ಕ್ಷುಲ್ಲಕ ವಿಚಾರಕ್ಕೆ ಗಂಡ-ಹೆಂಡತಿಯ ಕಿತ್ತಾಟ; ಹುಚ್ಚು ಗುದ್ದಾಟದಲ್ಲಿ 5 ತಿಂಗಳ ಮಗುವನ್ನೇ ಕೊಂದರು.!

0
567

ಪ್ರತಿಯೊಬ್ಬರ ಮನೆಯಲ್ಲಿ ಗಂಡ ಹೆಂಡತಿಯ ಜಗಳ ಇರುವುದು ಸಾಮಾನ್ಯ ಆದರೆ ಕೆಲವರು ಅದನ್ನೇ ಜೀವನವಾಗಿ ಮಾಡಿಕೊಂಡು ಮಕ್ಕಳ ಜೀವನವನ್ನೇ ಹಾಳು ಮಾಡುತ್ತಾರೆ. ಇದಕ್ಕೆ ಒಂದು ಗಾದೆ ಕೂಡ ಇದೆ ಗಂಡ-ಹೆಂಡತಿ ಜಗಳದಲ್ಲಿ ಕೂಸು ಬಡವಾಯ್ತು ಅಂತ. ಅದಕ್ಕಾಗಿ ಹಲವು ಉದಾಹರಣೆಗಳನ್ನು ಕೂಡ ತೋರಿಸಿ, ಮನೆಯಲ್ಲಿ ನಡೆಯುವ ತಂದೆ ತಾಯಿಗಳ ಜಗಳ ಮಕ್ಕಳ ಮೇಲೆ ಹೇಗೆ ಪರಿಣಾಮವಾಗುತ್ತೆ ಎನ್ನುವುದು ಹಲವು ಸಿನಿಮಾ ಮತ್ತು ಘಟನೆ ತಿಳಿಸಿವೆ. ಆದರು ಗಂಡ ಹೆಂಡತಿ ಇಬ್ಬರು ಹೊಡೆದಾಡಲು ಹೋಗಿ ಮಗುವನ್ನೇ ಕೊಂದ ಘಟನೆ ಬೆಳಕಿಗೆ ಬಂದಿದೆ.

Also read: ಊಟದಲ್ಲಿ ಕೂದಲು ಸಿಕ್ಕಿದ್ದಕ್ಕೆ ಸಿಟ್ಟಿಗೆದ್ದು ಪತ್ನಿಯ ತಲೆಯನ್ನೇ ಬೋಳಿಸಿದ ಭೂಪ; ಕೊನೆಗೆ ಏನಾಯಿತು ನೋಡಿ.!

5 ತಿಂಗಳ ಮಗುವನ್ನೇ ಕೊಂದ ಗಂಡ-ಹೆಂಡತಿ?

ಹೌದು ಎಲ್ಲರ ಮನೆಯಲ್ಲಿ ನಡೆಯುವಂತೆ ಗಂಡ ಹೆಂಡತಿಯ ಜಗಳದಲ್ಲಿ ಮಗುವನ್ನೇ ಕೊಂದ ಘಟನೆ ಪೂರ್ವ ದೆಹಲಿಯ ಕೊಂಡ್ಲಿ ಪ್ರದೇಶದಲ್ಲಿ ನಡೆದಿದೆ. ಅಲ್ಲಿನ ನಿವಾಸಿ ದೀಪ್ತಿ(29) ಹಾಗೂ ಸತ್ಯಜೀತ್(32) ಅವರ 5 ತಿಂಗಳ ಮಗು ಸಾವನ್ನಪ್ಪಿದೆ. ಭಾನುವಾರ ದೀಪ್ತಿ ಹಾಗೂ ಸತ್ಯಜೀತ್ ನಡುವೆ ಜಗಳ ನಡೆದಿತ್ತು. ಈ ವೇಳೆ ಅವರಿಬ್ಬರ ನಡುವೆ ಹೊಡೆದಾಟ ಕೂಡ ನಡೆದಿತ್ತು. ವಿಚಾರಕ್ಕೆ ಮಗುವಿನ ತಂದೆ ಮಗುವಿನ ತಾಯಿಗೆ ಕೋಲಿನಿಂದ ಥಳಿಸಲಾರಂಭಿಸಿದಾಗ ಕಬ್ಬಿಣದ ವಸ್ತುವೊಂದು ತಾಯಿಯ ಮಡಿಲಲ್ಲಿದ್ದ ಮಗುವಿನ ಹಣೆಗೆ ಬಡಿದು ರಕ್ತ ಸೋರಲಾರಂಭಿಸಿತ್ತು. ಆಗ ಗಾಬರಿಗೊಂಡ ಹೆತ್ತವರು ಹತ್ತಿರದ ಕ್ಲಿನಿಕ್‌ಗೆ ಮಗುವನ್ನು ಕರೆದುಕೊಂಡು ಹೋದರು. ವೈದ್ಯರು ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಯಿಂದ ಬಿಡುಗಡೆ ಮಾಡಿದ್ದರು. ಸಣ್ಣಪುಟ್ಟ ಗಾಯವಾಗಿದೆ ಎಂದು ವೈದ್ಯರು ಹೇಳಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

Also read: ಗಂಡನ ಮನೆಯಲ್ಲಿ ಶೌಚಾಲಯ ಇಲ್ಲವೆಂದು ಮದುವೆಯಾದ ಒಂದೇ ದಿನದಲ್ಲಿ ಪತಿಯನ್ನು ಬಿಟ್ಟು ಹೋದ ನವ ವಿವಾಹಿತೆ; ಮೋದಿ ಅವರ ಯೋಜನೆಗೆ ಸ್ಪೂರ್ತಿಯಾದ ಯುವತಿ.!

ಮಂಗಳವಾರ ಬೆಳಗ್ಗೆಯ ತನಕ ಮಗು ಚೆನ್ನಾಗಿತ್ತು. ಆದರೆ, ಆ ಬಳಿಕ ಜೋರಾಗಿ ಅಳಲಾರಂಭಿಸಿದಾಗ ಹೆತ್ತವರು ಮತ್ತೊಮ್ಮೆ ಕ್ಲಿನಿಕ್‌ಗೆ ಧಾವಿಸಿದರು. ವೈದ್ಯರು ಮಗುವಿನ ಸ್ಥಿತಿ ಗಂಭೀರವಾಗಿದೆ ಎಂದು ಹೇಳಿ ಖಾಸಗಿ ಆಸ್ಪತ್ರೆಗೆ ಮಗುವನ್ನು ಸೇರಿಸುವಂತೆ ತಿಳಿಸಿದರು. ಮಗುವನ್ನು ಪರೀಕ್ಷಿಸಿದ ಖಾಸಗಿ ಆಸ್ಪತ್ರೆ ವೈದ್ಯರು ಮಗು ಮೃತಪಟ್ಟಿದ್ದಾಗಿ ಘೋಷಿಸಿದರು. ಪೊಲೀಸ್ ತಂಡ ಆಸ್ಪತ್ರೆಗೆ ಧಾವಿಸಿ ಮಗುವನ್ನು ತಮ್ಮ ಕಸ್ಟಡಿಗೆ ಪಡೆಯಿತು. ಮಗುವಿನ ಮೃತದೇಹವನ್ನು ಲಾಲ್‌ಬಹದ್ದೂರ್ ಆಸ್ಪತ್ರೆಗೆ ಸಾಗಿಸಿ ಶವಮಹಜರು ನಡೆಸಲಾಯಿತು. ತಲೆಯಲ್ಲಿ ರಕ್ತ ಹೆಪ್ಪುಗಟ್ಟಿ ಮಗು ಮೃತಪಟ್ಟಿರುವ ವಿಚಾರ ಮರಣೋತ್ತರ ಪರೀಕ್ಷೆ ವರದಿಯಲ್ಲಿ ಬಹಿರಂಗವಾಯಿತು.

Also read: ಸ್ಪರ್ಧಾತ್ಮಕ ಪರೀಕ್ಷೆಯ ಆಸಕ್ತಿಯಿಂದ ಪತ್ನಿಯನ್ನೇ ಕಳೆದುಕೊಂಡ ಪತಿರಾಯ.!

ಮಗುವಿನ ತಲೆಗೆ ಹೊಡೆದಿರುವ ತಂದೆ ನಾಪತ್ತೆಯಾಗಿದ್ದು, ಪೊಲೀಸರು ಆರೋಪಿ ತಂದೆಯ ಹುಡುಕಾಟದಲ್ಲಿ ತೊಡಗಿದ್ದಾರೆ. ಮಗುವಿನ ತಂದೆ ಗಾಝಿಯಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ಆಪರೇಶನ್ ಥಿಯೇಟರ್‌ನ ಟೆಕ್ನಿಶಿಯನ್ ಆಗಿ ಕೆಲಸ ಮಾಡುತ್ತಿದ್ದು, ಕಳೆದ ಕೆಲವು ತಿಂಗಳುಗಳಿಂದ ಕೆಲಸವಿಲ್ಲದೇ ಮನೆಯಲ್ಲಿದ್ದ. ಮಗುವಿನ ತಾಯಿ ಖಾಸಗಿ ಕ್ಲಿನಿಕ್‌ನಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು. ದಂಪತಿ ಎರಡೂವರೆ ವರ್ಷಗಳ ಹಿಂದೆ ವಿವಾಹವಾಗಿದ್ದು ಬಾಡಿಗೆ ಮನೆಯಲ್ಲಿ ವಾಸವಾಗಿತ್ತು. ಇವರಿಗೆ ಐದು ತಿಂಗಳ ಒಂದೇ ಮಗುವಿತ್ತು. ಅದನ್ನೇ ತಮ್ಮ ಜಗಳದಲ್ಲಿ ಕೊಂದು ಹಾಕಿದ್ದಾರೆ. ಈ ಘಟನೆ ದೇಶದ ಪ್ರತಿಯೊಂದು ದಂಪತಿಗೆ ಪಾಠವಾಗಿದ್ದು, ಮನೆಯಲ್ಲಿ ಮಕ್ಕಳನ್ನು ಇಟ್ಟುಕೊಂಡು ಇತ್ತಾಡುವುದ್ದನ್ನು ಇನ್ನಾದರು ನಿಲ್ಲಿಸಿ.