ತಪ್ಪದೇ ಓದಿ: ಕಡು ಬಡತನದಿಂದ ಅತ್ಯಂತ ಶ್ರೀಮಂತ ಕನ್ನಡಿಗ ಎಂಬ ಹೆಗ್ಗಳಿಕೆಗೆ ಪಾತ್ರರಾದ ಬಿ. ಆರ್. ಶೆಟ್ಟಿಯವರ ಸ್ಪೂರ್ತಿದಾಯಕ ಕಥೆ…

0
2561

ಇವರ ಪೂರ್ಣ ಹೆಸರು ಡಾ. ಬಾವಗುತ್ತು ರಘುರಾಮ ಶೆಟ್ಟಿ. ಸಂಯುಕ್ತ ಅರಬ್ ಎಮಿರೇಟ್ಸ್ ರಾಷ್ಟ್ರದ, ಅಬುಧಾಬಿ ನಗರ’ದಲ್ಲಿ ನೆಲೆಸಿರುವ ಮಂಗಳೂರು ಮೂಲದ ಕನ್ನಡಿಗ. ಉಡುಪಿಜಿಲ್ಲೆಯ ‘ಕಾಪು’ ಎಂಬ ಗ್ರಾಮದಲ್ಲಿ ಬಡಕುಟುಂಬದಲ್ಲಿ ಜನಿಸಿದ ಶೆಟ್ಟಿ ಅವರು 1973 ರಲ್ಲಿ ಉದ್ಯೋಗ ಅರಸುತ್ತ ಸಂಯುಕ್ತ ಅರಬ್‌ ರಾಷ್ಟ್ರದ ಅಬು ದಾಭಿಗೆ ದುಡಿಮೆಗೆಂದು ಹೋದವರು. ಅಲ್ಲಿ ಕೇವಲ 10*12 ಅಡಿ ವಿಸ್ತೀರ್ಣದ ಕೊಠಡಿಯಲ್ಲಿ ವಾಸವಿದ್ದು ಕಠಿಣ ಪರಿಶ್ರಮದಿಂದ ಮುಂದೆ ಬಂದವರು. ಈಗ ವಿಶ್ವದ ಅತಿ ಸಿರಿವಂತ ಕನ್ನಡಿಗ ಎಂಬ ಹೆಮ್ಮೆಗೆ ಪಾತ್ರರಾಗಿದ್ದಾರೆ.

ಮೊಟ್ಟಮೊದಲು ಶೆಟ್ಟಿ ಅವರು ಅರಬ್ ನಾಡಿನಲ್ಲಿ ಕಾಲಿಟ್ಟಾಗ ಅಲ್ಲಿನ ಬಿಸಿಲಿಗೆ ಕಂಗಾಲಾಗಿ ಹೋಗಿದ್ರು. ಏನಾದ್ರೂ ಕೆಲಸ ಮಾಡೋಣ ಅಂದ್ರೆ ಅವರಿಗೆ ಅರೆಬಿಯನ್ ಭಾಷೆಯೂ ಬರುತ್ತಿರಲಿಲ್ಲ. ಆದ್ರೆ ಹಠ ಬಿಡಲಿಲ್ಲ. ‘ಕ್ಲಿನಿಕಲ್ ಫಾರ್ಮಸಿ’ ಯಲ್ಲಿ ಪದವಿ ಪಡೆದಿರುವ ಶೆಟ್ಟಿಯವರು ತನಗೆ ಗೊತ್ತಿರೋ ಕೆಲಸವನ್ನೇ ಮಾಡುತ್ತೇನೆ ಅಂತ ಹಠಕ್ಕೆ ಬಿದ್ದು ದೊಡ್ಡದೊಡ್ಡ ಮೆಡಿಸನ್ ಬಾಕ್ಸ್ ಹೊತ್ತು ಡಾಕ್ಟರ್ ಗಳಿಗೆ, ಕ್ಲಿನಿಕ್ ಗೆ ಡೆಲಿವರಿ ಮಾಡ್ತಿದ್ರು. ಸುಡುಬಿಸಿಲು ನೆತ್ತಿಸುಟ್ಟರೂ ಇವರ ಆತ್ಮವಿಶ್ವಾಸವನ್ನು ಅಲ್ಲಾಡಿಸೋಕೂ ಸಾಧ್ಯವಾಗಲಿಲ್ಲ. ಎಷ್ಟು ದಿನ ಹೀಗೇ ಕಷ್ಟಪಟ್ಟು ದುಡಿದ್ರು.

Image result for B R shetty    

1976ರಲ್ಲಿ ವೈದ್ಯೆಯಾಗಿದ್ದ ಚಂದ್ರಕುಮಾರಿನ್ನು ಮದುವೆಯಾಗಿ ಅರಬ್ ರಾಷ್ಟ್ರಕ್ಕೆ ಕರೆದುಕೊಂಡು ಬಂದರು. ಹೆಂಡತಿಯ ಜೊತೆ ಪುಟ್ಟದೊಂದು ಕ್ಲಿನಿಕ್ ಶುರುಮಾಡಿಯೇ ಬಿಟ್ರು. ಆಗ ಹುಟ್ಟಿದ್ದೇ ‘ನ್ಯೂ ಮೆಡಿಕಲ್ ಸೆಂಟರ್’ ಎಂಬ ಆಸ್ಪತ್ರೆ. ಅದರಲ್ಲೇ ಅತಿ ಶ್ರದ್ಧೆ ಹಾಗೂ ಮನಸ್ಸಿಟ್ಟು ಕೆಲಸಮಾಡಿ, ಹಂತ ಹಂತವಾಗಿ ಬೆಳೆಯುತ್ತಾ ಸಾಗಿ ಹಲವು ವೈದ್ಯಕೀಯ ಸಂಸ್ಥೆಗಳನ್ನು ಹುಟ್ಟುಹಾಕಿದರು. ಹೀಗೆ 40 ವರ್ಷಗಳಿಂದ ಅಬುಧಾಬಿ, ಯೆಮನ್, ದುಬೈ, ಕತಾರ್ ಸೇರಿದಂತೆ ಪ್ರಮುಖ ಅರಬ್ ರಾಷ್ಟ್ರಗಳ ಜನರನ್ನು ಇವರ ವೈದ್ಯಕೀಯ ಸಂಸ್ಥೆಗಳು ಆರೋಗ್ಯವಾಗಿಟ್ಟಿವೆ. ಸ್ಟಾರ್ ಹೋಟೆಲ್ ಗಳು ಅರಬ್ಬಿಯನ್ನರ ಹಸಿವು ನೀಗಿಸುತ್ತಿದೆ. ಭಾರತೀಯರ ಪಾಲಿಗೆ ಯುಎಇ ಎಕ್ಸ್ ಚೇಂಜ್ ವರವಾಗಿ ಪರಿಣಮಿಸಿದೆ ಐಟಿ ಕ್ಷೇತ್ರದಲ್ಲೂ ಶೆಟ್ಟಿ ಗ್ರೂಪ್ಸ್ ದಾಪುಗಾಲಿಡುತ್ತಿದೆ. ಹೀಗೆ ಎಷ್ಟೋ ಭಾರತೀಯರ ಪಾಲಿಗೆ ಅನ್ನದಾತ ಎನಿಸಿಕೊಂಡಿರುವ ಬಿ.ಆರ್.ಶೆಟ್ಟಿಯವರು 36,000ಕ್ಕೂ ಹೆಚ್ಚು ಜನರಿಗೆ ಕೆಲಸ ಕೊಟ್ಟಿದ್ದಾರೆ. ಸಾಮಾನ್ಯವಾಗಿ ಭಾರತೀಯರು ದುಬೈಗೆ ಕೆಲಸಕ್ಕೆ ಹೋದ್ರೆ, ಶೆಟ್ರು ಅಲ್ಲಿನವರಿಗೇ ಅವರ ಸಂಸ್ಥೆಯಲ್ಲಿ ಕೆಲಸ ಕೊಟ್ಟಿದ್ದಾರೆ.

ವಿಶ್ವದ ಅತಿ ಎತ್ತರದ ಕಟ್ಟಡ ಬುರ್ಜ್‌ ಕಲೀಫಾದ 15,000 ಚದರಅಡಿ ವಿಸ್ತೀರ್ಣದ 100ನೇ ಮಹಡಿ ಇವರಿಗೆ ಸೇರಿದೆ. ‘ಇದೇ ಕಟ್ಟಡದ ಬೇರೆ ಬೇರೆ ಮಹಡಿಗಳಲ್ಲಿ ನನ್ನ ಕೆಲವು ಫ್ಲ್ಯಾಟ್‌ಗಳಿವೆ,’ಎನ್ನುತ್ತಾರೆ ಶೆಟ್ಟಿ. ಇಷ್ಟೇ ಅಲ್ಲ, ದುಬೈ, ಅಬುಧಾಬಿ, ಲಂಡನ್‌, ಪರ್ತ್‌, ಬೆಂಗಳೂರು, ಮಂಗಳೂರು ಹಾಗೂ ಉಡುಪಿಯಲ್ಲಿ ಇವರ ವಸತಿ ಕಟ್ಟಡಗಳಿವೆ. ಶೆಟ್ಟಿ ಅವರ ಒಟ್ಟು ಆಸ್ತಿ ಮೌಲ್ಯ 18,700 ಕೋಟಿ. ನೀಮಾ ಶೆಟ್ಟಿ, ಸೀಮಾ ಶೆಟ್ಟಿ, ರೀಮಾ ಶೆಟ್ಟಿ, ಬಿನೋಯ್ ಶೆಟ್ಟಿ ಹೆಸರಿನ ನಾಲ್ಕು ಜನ ಮಕ್ಕಳಿದ್ದಾರೆ. ಇವರ ಒಬ್ಬನೇ ಮಗನ ಮದುವೆ ಇತ್ತೀಚೆಗೆ ಮಂಗಳೂರಿನಲ್ಲಿ ನಡೆಯಿತು.

ಆಳಾಗಿ ದುಡಿ, ಅರಸನಂತೆ ಉಣ್ಣು ಎಂಬ ಮಾತಿನಂತೆ ಅವತ್ತು ಪಟ್ಟ ಕಷ್ಟಕ್ಕೆ ಇವತ್ತು ಸುಖೀ ಜೀವನ ಸಾಗಿಸಿ ಎಷ್ಟೋ ಯುವಕ ಯುವತಿಯರಿಗೆ ಆದರ್ಶವಾಗಿದ್ದಾರೆ. ಪರಿಶ್ರಮದ ಜೊತೆ ಹಣೆಬರಹ ನೆಟ್ಟಗಿದ್ರೆ ಏನು ಬೇಕಾದ್ರೂ ಆಗಬಹುದು ಅನ್ನೋಕೆ ಸಾಕ್ಷಿ ಡಾ. ಬಿ.ಆರ್ ಶೆಟ್ಟಿ..!