ಹನುಮಂತನ ಬಾಲಕ್ಕೆ ಬೆಣ್ಣೆ ಹಚ್ಚಿ ಪೂಜೆ ಮಾಡುತ್ತಾರೆ

0
1419

ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯ ಸುಚೀಂದ್ರಂ ಎಂಬ ಈ ಕ್ಷೇತ್ರದಲ್ಲಿ, ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು, ಮಹೇಶ್ವರರು ಸೇರಿ ಒಂದೇ ಲಿಂಗ ರೂಪದಲ್ಲಿ ಉದ್ಭವಿಸಿದೆ ಎಂದು ಐತಿಹಾಸಿಕ ಆಧಾರಗಳು ಹೇಳುತ್ತವೆ. ಹೀಗೆ ಈ ಕ್ಷೇತ್ರ ತುಂಬಾ ಖ್ಯಾತಿಯನ್ನು ಪಡೆದ ಪ್ರದೇಶವಾಗಿ ಭಕ್ತರಿಂದ ಪೋಜಿಸಲ್ಪಡುತ್ತಿದೆ. ಎಷ್ಟೋ ಜನರು ಈ ಕ್ಷೇತ್ರಕ್ಕೆ ಬಂದು ದೇವರನ್ನು ದರ್ಶನ ಮಾಡಿಕೊಳ್ಳುತ್ತಿದ್ದಾರೆ. ಈ ಕ್ಷೇತ್ರದಲ್ಲಿ ಹನುಮಂತನ 18 ಅಡಿ ಎತ್ತರದ ವಿಗ್ರಹವಿದೆ. ಅಲ್ಲಿ ವಿಶೇಷ ಪೂಜೆಗಳಿಂದ ಪೂಜಿಸಲ್ಪಡುತ್ತಿದೆ. ಆದರೆ ಈ ಹನುಮಂತನ ವಿಗ್ರಹಕ್ಕೆ ಒಂದು ಪ್ರತ್ಯೇಕತೆ ಇದೆ. ಅದೇನೆಂದರೆ….

if-you-worship-hanuman-like-this-you-get-the-grace-of-hanuman-2

ರಾಮಾಯಣದಲ್ಲಿ ರಾವಣನಿಂದ ಅಪಹರಿಸಿದ್ದ ಸೀತೆಯನ್ನು ಕಂಡುಹಿಡಿಯುವುದಕ್ಕೆ ರಾಮನು ಹನುಮಂತನನ್ನು ಕಳುಹಿಸುತ್ತಾನೆ. ಇದರ ಬಗ್ಗೆ ಎಲ್ಲರಿಗೂ ತಿಳಿದಿರುತ್ತದೆ. ಆದರೆ ಸೀತೆಯ ಅನ್ವೇಷಣೆಯ ಭಾಗವಾಗಿ ಲಂಕೆಗೆ ಹೋದ ಹನುಮಂತನು ಆಕೆಯನ್ನು ಕಂಡು ಹಿಡಿಯುತ್ತಾನೆ. ಹನುಮಂತನನ್ನು ನೋಡಿದ ಲಂಕೆಯಲ್ಲಿರುವ ರಾಕ್ಷಸರು ಹನುಮಂತನ ಬಾಲಕ್ಕೆ ಬೆಂಕಿ ಇಡುತ್ತಾರೆ. ಆದರೆ ಹನುಮ ಸುಮ್ಮನಿರುತ್ತಾನಾ? ಆ ಬೆಂಕಿಯಿಂದ ಪೂರ್ತಿ ಲಂಕೆಗೆ ಬೆಂಕಿ ಇಡುತ್ತಾನೆ. ಅದ್ದರಿಂದ ಲಂಕೆಯ ತುಂಬಾ ಭಾಗವು ಭಸ್ಮವಾಗುತ್ತದೆ. ಆದರೆ ಅಷ್ಟೊತ್ತಿಗಾಗಲ್ಲೇ ಹನುಮಂತನ ಬಾಲ ಬಹಳ ಸುಟ್ಟೊಗುತ್ತದೆ. ಮತ್ತೆ ಹಾಗೆ ಸುಟ್ಟ ಬಾಲಕ್ಕೆ ಏನೋ ಒಂದು ಉಪಶಮನ ಮಾಡಬೇಕಲ್ವಾ? ಅದೇನೋಡಿ ಆ ಭಕ್ತರು ಮಾಡುತ್ತಿರುವುದು! ಇಷ್ಟಕ್ಕೂ ಅವರೇನು ಮಾಡುತ್ತಿದ್ದಾರೆ!

ಲಂಕೆಯ ದಹನದಲ್ಲಿ ಹನುಮಂತನ ಬಾಲ ಬಹಳ ಸುಟ್ಟುಹೋಗಿತ್ತು, ಸುಟ್ಟ ಆ ಬಾಲಕ್ಕೆ ಉಪಶಮನವಾಗಲೆಂದು ಆಗ ಆತನ ಬಾಲಕ್ಕೆ ಬೆಣ್ಣೆ ಹಚ್ಚಿದ್ದರಂತೆ, ಈ ರೀತಿಯಾಗಿ ಸುಜೀಂದ್ರಂ ಕ್ಷೇತ್ರದಲ್ಲಿರುವ ಹನುಮಂತನ ವಿಗ್ರಹದ ಬಾಲಕ್ಕೆ ಭಕ್ತರೆಲ್ಲರು ಬೆಣ್ಣೆ ಹಚ್ಚುತ್ತಿದ್ದಾರೆ. ಹಾಗೆ ಹಚ್ಚಿದರೆ ಆತನಿಗೆ ಉಪಶಮನ ಆಗುತ್ತದೆಂದು ಭಕ್ತರ ನಂಬಿಕೆ. ಅಷ್ಟೇಅಲ್ಲ ಹಾಗೆ ಮಾಡುವುದರಿಂದ ಸ್ವಾಮಿ ಆಯುರಾರೋಗ್ಯಗಳನ್ನು, ಅಷ್ಟಐಶ್ವರ್ಯಗಳನ್ನು, ನೀಡುತ್ತಾನೆಂದು, ಭಕ್ತರು ಯಾರೇ ಆಗಲಿ ಸ್ವಾಮಿಯ ಬಾಲಕ್ಕೆ ಬೆಣ್ಣೆ ಹಚ್ಚದೆ ಹೋಗುವುದಿಲ್ಲ. ಇನ್ನೊಂದು ವಿಷಯವೇನೆಂದರೆ ಹಾಗೆ ಆಂಜನೇಯ ಸ್ವಾಮಿಯ ಬಾಲಕ್ಕೆ ಬೆಣ್ಣೆ ಹಚ್ಚುವ ಸಾಂಪ್ರದಾಯ ಈಗಷ್ಟೇ ಬಂದಿರುವುದಿಲ್ಲ. ಕೆಲವು ಯುಗಗಳಿಂದ ನಡೆದು ಕೊಂಡು ಬಂದಿರುವುದಂತೆ…!

if-you-worship-hanuman-like-this-you-get-the-grace-of-hanuman-1