ನವರಾತ್ರಿ ದುರ್ಗಾ ಪೂಜೆಯಲ್ಲಿ ಮುಸ್ಲಿಂ ಅಜಾನ್; ಪೂಜಾ ಸಮಿತಿ ಈ ನಡೆಗೆ ಭಾರಿ ವಿರೋಧ, ಹಿಂದೂಗಳ ಹಬ್ಬದಲ್ಲಿ ಮುಸ್ಲಿಂ ಪ್ರಾರ್ಥನೆ ಸರಿನಾ??

0
180

ದೇಶದಲ್ಲಿ ಅದ್ದೂರಿಯಾಗಿ ಆಚರಣೆ ಮಾಡುವ ನವರಾತ್ರಿ ಹಿಂದೂಗಳ ಪವಿತ್ರ ಹಬ್ಬವಾಗಿದೆ. ಅದರಂತೆ ದುರ್ಗಾ ದೇವಿಯ ವಿಗ್ರಹವನ್ನು ಒಂಬತ್ತು ದಿನಗಳ ಕಾಲ ಮನೆಗಳಲ್ಲಿ ಮತ್ತು ವಿವಿಧ ಸಾರ್ವಜನಿಕ ಸ್ಥಳಗಳಲ್ಲಿ ಸ್ಥಾಪಿಸಿ ಪೂಜೆ ಸಲ್ಲಿಸುವುದು ಒಂದು ವಿಶೇಷತೆ ಆಗಿದ್ದು, ಪಶ್ಚಿಮ ಬಂಗಾಳದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ದೇವಿಯನ್ನು ಸ್ಥಾಪಿಸಿ ಪೂಜೆ ಸಲ್ಲಿಸುವ ಪದ್ಧತಿ ಹೆಚ್ಚಾಗಿ ಕಂಡು ಬರುತ್ತೆ, ಆದರೆ ದುರ್ಗಾ ದೇವಿ ಸ್ಥಾಪಿಸಿದ ಪೆಂಡಾಲ್-ನಲ್ಲಿ ಮುಸ್ಲಿಂ ಅವರ ಅಜಾನ್ ಮಾಡಿದ್ದು ಭಾರಿ ವಿವಾದಕ್ಕೆ ಕಾರಣವಾಗಿದೆ.

ದುರ್ಗಾ ಪೂಜೆಯ ಪೆಂಡಾಲ್‍ನಲ್ಲಿ ಅಜಾನ್?

ಕೋಲ್ಕತ್ತಾದ ಬೆಲಿಯಾಘಾಟಾ ಪ್ರದೇಶದಲ್ಲಿ ನವರಾತ್ರಿಯ ಸಂಭ್ರಮಾಚರಣೆಯಲ್ಲಿ ಅಜಾನ್ ಮಾಡಿದ್ದಾರೆ. ಇದು ಪಶ್ಚಿಮ ಬಂಗಾಳದಲ್ಲಿ ಶಾಂತಿಗೆ ಭಂಗ ತರುವ ಕೆಲಸವನ್ನು ಮಾಡುತ್ತಿದ್ದಾರೆ. ಹಿಂದೂ ಧರ್ಮದ ಭಾವನೆಗಳಿಗೆ ಧಕ್ಕೆ ತರುತ್ತಿದ್ದಾರೆ ಎಂದು ಆರೋಪಿಸಿ 10 ಜನರ ವಿರುದ್ಧ ಸ್ಥಳೀಯ ವಕೀಲ ಸಾಂತನು ಸಿಂಘಾ ಅವರು ದೂರು ಸಲ್ಲಿಸಿದ್ದು ದುರ್ಗಾ ಪೂಜಾ ಪೆಂಡಲ್‍ನಲ್ಲಿ ಅಜಾನ್ ನುಡಿಸುವ ವಿಡಿಯೋವನ್ನು ವಿಶ್ವ ಹಿಂದೂ ಪರಿಷತ್(ವಿಎಚ್‍ಪಿ) ಸದಸ್ಯರು ನನಗೆ ರವಾನಿಸಿದ್ದಾರೆ ಎಂದು ಸಿಂಘಾ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ. ಆದರೆ ಪೂಜಾ ಸಮಿತಿಯು ಈ ಕುರಿತು ಸ್ಪಷ್ಟಪಡಿಸಿದ್ದು, ಜಾತ್ಯಾತೀತತೆಯನ್ನು ಉತ್ತೇಜಿಸುವುದು ನಮ್ಮ ಉದ್ದೇಶವಾಗಿತ್ತು ಎಂದು ಹೇಳಿಕೊಂಡಿದೆ.

ಬೆಲಿಯಾಘಾಟಾ 33 ಪ್ಯಾಲಿ ಕ್ಲಬ್‍ನ ಕಾರ್ಯದರ್ಶಿ ಈ ಕುರಿತು ತಮ್ಮ ಅಭಿಪ್ರಾಯ ತಿಳಿಸಿದ್ದು, ನಾವು ಒಟ್ಟಿಗೆ ಇದ್ದೇವೆ, ಒಬ್ಬಂಟಿಯಾಗಿಯಲ್ಲ ಹೀಗಾಗಿ ಆಚರಣೆಯ ಸಮಯದಲ್ಲಿ ಅಜಾನ್ ನುಡಿಸಿದ್ದೇವೆ. ಅಜಾನ್ ಮಾತ್ರವಲ್ಲ ನಾವು ಚರ್ಚ್, ದೇವಾಲಯ ಮತ್ತು ಮಸೀದಿಯ ಮಾದರಿಗಳನ್ನೂ ಬಳಸಿದ್ದೇವೆ ಹಾಗೂ ಅವುಗಳ ಚಿಹ್ನೆಯನ್ನೂ ಬಳಸಿದ್ದೇವೆ. ಮಾನವೀಯತೆಯು ಎಲ್ಲ ಧರ್ಮಗಳಿಗಿಂತ ಉನ್ನತವಾದದ್ದು ಎಂಬುದನ್ನು ತೋರಿಸುವುದು ನಮ್ಮ ಉದ್ದೇಶವಾಗಿದೆ. ಅಲ್ಲದೆ ಈ ವಿಷಯವನ್ನು ಅನಗತ್ಯವಾಗಿ ರಾಜಕೀಯಗೊಳಿಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಪೂಜಾ ಸಮಿತಿಯ ಅಧ್ಯಕ್ಷರು ಈ ಕುರಿತು ವಿವರಿಸಿ, ನಾವೆಲ್ಲರೂ ಒಂದೇ ಎಂದು ನಾವು ನಂಬಿದ್ದೇವೆ. ಹುಟ್ಟಿದಾಗ ಯಾವುದೇ ಪ್ರತ್ಯೇಕತೆ ಇಲ್ಲ, ರಕ್ತದ ಬಣ್ಣದಲ್ಲಿ ವ್ಯತ್ಯಾಸವಿಲ್ಲ, ಹೀಗಿರುವಾಗ ಏಕೆ ಭೇದ ಭಾವ, ಎಲ್ಲ ಧರ್ಮಗಳು ನಮ್ಮ ಪ್ರಬಲ ದೇಶದ ಭಾಗವಾಗಿವೆ. ಇದು ಕೋಮು ಸೌಹಾರ್ದತೆಯ ಪ್ರತಿಬಿಂಬವಾಗಿದೆ, ನಾವು ಒಗ್ಗಟ್ಟಿನ ಪರವಾಗಿ ನಿಲ್ಲುತ್ತೇವೆ ಎಂದು ತಿಳಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪರ ವಿರೋಧ ಚರ್ಚೆಗಳು ನಡೆಯುತ್ತಿದ್ದು, ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ಕೆಲವರು ‘ಮಂದಿರ್ ಕಟ್ಟುತ್ತೇವೆ’ ಎಂದು ಕೂಗುತ್ತಿದ್ದಾರೆ. ಆದರೆ ಈ ಪೆಂಡಾಲ್‍ಗೆ ಭೇಟಿ ನೀಡಿದ ಕೆಲವರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಈ ವಿಚಾರವಾಗಿ ಹಿಂದೂ ಜಾಗರಣ್ ಮಂಚ್ ದಕ್ಷಿಣ ಬಂಗಾಳದ ಪ್ರಚಾರಕ್ ಪ್ರಮುಖ್ ವಿವೇಕ್ ಸಿಂಗ್ ಈ ಕುರಿತು ಪ್ರತಿಕ್ರಿಯಿಸಿ, ಮಸೀದಿಗಳಲ್ಲಿ ಅಥವಾ ಈದ್ ಸಮಯದಲ್ಲಿ ದುರ್ಗಾ ಸಪ್ತಸ್ತ್ರುತಿ ಪಾಥ್ ಅಥವಾ ಚಂಡಿ ಪಾಥ್ ಹಾಡುವುದನ್ನು ಕೇಳಿದ್ದೀರಾ, ಕ್ರಿಸ್‍ಮಸ್ ಸಮಯದಲ್ಲಿ ಚರ್ಚ್ ನಲ್ಲಿ ಹನುಮಾನ್ ಚಾಲೀಸಾ ಹಾಡುವುದನ್ನು ನೀವು ಎಂದಾದರೂ ಕೇಳಿದ್ದೀರಾ, ಜಾತ್ಯಾತೀತತೆಯ ಜವಾಬ್ದಾರಿ ಕೇವಲ ಹಿಂದೂಗಳ ಮೇಲೆ ಮಾತ್ರವಿದೆಯೇ ಎಂದು ಪ್ರಶ್ನಿಸಿದ್ದಾರೆ. ಸಂಘಟನೆಯ ವಿರುದ್ಧ ಈಗಾಗಲೇ ಫುಲ್ಬಗನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಈ ಕುರಿತು ಕ್ರಮ ಕೈಗೊಳ್ಳದಿದ್ದಲ್ಲಿ ನಾವು ಕಾನೂನು ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಸಿದ್ದಾರೆ.