿಂಗಳಿನ 3 ಹಂತದಲ್ಲಿರುತ್ತದೆ. ಹೆಚ್ಚಿನವರಿಗೆ 1 ಯಾ 2 ಹಂತದ ಚಿಕಿತ್ಸೆ ಸಾಕಾಗುತ್ತದೆ. ತಮ್ಮಲ್ಲಿ ಬಂದಂತಹ ರೋಗಿಗಳನ್ನು “ನಾಡಿ ಪರೀಕ್ಷೆ” ಯ ಮೂಲಕ ಪರೀಕ್ಷಿಸಿ ಉಪಚರಿಸುವ ಇವರು ಪ್ರತಿಯೊಬ್ಬ ರೋಗಿಗೂ ರೋಗದ ಬಗ್ಗೆ ಮತ್ತು ಸ್ವಸ್ಥ ಜೀವನವನ್ನು ನಡೆಸುವ ಬಗ್ಗೆ ಸುಮಾರು ಒಂದು ಗಂಟೆಯ ಕಾಲ ಪಾಠ ಮಾಡುತ್ತಾರೆ. ಅದು ಪ್ರತಿಯೊಬ್ಬರ ಜೀವನದಲ್ಲಿ ಅಳವಡಿಸಿಕೊಂಡರೆ ಖಂಡಿತವಾಗಿಯೂ ರೋಗರಹಿತ ಸ್ವಸ್ಥ ಜೀವನವನ್ನು ನಡೆಸಲು ರಹದಾರಿಯಾಗಿರುತ್ತದೆ.

Also read: ಹಾರ್ಟ್ ಆಪರೇಷನ್ ಆದರೂ, ಕಿಡ್ನಿ ಟ್ರಾನ್ಸ್ ಪ್ಲಾಂಟೇಷನ್ ಆದರೂ,…ಇಲ್ಲಿ ಎಲ್ಲಾ ಉಚಿತ…!

ಯಾವುದೇ ಅಸಾಧ್ಯ ರೋಗಗಳಿಗೆ ಪ್ರಾಚೀನ ಭಾರತೀಯ ಚಿಕಿತ್ಸಾ ಪದ್ಧತಿಯ ಮೂಲಕ ಚಿಕಿತ್ಸೆ ನೀಡುವ ಇವರು ಹೇಳುವ ಪ್ರಕಾರ, ಇವತ್ತಿನ ಕಾಲಘಟ್ಟದಲ್ಲಿ ಶೇಕಡಾ 80ರಷ್ಟು ಕಾಯಿಲೆಗಳು ನಮ್ಮ ಜೀವನ ಪದ್ಧತಿಯಿಂದಾಗಿ ಬಂದಂತದ್ದು. ದಿನಚರಿಯನ್ನು ಸುಧಾರಿಸಿಕೊಂಡರೆ ಸಾಕು 80% ರೋಗಗಳು ಬರಲಾರವು 20% ರೋಗಗಳು ಆಗಂತಕ(ಆಕ್ಸಿಡೆಂಟಲ್), ಅದಕ್ಕೆ ಜಾಗರೂಕತೆ ಬೇಕು ಎನ್ನುತ್ತಾರೆ.

ಕಿಡ್ನಿಸ್ಟೋನಿನ ಸೈಜ಼್ ಮೇಲೆ ಚಿಕಿತ್ಸಾ ಸಮಯ ನಿರ್ಧರಿತವಾಗುವುದಿಲ್ಲ, ಅದರ ಗಟ್ಟಿತನ ಎಷ್ಟಿದೆ ಎಂಬುದರ ಮೇಲೆ ತಿಂಗಳುಗಟ್ಟಲೆ ಚಿಕಿತ್ಸೆಬೇಕು ಎನ್ನುವ ವೈದ್ಯರು, 60mmವರೆಗಿನ ಸ್ಟೋನ್ ಕೇವಲ 6ತಿಂಗಳಲ್ಲಿ ಗುಣವಾಗಿದ್ದು ಮತ್ತು 4mmನ ಸ್ಟೋನಿಗೆ ಒಂದು ವರ್ಷ ಚಿಕಿತ್ಸೆ ನೀಡಿದ್ದನ್ನು ನೆನಪಿಸಿಕೊಳ್ಳುತ್ತಾರೆ. ಯಾವುದೇ ಗಾತ್ರದ ಕಿಡ್ನಿಸ್ಟೋನಾದರೂ ಅಡ್ಡಪರಿಣಾಮಗಳಿಲ್ಲದೆಯೇ ಪರಿಣಾಮಕಾರಿಯಾಗಿ ಗುಣಪಡಿಸಿಕೊಳ್ಳಬಹುದಾದ ಚಿಕಿತ್ಸೆ ಡಾ||ಶಶಿಶೇಖರ ಭಟ್ಟರದ್ದು.

Also read: ಈ ಸುಲಭ ಮನೆಮದ್ದನ್ನು ಪಾಲಿಸಿ, ಇದು ನಿಮ್ಮ ಕಿಡ್ನಿ ಕಲ್ಲುಗಳನ್ನು ಒಂದು ವಾರದೊಳಗೆ ಕರಗಿಸುತ್ತೆ!!

ಇಂತಿ ನಿಮ್ಮ
ರಂಜಿತ್ ಪುತ್ತೂರು,

ranjuinputtur@gmail.com

ಡಾಕ್ಟರ್ ವಿಳಾಸ ಗವ್ಯಸಿದ್ದ ಡಾ| ಶಶಿಶೇಖರ ಭಟ್
ಶ್ರೀ ಸುರಭಿ ಪಂಚಗವ್ಯಶಾಲಾ, ಇರ್ದೆ ಹಾಲಿನ ಡಿಪೋದ ಹತ್ತಿರ,
ಗ್ರಾಮ- ಇರ್ದೆ, ತಾಲೂಕು- ಪುತ್ತೂರು,
ದಕ್ಷಿಣಕನ್ನಡ, ಕರ್ನಾಟಕ.
ಮೊ:9448960385 ಬೆಳಿಗ್ಗೆ 9 ರಿಂದ ಸಂಜ 5ರವರೆಗೆ
9448239525 ಸಂಜೆ 7 ರಿಂದ 10
ಮುಂಚಿತವಾಗಿ ಅಪಾಯಿಂಟ್ಮೆಂಟ್ ಫೋನ್ ಮೂಲಕ ಪಡೆಯಿರಿ.

TheNewsism.com advises it’s readers to consider the medical risks when considering alternative medicine. TheNewsism doesn’t own the responsibility of any medical negligence hereinafter.. TheNewsism.com also clearly states that this is a paid endorsement and TheNewsism.com would neither endorse nor have independently verified the claims on the above piece.