ಯಾವುದೇ ಡಿಗ್ರಿ ಮಾಡಿದವರಿಗೂ ಕೆಲಸ ಸಿಗದೇ ಇರುವ ಈ ಸಮಯದಲ್ಲಿ ಪಿಯುಸಿ ಮುಗಿದ ನಂತರ ಈ ವೋಕೆಶನಲ್ (B.Voc) ಕೋರ್ಸ್ ಮಾಡಿ, ಭಾರಿ ಬೇಡಿಕೆ ಇರುವ ಲಕ್ಷಾಂತರ ರುಪಾಯಿ ಸಂಬಳವಿರುವ ಕೆಲಸ ನಿಮ್ಮದಾಗುತ್ತೆ!!

0
569

ಸಾಮಾನ್ಯವಾಗಿ ವಿದ್ಯಾರ್ಥಿಗಳೆಲ್ಲರೂ ಪಿಯುಸಿ ನಂತರ ಬಿಎ, ಬಿಕಾಂ, ಬಿಎಸ್ಸಿ ಯಂಥ ಕೋರ್ಸ್ ಕಲಿಯುವುದು ಅನಿವಾರ್ಯವಾಗಿತ್ತು. ಈ ರೀತಿ ಪದವಿ ಪಡೆದ ವಿದ್ಯಾರ್ಥಿಗಳಿಗೆ ಉದ್ಯೋಗ ಮಾರುಕಟ್ಟೆಯಲ್ಲಿ ಉದ್ಯೋಗ ಸಿಗುವುದು ತುಂಬಾ ಕಠಿಣ ಅಂಥಹ ವಿದ್ಯಾರ್ಥಿಗಳಿಗೆ ಈ ಬ್ಯಾಚುಲರ್ ಆಫ್ ವೊಕೇಶನ್ (ಬಿ ವೋಕ್) ಕೋರ್ಸ್ ವರದಾನವಾಗುವದರಲ್ಲಿ ಸಂದೇಹವಿಲ್ಲ.

Also read: ಪಿಯುಸಿ ಮುಗಿದ ಮೇಲೆ ಇಂಜಿನಿಯರಿಂಗ್/ಮೆಡಿಕಲ್ ಸೀಟ್ ಸಿಗದಿದ್ದರೆ ಯೋಚನೆ ಮಾಡಬೇಡಿ, ಈ ಕೋರ್ಸ್ಗಳನ್ನು ಮಾಡಿದರೆ ನಿಮ್ಮ ಭವಿಷ್ಯ ಉಜ್ವಲವಾಗಿರುತ್ತೆ..!!

ಹೌದು, ಬ್ಯಾಚುಲರ್ ಆಫ್ ವೊಕೇಶನ್ (ಬಿ ವೋಕ್) ಕೋರ್ಸ್ ಹೆಸರೇ ಸೂಚಿಸುವಂತೆ ಸಂಪೂರ್ಣ ವೃತ್ತಿಪರ. ಜ್ಞಾನ ಮತ್ತು ಕೌಶಲಗಳು ಬಗ್ಗೆ ನಡೆಸುವ ಅಧ್ಯಯನ. ದ್ವಿತೀಯ ಪಿಯುಸಿ ಉತ್ತೀರ್ಣರಾದ ಸಾಮಾನ್ಯ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಬಿ ವೋಕ್ ವಿನ್ಯಾಸಗೊಂಡಿದೆ ಅಂದರೆ ತಪ್ಪಾಗಲಾರದು.

ಪ್ರವಾಸೋದ್ಯಮ, ಕಟ್ಟಡ ನಿರ್ಮಾಣ ವಲಯ, ಮುದ್ರಣ, ಟೆಲಿಕಾಂ, ಮಾಹಿತಿ ತಂತ್ರಜ್ಞಾನ, ಹಾರ್ಡ್‌ವೇರ್, ಅರೆ ವೈದ್ಯಕೀಯ, ವಾಣಿಜ್ಯ, ಕೃಷಿ, ಆರೋಗ್ಯ ರಕ್ಷಣೆ, ಚಿಲ್ಲರೆ ವ್ಯಾಪಾರ, ಸಮೂಹ ಮಾಧ್ಯಮ, ಮನರಂಜನೆ, ಆಹಾರ ಸಂಸ್ಕರಣೆ, ರಂಗಭೂಮಿ, ಆಹಾರ ವಿಜ್ಞಾನ ಸೇರಿದಂತೆ ವಿವಿಧ ವಲಯಗಳಲ್ಲಿ ಕೆಲಸ ಮಾಡುವಂಥ ಅರ್ಹ ಪದವೀಧರರಿಗೆ ಈ ಕೋರ್ಸ್ ಒಂದು ಉತ್ತಮ ಅವಕಾಶವನ್ನು ರೂಪಿಸುವಲ್ಲಿ ಸಹಾಯಕವಾಗಿದೆ.

Also read: ಲಕ್ಷಾಂತರ ರುಪಾಯಿ ಸಂಬಳ ಕೊಡುತ್ತೆ ಈ ಅನಿಮೇಷನ್ ಹುದ್ದೆ!!! ಕೋರ್ಸ್ ಮಾಡುವುದು ಹೇಗೆ… ಇಲ್ಲಿ ಓದಿ!!!

ಬಿ ವೋಕ್ ಕೋರ್ಸಿನ ಕೆಲವು ಪ್ರಮುಖ ಅಂಶಗಳು ಈ ಕೆಳಗಿನತಿವೆ.

  • ಕೋರ್ಸ್ ಮಟ್ಟ (Course Level): ಪದವಿಧರ
  • ಅವಧಿ (Duration): 3 ವರ್ಷಗಳು ಮಾತ್ರ
  • ಪರೀಕ್ಷಾ ಕೌಟುಂಬಿಕತೆ (Examination Type): ಸೆಮೆಸ್ಟರ್ ಸಿಸ್ಟಮ್
  • ಅರ್ಹತೆ (Eligibility): 10 + 2
  • ಪ್ರವೇಶ ಪ್ರಕ್ರಿಯೆ (Admission Process): ಮೆರಿಟ್ ಆಧಾರಿತ / ಪ್ರವೇಶ ಪರೀಕ್ಷೆಯ ಅರ್ಹತೆ ನಂತರ ಸಮಾಲೋಚನೆ ಆಧರಿಸಿ
  • ಕೋರ್ಸ್ ಶುಲ್ಕ(Course Fee): Rs 5,000 – 10,000
  • ಸರಾಸರಿ ಪ್ರಾರಂಭಿಕ ಸಂಬಳ (Average Starting Salary): 2-3 ಲಕ್ಷಗಳು

ಬಿ ವೋಕ್ ಕೋರ್ಸಿಗೆ ಅರ್ಜಿ ಸಲ್ಲಿಸಲು ಆಸಕ್ತ ಅಭ್ಯರ್ಥಿಗಳು ಪೂರೈಸಬೇಕಾದ ಅಗತ್ಯ ಅರ್ಹತೆಗಳು:

  • ಈ ಕೋರ್ಸ್ಗೆಸ ಸೇರಲು ಯಾವುದಾದರೂ ಶಿಕ್ಷಣಗುರುತಿಸಲ್ಪಟ್ಟ ಶೈಕ್ಷಣಿಕ ಮಂಡಳಿಯಿಂದ 10+2 ಪದವಿಪೂರ್ವ ಶಿಕ್ಷಣದಲ್ಲಿ ಉತ್ತೀರ್ಣರಾಗಿರಬೇಕು.
  • ಬಿ ವೋಕ್ ಶಿಕ್ಷಣ ಪಡೆಯಲು 10 + 2 ಹಂತದಲ್ಲಿ ಅಗ್ರಿಗೆಟ್ ಸ್ಕೋರ್ 50% ಆಗಿರಬೇಕು. (SC / ST / OBC ಅಭ್ಯರ್ಥಿಗಳಿಗೆ 45%)
  • 10+ITI ಆಗಿರಬೇಕು

ಯಾವ್ಯಾವ ಶಿಕ್ಷಣಗಳಿವೆ..?

Also read: ಕಾಲೇಜ್ ವಿದ್ಯಾರ್ಥಿಗಳು ಓದಿಕೊಂಡೇ ಕೈ ತುಂಬಾ ದುಡಿಯಬಹುದು!! ಹೇಗೆ ಅಂತೀರ ಮುಂದೆ ಓದಿ…

ಬ್ಯೂಟಿ & ವೆಲ್ನೆಸ್, ಆಹಾರ ಸಂಸ್ಕರಣೆ, ಹಾಸ್ಪಿಟಾಲಿಟಿ & ಪ್ರವಾಸೋದ್ಯಮ, ಸಾವಯವ ಕೃಷಿ, ಚಿಲ್ಲರೆ ನಿರ್ವಹಣೆ, ಸಾಫ್ಟ್ವೇರ್ ಅಭಿವೃದ್ಧಿ, ಟೀ ಹಸ್ಬಂಡ್ರಿ & ಟೆಕ್ನಾಲಜಿ, ಪ್ರವಾಸೋದ್ಯಮ, ಅಪ್ಲೈಡ್ ಆರ್ಟ್ಸ್, ಒಳಾಂಗಣ ವಿನ್ಯಾಸ, ಆಟೋಮೊಬೈಲ್, ನಿರ್ಮಾಣ ತಂತ್ರಜ್ಞಾನ, ಗ್ರಾಹಕ ಎಲೆಕ್ಟ್ರಾನಿಕ್ಸ್, ಮೊಬೈಲ್ ಸಂವಹನ, ಮುದ್ರಣ ಮತ್ತು ಪ್ರಕಟಣೆ, ಪವರ್ ವಿತರಣೆ ಮತ್ತು ನಿರ್ವಹಣೆ, ಶೈತ್ಯೀಕರಣ ಮತ್ತು ಏರ್ ಕಂಡೀಷನಿಂಗ್ ಹೀಗೆ ಮತ್ತಿತರ ತರಬೇತಿಗಳು ಸಹ ಹೇಳಿಕೊಡಲಾಗುತ್ತದೆ.