ಸಮಾಜ ಸೇವೆಯಲ್ಲಿ ಮೆಚ್ಚುಗೆಗೆ ಪಾತ್ರರಾದ ಭಾರತದ ಎರಡನೇ ಅತೀ ದೊಡ್ಡ ಶ್ರೀಮಂತ ವಿಪ್ರೋ ಸಂಸ್ಥಾಪಕ ಅಝೀಂ ಪ್ರೇಮ್ ಜಿ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ..

0
388

ವಿಪ್ರೋ ಸ್ಥಾಪಕ, ಭಾರತದ ಎರಡನೇ ಅತಿ ಶ್ರೀಮಂತ ವ್ಯಕ್ತಿಯಾಗಿರುವ ಅಝೀಂ ಪ್ರೇಮ್ ಜಿ ದಾನವಾಗಿ ನೀಡುವುದರಲ್ಲಿ ಸಮಾಜ ಸೇವೆ ಮಾಡುವುದರಲ್ಲಿ ಹೆಸರುವಾಸಿಗಿದ್ದ ಅವರು ಇನ್ನೂ ಪೂರ್ಣ ಪ್ರಮಾಣದ ಸಮಾಜ ಸೇವೆಯಲ್ಲಿ ನಿರತರಾಗಲಿದ್ದಾರೆ. ಅದಕ್ಕಾಗಿ ಸಾಫ್ಟ್ ವೇರ್ ಸೇವೆಗಳ ರಫ್ತು ಕಂಪೆನಿ ವಿಪ್ರೋದ ಕಾರ್ಯನಿರ್ವಾಹಕ ಅಧ್ಯಕ್ಷ ಹಾಗೂ ಕಾರ್ಯನಿರ್ವಹಣಾ ನಿರ್ದೇಶಕ ಹುದ್ದೆಯಿಂದ ಜುಲೈ ಮೂವತ್ತನೇ ತಾರೀಕು ನಿವೃತ್ತರಾಗಲಿದ್ದಾರೆ ಎಂದು ಕಂಪೆನಿ ತಿಳಿಸಿದೆ.

Also read: ವಿಶೇಷ ಚೇತನನೊಬ್ಬ ಯಾರ ಮುಂದೆಯೂ ಕೈ ಚಾಚದೆ ಮೂರು ಚಕ್ರಗಳ ಸೈಕಲಲ್ಲಿ ಕುಳಿತು Zomato ಫುಡ್ ಡೆಲಿವರಿ ಮಾಡುತ್ತಿರುವ ವಿಡಿಯೋ ಬಾರಿ ವೈರಲ್..

ಹೌದು ದೇಶದ ದೊಡ್ಡ ಐಟಿ ಕಂಪನಿಯ ಮಾಲೀಕ, ಶ್ರೀಮಂತ ಉದ್ಯಮಿ, ಅಜೀಂ ಪ್ರೇಮ್‍ಜಿ ವಿಪ್ರೋ ಕಂಪನಿಯಿಂದ ನಿವೃತ್ತರಾಗಲಿದ್ದು ಮುಂದಿನ ನೂತನ ಕಾರ್ಯಕಾರಿ ನಿರ್ದೇಶಕರಾಗಿ ಅಜೀಂ ಪ್ರೇಮ್ ಜಿ ಪುತ್ರ ಮುಖ್ಯ ಕಾರ್ಯತಂತ್ರ ಅಧಿಕಾರಿ ಮತ್ತು ಮಂಡಳಿಯ ಸದಸ್ಯರಾದ ರಷೀದ್ ಪ್ರೇಮ್ ಜಿ ತಂದೆ ನಂತರ ಸಂಸ್ಥೆಯ ಕಾರ್ಯನಿರ್ವಾಹಕ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಈ ಕುರಿತು ಮಾತನಾಡಿದ ಅವರು ದೀರ್ಘವಾದ ಮತ್ತು ಸಂತೃಪ್ತ ಪಯಾಣ ನನ್ನದಾಗಿತ್ತು. ಮುಂದೆ ಸಾಮಾಜ ಸೇವೆ ಹೆಚ್ಚಿನ ಗಮನ ಹರಿಸುತ್ತೇನೆ. ರಿಷದ್ ಅವರ ನಾಯಕತ್ವದಲ್ಲಿ ವಿಪ್ರೋ ಕಂಪನಿ ಮತ್ತಷ್ಟು ಬೆಳವಣಿಗೆಯಾಗುತ್ತದೆ ಎನ್ನುವ ನಂಬಿಕೆ ಇದೆ ಎಂದು ಅಜೀಂ ಪ್ರೇಮ್‍ಜೀ ತಿಳಿಸಿದ್ದಾರೆ.

ರಾಜೀನಾಮೆ ನಂತರ ಪ್ರೇಮ್ ಜೀ ಅವರು ಅಧಿಕಾರೇತರ ನಿರ್ದೇಶಕ ಹಾಗೂ ಸ್ಥಾಪಕ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ. ಜುಲೈ 31, 2019ರಿಂದ 5 ವರ್ಷಗಳ ಅವಧಿಗೆ ಪ್ರೇಮ್ ಜೀ ಅವರನ್ನು ಅಧಿಕಾರೇತರ ನಿರ್ದೇಶಕರಾಗಿ ನೇಮಕ ಮಾಡಲು ಈಗಾಗಲೇ ಆಡಳಿತ ಮಂಡಳಿ ಒಪ್ಪಿಗೆ ಸೂಚಿಸಿದೆ. ಅಜೀಂ ಅವರ ಮಗ- ಪೂರ್ಣಾವಧಿ ನಿರ್ದೇಶಕರಾಗಿರುವ ರಿಷದ್ ಪ್ರೇಮ್ ಜೀ ಕಂಪೆನಿಯ ಹೊಸ ಕಾರ್ಯನಿರ್ವಾಹಕ ಅಧ್ಯಕ್ಷರಾಗಲಿದ್ದಾರೆ.

Also read: ಐದು ಸಾವಿರ ರೂಪಾಯಿಯಲ್ಲಿ ಗ್ಯಾಸ್ ಏಜನ್ಸಿ ಶುರು ಮಾಡಿದ್ದ ಬಿಸಿನೆಸ್ ಈಗ ನೂರಾರು ಕೋಟಿ ವ್ಯವಹಾರ ಮಾಡುವ ಬಿಸಿನೆಸ್ ಆಗಿ ಬೆಳೆದಿದೆ!!

ಸಮಾಜಕ್ಕೆ ಅಜೀಂ ಪ್ರೇಮ್‍ಜೀ ಕೊಡುಗೆ?

ಎಷ್ಟೋ ಶ್ರೀಮಂತರು ತಮ್ಮ ಆಸ್ತಿ ಕೊಳೆತುಹೋದರು ಅದರ ಒಂದು ಎಳೆಯನ್ನು ಯಾರಿಗೂ ಬಿಟ್ಟುಕೊಡಲು ಒಪುವುದಿಲ್ಲ, ಆದರೆ ಸದಾ ಸಮಾಜದ ಮೇಲೆ ಕಾಳಜಿಯಿರುವ ಪ್ರೇಮ್‍ಜೀ ಹೆಸರುವಾಸಿಯಾಗಿದ್ದಾರೆ. ಹೌದು ಇವರು ಸಮಾಜಕ್ಕಾಗಿ ನೀಡುತ್ತಿರುವ ಕೊಡುಗೆ ಜನರಿಂದ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ. ಇತ್ತೀಚೆಗಷ್ಟೇ ಕೊಡುಗೈ ದಾನಿಯೆಂದೇ ಖ್ಯಾತಿಯಾಗಿದ್ದ ಬಿಲ್ ಗೇಟ್ಸ್ ಕೂಡ ಟ್ವಿಟರ್ ಮೂಲಕ ಪ್ರೇಮ್ ಜಿ ಅವರನ್ನು ಹೊಗಳಿದ್ದಾರೆ. “ಸಮಾಜ ಕಲ್ಯಾಣ ಚಟುವಟಿಕೆಗಳಿಗೆ ಅವರು ತೋರಿರುವ ಸತತ ಬದ್ಧತೆ ನನಗೆ ಸ್ಫೂರ್ತಿ ನೀಡಿದೆ. ಅವರ ಇತ್ತೀಚಿಗಿನ ಕೊಡುಗೆ ಅಮೋಘ ಪರಿಣಾಮ ಬೀರಲಿದೆ”ಟ್ವೀಟ್ ಮಾಡಿದ್ದರು.

ಶೇ 34ರಷ್ಟು ಶೇರುಗಳನ್ನು ಸಮಾಜ ಸೇವೆಗೆ ಕೊಡುಗೆ

Also read: ಪರೀಕ್ಷೆಯಲ್ಲಿ ಫೇಲ್ ಆಗಿದಕ್ಕೆ ವಿಷ ಸೇವನೆಗೆ ಮುಂದಾಗಿದ್ದ ಯುವಕ, ಮುಂದೆ ಕಷ್ಟ ಪಟ್ಟು ಅದೇ ವಿಷಯದಲ್ಲಿ ಕ್ಲಾಸ್-ಗೆ ಟಾಪರ್ ಆದ ಕಥೆ ಎಲ್ಲರಿಗೂ ಮಾದರಿ!!

ದೇಶ ವಿದೇಶದಲ್ಲಿ ಹೆಸರು ಪಡೆದಿರುವ ಅಜೀಂ ಪ್ರೇಮ್‍ಜೀ ಕೆಲ ದಿನಗಳ ಹಿಂದೆಯಷ್ಟೇ ತಮ್ಮ ಖಾಸಗಿ ಸಂಪತ್ತಿನ ಹೆಚ್ಚಿನ ಭಾಗವನ್ನು ಅಝೀಂ ಪ್ರೇಮ್ ಜಿ ಫೌಂಡೇಶನ್​​ನ ದತ್ತಿ ನಿಧಿಗೆ ಸಮರ್ಪಿಸಿದ್ದರು. ಅವರ ಒಡೆತನದ ಹಲವು ಸಂಸ್ಥೆಗಳ ನಿಯಂತ್ರಣದಲ್ಲಿರುವ ವಿಪ್ರೋ ಕಂಪನಿಯ 52,750 ಕೋಟಿ ರೂ. ಮೌಲ್ಯದ ಶೇ 34ರಷ್ಟು ಶೇರುಗಳನ್ನು ಸಮಾಜಕ್ಕೆ ಉಪಯುಕ್ತ ಕಾರ್ಯಗಳಿಗೆ ಅವರು ಮುಡಿಪಾಗಿಸಿದ್ದಾರೆ. ತಾವು ಈ ಹಿಂದೆಯೇ ದಾನವಾಗಿ ನೀಡಿರುವ ವಿಪ್ರೋ ಶೇರುಗಳು ಹಾಗೂ ಇತರ ಸಂಪತ್ತಿನ ಹೊರತಾಗಿ ಅವರು ಈ ಕೊಡುಗೆ ನೀಡಿದ್ದಾರೆ. ಇದರೊಂದಿಗೆ ಅಝೀಂ ಪ್ರೇಮ್ ಜಿ ತಮ್ಮ ಫೌಂಡೇಶನ್ನಿಗೆ ಒಟ್ಟು 1.45 ಲಕ್ಷ ಕೋಟಿ ರೂ. ದಾನ ಮಾಡಿದಂತಾಗಿದ್ದು, ವಿಪ್ರೋದ ಒಟ್ಟು ಶೇ 67ರಷ್ಟು ಶೇರುಗಳನ್ನೂ ಸಮಾಜಕ್ಕೆ ಕೊಡುಗೆಯಾಗಿ ನೀಡಿದ್ದಾರೆ.