ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿರುವ ಬಿಎಸ್ ವೈ; ಎಚ್.ಡಿ ಕುಮಾರಸ್ವಾಮಿ, ಸಿದ್ದರಾಮಯ್ಯ ಗೆ ಆಹ್ವಾನ ನೀಡಿದ್ದು ಯಾಕೆ ಗೊತ್ತಾ??

0
373

ರಾಜ್ಯದಲ್ಲಿ ಮೈತ್ರಿ ಸರ್ಕಾರ ಪತನವಾದ ಹಿನ್ನೆಲೆಯಲ್ಲಿ ಬಿ.ಎಸ್.ಯಡಿಯೂರಪ್ಪಗೆ ಸರ್ಕಾರ ರಚನೆಗೆ ಹೈಕಮಾಂಡ್ ದಿಢೀರ್ ಅನುಮತಿ ನೀಡಿದ್ದು, ಮುಂದಿನ ನಿರ್ಧಾರ ತೆಗೆದುಕೊಳ್ಳಲು ಮುಂದಾಗಿದ್ದ ಬಿಜೆಪಿ ಹೈಕಮಾಂಡ್ ಈಗ ಕೆಲ ಷರತ್ತುಗಳನ್ನು ಒಡ್ಡಿ ಸರ್ಕಾರ ರಚನೆಗೆ ಗ್ರೀನ್ ಸಿಗ್ನಲ್ ನೀಡಿದೆ. ಅದರಂತೆ ಇಂದು ಪ್ರಮಾಣ ವಚನ ಸ್ವಿಕರಿಸಲಿದ್ದು, ಪ್ರಮಾಣ ವಚನಕ್ಕೆ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ, ಹಾಗೂ ಸಿದ್ದರಾಮಯ್ಯ ಅವರಿಗೆ ಆಹ್ವಾನ ನೀಡಲಾಗಿದ್ದು, ಬಾರಿ ಚರ್ಚೆ ನಡೆಯುತ್ತಿದ್ದೆ.

Also read: ಬರಿ ದಂಡ ಹಾಕೋದ್ರಿಂದ ಬುದ್ದಿ ಕಲಿಯೋದಿಲ್ಲ ಅಂತ ಒನ್ ವೇ-ಯಲ್ಲಿ ಬೈಕ್ ಸವಾರಿ ಮಾಡಿದ 6 ಜನರಿಗೆ 2 ದಿನ ಜೈಲು ಶಿಕ್ಷೆ ನೀಡಿದ ಪೋಲಿಸ್!!

ಬಿಎಸ್ ವೈ ಪ್ರಮಾಣ ವಚನ?

ಕಾಂಗ್ರೆಸ್​ನೊಂದಿಗಿನ 14 ತಿಂಗಳ ಮೈತ್ರಿ ಸರ್ಕಾರ ಬಹುಮತ ಕಳೆದುಕೊಂಡು ಮುರಿದು ಬಿದ್ದಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಕ್ಕಾಗಿ ಈಗ ಜೆಡಿಎಸ್​ ಮತ್ತೆ ಬಿಜೆಪಿ ಜೊತೆ ಕೈ ಜೋಡಿಸಲು ಸಿದ್ಧತೆ ನಡೆಸಿದೆ ಎಂಬ ಸುದ್ದಿ ದಟ್ಟವಾಗಿದೆ. ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿಲಿರುವ ಯಡಿಯೂರಪ್ಪ ಅವರು ಮಾಜಿ ಸಭಾಪತಿ ಹಾಗೂ ವಿಧಾನ ಪರಿಷತ್ ಸದಸ್ಯರಾದ ಬಸವರಾಜ ಹೊರಟ್ಟಿಯವರಿಗೆ ಪ್ರಮಾಣ ವಚನಕ್ಕೆ ಆಗಮಿಸುವಂತೆ ಬುಲಾವ್ ನೀಡಿರುವುದು ರಾಜ್ಯ ರಾಜಕಾರಣದಲ್ಲಿ ಹೊಸ ಕುತೂಹಲ ಸೃಷ್ಟಿಸುತ್ತಿದೆ. ದೂರವಾಣಿ ಮೂಲಕ ಬಸವರಾಜ ಹೊರಟ್ಟಿಯವರನ್ನು ಸಂಪರ್ಕಿಸಿದ ಯಡಿಯೂರಪ್ಪ ಅವರು ಕೂಡಲೇ ತಮ್ಮ ಕುಟುಂಬ ಸಮೇತವಾಗಿ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಆಗಮಿಸುವಂತೆ ಆಹ್ವಾನಿಸಿದ್ದಾರೆ. ಇದೇ ಸಂದರ್ಭದಲ್ಲಿ ಪ್ರತಿಕ್ರಿಯೆ ನೀಡಿದ ಹೊರಟ್ಟಿಯವರು ಯಡಿಯೂರಪ್ಪ ಅವರಿಗೆ‌ ದೇವರು ಒಳ್ಳೆಯದು ಮಾಡಲಿ ಮುಳ್ಳಿನ ಹಾದಿಯಂತಿದೆ ನಿಮ್ಮ ಅಧಿಕಾರದ ಪ್ರಸ್ತುತ ಸ್ಥಿತಿ ಎಂದು ಸೂಚನೆ ನೀಡಿದ್ದಾರೆ. ಆದರೆ ಯಡಿಯೂರಪ್ಪ ಇಂದು ಸಂಜೆ 6 ಘಂಟೆಗೆ ಅಧಿಕಾರಕ್ಕೆರುವುದು ಖಾತರಿಯಾಗಿದೆ.

ಜೆಡಿಎಸ್ ಬಿಜೆಪಿ ಮೈತ್ರಿ?

Also read: ವಾಹನ ಮಾಲೀಕರಿಗೆ ಮತ್ತೆ ಶುರುವಾಯಿತು ಸಂಕಟ; ಡಿಸೆಂಬರ್ 1ರಿಂದ ಎಲ್ಲ ವಾಹನಗಳಿಗೆ ಫಾಸ್ಟ್‌ಟ್ಯಾಗ್ ಕಡ್ಡಾಯ..

ಅಧಿಕಾರ ಕಳೆದುಕೊಂಡ ಜೆಡಿಎಸ್-ನಲ್ಲಿ ಹೊಸ ಬೆಳವಣಿಗೆ ನಡೆದಿದೆ. ಸದ್ಯ ಅಧಿಕಾರ ಕಳೆದುಕೊಂಡಿರುವ ಜೆಡಿಎಸ್​ ಶಾಸಕರಲ್ಲಿ ಆಪರೇಷನ್​ ಕಮಲದ ಭಯ ಇನ್ನಿಲ್ಲದಂತೆ ಕಾಡಿದೆ. ಈ ಕುರಿತು ಕುಮಾರಸ್ವಾಮಿಯೊಂದಿಗೆ ಮಾತನಾಡಿರುವ ಶಾಸಕರು, ಆಪರೇಷನ್​ ಕಮಲಕ್ಕೆ ಒಳಗಾಗುವುದನ್ನು ತಪ್ಪಿಸಲು ನಾವೇ ಅವರ ಜೊತೆ ಕೈ ಜೋಡಿಸೋಣ ಎಂಬ ಸಲಹೆ ನೀಡಿದ್ದಾರೆ ಎನ್ನಲಾಗಿದೆ. ಬಿಎಸ್​ ಯಡಿಯೂರಪ್ಪ ಪ್ರಮಾಣವಚನದ ಹಿನ್ನೆಲೆ ರಾಜ್ಯದ ವಿದ್ಯಾಮಾನಗಳ ಕುರಿತ ಚರ್ಚೆಗೆ ಇಂದು ಕುಮಾರಸ್ವಾಮಿ ತಮ್ಮ ಶಾಸಕರನ್ನು ದಿಢೀರ್​ ಸಭೆಗೆ ಆಹ್ವಾನಿಸಿದ್ದರು. ಈ ವೇಳೆ ಈ ರೀತಿಯದ ಸಲಹೆಯೊಂದು ಹಂಗಾಮಿ ಸಿಎಂಗೆ ಶಾಸಕರು ನೀಡಿದ್ದಾರೆ.

ಬಹುಮತವಿಲ್ಲದೇ ಸರ್ಕಾರ ರಚನೆಗೆ ಮುಂದಾಗಿರುವ ಯಡಿಯೂರಪ್ಪ ಪ್ರಮಾಣ ವಚನ ಸ್ವೀಕಾರದ ಬಳಿಕ ಜೆಡಿಎಸ್​-ಕಾಂಗ್ರೆಸ್​ ಶಾಸಕರನ್ನು ಸೆಳೆಯಲು ಮುಂದಾಗುತ್ತಾರೆ. ಈಗಾಗಲೇ ಕೆಲ ಶಾಸಕರು ಬಿಜೆಪಿ ಸಂಪರ್ಕದಲ್ಲಿದ್ದಾರೆ. ಬಿಜೆಪಿ ಸರ್ಕಾರ ಬಂದರೆ ಕ್ಷೇತ್ರದ ಕೆಲಸವೂ ಆಗಲ್ಲ. ಈ ಹಿನ್ನೆಲೆ ನಾವು ಅವರಿಗೆ ಬಾಹ್ಯ ಬೆಂಬಲ ನೀಡುವುದು ಒಳಿತು ಎಂಬ ಸಲಹೆಯನ್ನು ಶಾಸಕರು ನೀಡಿದ್ದಾರೆ ಎನ್ನಲಾಗಿದೆ.

ಷರತ್ತು ಏನು?

Also read: ಕಸಕ್ಕೂ ಬಂತೂ ಭಾರಿ ಬೇಡಿಕೆ; ಕಸ ತಂದುಕೊಟ್ರೆ ಊಟ, ತಿಂಡಿ ಫ್ರೀ! ಅರ್ಧ ಕೆಜಿ ಕಸಕ್ಕೆ ಟಿಫನ್, ಒಂದು ಕೆಜಿ ಕಸಕ್ಕೆ ಊಟ..

ಬಿಜೆಪಿ ಹೈಕಮಾಂಡ್ ಈಗ ಕೆಲ ಷರತ್ತುಗಳನ್ನು ಒಡ್ಡಿ ಸರ್ಕಾರ ರಚನೆಗೆ ಮುಂದಾಗಿದ್ದು, ಸದನದಲ್ಲಿ ವಿಶ್ವಾಸಮತ ಸಾಬೀತುಪಡಿಸುವ ಜವಾಬ್ದಾರಿ ಸಂಪೂರ್ಣವಾಗಿ ನೀವೇ ನಿಭಾಯಿಸಬೇಕು. ಈಗ ಮೂವರು ಶಾಸಕರನ್ನು ಅನರ್ಹಗೊಳಿಸಲಾಗಿದೆ. ಇದರಿಂದಾಗಿ ಸದನದ ಬಲ 221 ಕ್ಕೆ ಕುಸಿದಿದೆ. ಇದರಿಂದ ಬಹುಮತಕ್ಕೆ 112 ಸಂಖ್ಯೆ ಬೇಕಾಗುತ್ತದೆ. ಆದರೆ ಬಿಜೆಪಿ ಬಳಿ ಒಬ್ಬ ಪಕ್ಷೇತರ ಶಾಸಕ ಸೇರಿ ಒಟ್ಟು 106 ಇದೆ. ಇನ್ನುಳಿದ ಸಂಖ್ಯೆಯನ್ನು ನೀವೇ ನಿಭಾಯಿಸಬೇಕು ಎಂದು ಮೊದಲ ಷರತ್ತು ವಿಧಿಸಿದೆ.