ಪುಂಡರನ್ನು ಬೆನ್ನಟ್ಟಿ ಯುವತಿಯರನ್ನು ಕಾಪಾಡಿದ ಒಲಿಂಪಿಯನ್ ಕೃಷ್ಣ ಪೂನಿಯಾ

0
856

ಮಹಿಳೆಯರ ಮೇಲೆ ಲೈಂಗಿಕ ಕಿರುಕುಳ ನೀಡೋ ಪುಂಡರಿಗೆ ಹೇಗೆ ಪಾಠ ಕಲಿಸಬೇಕು ಎಂಬುದಕ್ಕೆ ಒಲಿಂಪಿಯನ್ ಡಿಸ್ಕಸ್ ಪಟು ಕೃಷ್ಣ ಪೂನಿಯಾ ಪ್ರತ್ಯಕ್ಷ ಸಾಕ್ಷಿಯಾಗಿ ನಿಂತಿದ್ದಾರೆ.

2010ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದಿರುವ ಕೃಷ್ಣ ಪೂನಿಯಾ ಒಲಿಂಪಿಕ್ಸ್ನಲ್ಲೂ ಭಾರತವನ್ನು ಎರಡು ಬಾರಿ ಪ್ರತಿನಿಧಿಸಿದ್ದಾರೆ.

ರಾಜಸ್ಥಾನ್ನ ಚುರು ಜಿಲ್ಲೆಯ ರಾಜ್ಗಢ್ನಲ್ಲಿ ಇಬ್ಬರು ಯುವತಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಪುಂಡರ ಗುಂಪನ್ನು ಬೆನ್ನಟ್ಟಿ ಬೆಂಡೆತ್ತಿದ ಕೃಷ್ಣ ಪೂನಿಯಾ ಇತರರಿಗೆ ಮಾದರಿಯಾಗಿದ್ದಾರೆ.

39 ವರ್ಷದ ಪೂನಿಯಾ ಮೂರು ಬೈಕ್ಗಳಲ್ಲಿದ್ದ ಪುಂಡರು ಇಬ್ಬರು ಯುವತಿಯರಿಗೆ ಚುಡಾಯಿಸಿದ್ದೂ ಅಲ್ಲದೇ ಲೈಂಗಿಕ ಕಿರುಕುಳ ನೀಡಲು ಯತ್ನಿಸುತ್ತಿದ್ದುದ್ದನ್ನು ಗಮನಿಸಿದರು. ಕೂಡಲೇ ಅವರನ್ನು ಬೆನ್ನಟ್ಟಿದ ಪೂನಿಯಾ ಒಬ್ಬನನ್ನು ಹಿಡಿಯುವಲ್ಲಿ ಯಶಸ್ವಿಯಾದರು.

ಪೊಲೀಸರಿಗೆ ಕೃಷ್ಣಪೂನಿಯಾ ಕೂಡಲೇ ಸುದ್ದಿಮುಟ್ಟಿಸಿದರೂ ಅವರು ಬರುವುದು ತಡವಾಯಿತು. ಆದರೆ ಗುಂಪಾಗಿ ಸೇರಿದ ಜನರು ಪೂನಿಯಾಗೆ ಸಾಥ್ ನೀಡಿದರು.

ಘಟನೆ ಬಗ್ಗೆ ವಿವರಿಸಿದ ಪೂನಿಯಾ, ಪುಂಡರು, ಯುವತಿಯರಿಗೆ ಕಿರುಕುಳ ನೀಡುವುದನ್ನು ನೋಡಿದಾಗ ನನ್ನ ಮಕ್ಕಳು ನೆನಪಿಗೆ ಬಂದರು. ಕೂಡಲೇ ಅವರನ್ನು ರಕ್ಷಿಸಲು ಮುನ್ನುಗ್ಗಿದೆ. ಆದರೆ ಇಲ್ಲಿಂದ ಕೇವಲ 2 ನಿಮಿಷದಷ್ಟು ದೂರದಲ್ಲಿ ಪೊಲೀಸ್ಟ್ ಸ್ಟೇಷನ್ ಇದೆ. ಆದರೆ ಪೊಲೀಸರು ತಡವಾಗಿ ಬಂದಿದ್ದು ಬೇಸರವಾಯಿತು. ಈ ರೀತಿ ಪೊಲೀಸರು ಪ್ರತಿಕ್ರಿಯಿಸಿದರೆ ಸಮಾಜದಲ್ಲಿ ಹೆಣ್ಣು ಮಕ್ಕಳನ್ನು ಹೇಗೆ ರಕ್ಷಿಸಲು ಸಾಧ್ಯ ಎಂದು ಪ್ರಶ್ನಿಸಿದರು.