ಕನ್ನಡದಲ್ಲಿ ಭಾಷಣ ಮಾಡಿದ ಬಾಬಾ ರಾಮ್ ದೇವ್

0
11572

ದಿನಾಂಕ ೧೫ ಜನವರಿ ೨೦೧೭ ರಂದು ಆಯುಷ್ ಟಿ.ವಿ ಕನ್ನಡ ವಾಹಿನಿಗಳಿಗೆ ಮತ್ತೊಂದು ವಿದ್ಯುಕ್ತ ಸೇರ್ಪಡೆಯಾಯಿತು. ಶ್ರೀ ಶಂಕರ ವಾಹಿನಿಯಿಂದ ಮತ್ತೊಂದು ವಾಹಿನಿ ಸೇರ್ಪಡೆಗೊಂಡಿದೆ. ಆಯುಷ್ ಟಿ.ವಿ, ಜನವರಿ ೧೫ ರಂದು ಲೋಕಾರ್ಪಣೆಗೊಂಡಿತು. ಆಯುರ್ವೇದ, ಯೋಗ, ಯುನಾನಿ, ಸಿದ್ಧ ಮತ್ತು ಹೋಮಿಯೋಪತಿ ಅರೋಗ್ಯ ಚಿಕಿತ್ಸೆಯನ್ನು ಜನರಿಗೆ ಮುಟ್ಟಿಸುವ ನಿಲುವಿನಿಂದ ಆಯುಷ್ ಟಿ.ವಿ. ಲೋಕಾರ್ಪಣೆಗೊಂಡಿದೆ.

ಇದನ್ನು ಉದ್ಘಾಟಿಸಲು ಯೋಗ ಗುರು ಬಾಬಾ ರಾಮ್ ದೇವ್-ರವರು ಬೆಂಗಳೂರಿನ ಫ್ರೀಡಂ ಪಾರ್ಕ್ ಗೆ ಆಗಮಿಸಿದ್ದರು. ಆಯುಷ್ ವಾಹಿನಿಗೆ ರಾಯಭಾರಿಯಾಗಿ ನಟ ಉಪೇಂದ್ರ ರವರು ಆಗಮಿಸಿದ್ದರು. ಅರೋಗ್ಯ ಸಚಿವರಾದ ಶ್ರೀ ರಮೇಶ್ ಕುಮಾರ್-ರವರು, ಕೇಂದ್ರ ಮಂತ್ರಿಗಳಾದ ಶ್ರೀ ಸದಾನಂದ ಗೌಡರು, ವಿಶ್ವವಾಣಿಯ ಪ್ರಧಾನ ಸಂಪಾದಕರಾದ ಶ್ರೀ ವಿಶ್ವೇಶ್ವರ ಭಟ್-ರವರು, ರಾಜ್ಯದ ಕಾಂಗ್ರೆಸ್ ಕಾರ್ಯದಕ್ಷರಾದ ಮತ್ತು ಗಾಂಧಿನಗರ ಕ್ಷೇತ್ರದ ಶಾಸಕರಾದ ದಿನೇಶ್ ಗುಂಡು ರಾಯರು, ಶಾಂತಿನಗರ ಶಾಸಕರಾದ ಹಾರಿಸ್ ರವರೂ ಆಗಮಿಸಿದ್ದರು.

ಮುಖ್ಯ ಅತಿಥಿಗಳಾದ ಶ್ರೀ ಬಾಬಾ ರಾಮ್ ದೇವ್ -ರವರು ದೀಪ ಬೆಳಗಿಸುವ ಮೂಲಕ ಆಯುಷ್ ವಾಹಿನಿಗೆ ಚಾಲನೆ ನೀಡಿದರು. ಸುಮಾರು 75 ,000ಕ್ಕೂ ಕಿಕ್ಕಿರಿದು ಸೇರಿದ್ದ ಜನರನ್ನು ಕನ್ನಡಲ್ಲೇ ಭಾಷಣ ಮಾಡುವ ಮೂಲಕ ಮಂತ್ರಮುಗ್ಧರನ್ನಾಗಿಸಿದರು.

“ಕರ್ನಾಟಕದ ಸಮಸ್ತ ಸಹೋದರ, ಸಹೋದರಿಯರಿಗೆ ನನ್ನ ಪ್ರೀತಿಪೂರ್ವಕ ನಮಸ್ಕಾರಗಳು. ಶಂಕರ ಗ್ರೂಪ್ ನವರು ಯೋಗ, ಆಯುರ್ವೇದ, ಯೂನಾನಿಯನ್ನು, ಸಿದ್ಧ ಮತ್ತು ಇತ್ಯಾದಿ ಪ್ರಾಚೀನ ವಿದ್ಯೆಗಳನ್ನು ಮನೆ -ಮನೆಗೆ, ಜನ ಜನಕ್ಕೆ ತಲುಪಿಸುವುದಕ್ಕಾಗಿ ಆಯುಷ್ ಟಿ.ವಿ. ಪ್ರಾರಂಭಿಸುತ್ತಿದ್ದಾರೆ. ಇದಕ್ಕಾಗಿ ಎಲ್ಲರ ಕಡೆಯಿಂದ ಚಾನೆಲ್ ನ ಮ್ಯಾನೇಜ್ಮೆಂಟ್ ಗೆ ಅನಂತ ಶುಭ ಕಾಮನೆಗಳು, ಅಭಿನಂದನೆಗಳು.”

ಬಾಬಾ ರವರು ತಮ್ಮ ಕನ್ನಡಲ್ಲಿ ಮಾತನಾಡಿ ಮುಗಿಸುವ ಹೊತ್ತಿಗೆ ಜನ ಚಪ್ಪಾಳೆ ಹೊಡೆದು ಸ್ವಾಗತಿಸಿದರು. ಅದೇ ವೇದಿಕೆಯಲ್ಲಿ ತಮ್ಮ ಯೋಗ ಕೌಶಲ್ಯವನ್ನು ಪ್ರದರ್ಶಿಸಿದ ಬಾಬಾ, ಉಪೇಂದ್ರರನ್ನು ಜೊತೆಗೂಡಿಸಿ ‘ಕಪಾಲಭಾತಿಯನ್ನು’ ಪ್ರದರ್ಶಿಸಿದರು.

ಲೀಲಾಜಾಲವಾಗಿ ಕನ್ನಡಲ್ಲಿ ಮಾತನಾಡಿದ ಬಾಬಾ ರವರು ಒಂದು ಕ್ಷಣ ಕನ್ನಡಿಗಾರದರು. ಇದೆ ವೇಳೆ ತುಂಬಾ ಕಡಿಮೆ ಅವಧಿಯಲ್ಲಿ ಬಾಬಾ ರವರಿಗೆ ಕನ್ನಡ ಭಾಷಣವನ್ನು ತಯಾರಿ ಮಾಡಿಕೊಟ್ಟ ಆಯುಷ್ ವಾಹಿನಿ ಉದ್ಘಾಟನಾ ಆಯೋಜಕರ ಸಮಯ ಪ್ರಜ್ಞೆ ಮತ್ತು ಕನ್ನಡ ಭಾಷೆಯ ಅಸ್ಮಿತೆ ಅಭಿನಂದಾರ್ಹ.

ಇನ್ನು ಮುಂದಿನ ದಿನಗಳಲ್ಲಿ ನಶಿಸಿಹೋಗುತ್ತಿರುವ ಭಾಷೆಯನ್ನೂ ಎತ್ತಿಹಿಡಿಯುವ ಕೆಲಸವನ್ನು ಆಯುಷ್ ವಾಹಿನಿ ಮಾಡಲಿಯೆಂದು ಆಶಿಸೋಣ.