ಬದನೆಕಾಯಿ ಎಣ್ಣೆಗಾಯಿ ಮಾಡುವ ವಿಧಾನ

0
4240

Kannada News | Recipe tips in Kannada

ವಾಕ್ ಸಿದ್ದಿ, ಯಂತ್ರಸಿದ್ದಿ, ಮಂತ್ರಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ ಭಾರತದ ಏಕೈಕ
ಜ್ಯೋತಿಷ್ಯರು ಶ್ರೀ ಅಷ್ಠ ಲಕ್ಷ್ಮಿ ಉಪಾಸಕರಾದ ಬಿ. ಎಚ್ ಆಚಾರ್ಯ ಗೂರೂಜಿ ಇವರು ನಿಮ್ಮ ಸಮಸ್ಯೆಗಳಾದ ಮದುವೆ ವಿಳಂಬ, ಸತಿಪತಿ ಕಲಹ, ಶತ್ರುಪೀಡೆ, ಬಿಸಿನೆಸ್-ನಲ್ಲಿ ನಷ್ಠ, ಸಾಲದ ಬಾದೆ, ವಶೀಕರಣ, ಮನಃಶಾಂತಿಯ ಕೊರೆತೆ, ಮಾಟಮಂತ್ರದಂತಹ ಯಾವುದೇ ಬಲಿಷ್ಠವಾದ ಸಮಸ್ಯೆಗಳಿದ್ದರೂ ಕೆಲವೇ ದಿನದಲ್ಲಿಯೇ ಶಾಶ್ವತ ಪರಿಹಾರವನ್ನು ಮಾಡಿ ಕೇವಲ 5 ದಿನದಲ್ಲಿಯೇ ನಿಮ್ಮ ಯಾವುದೇ ಕಠಿಣ ಇಷ್ಟಾರ್ಥ ಕಾರ್ಯಗಳಿದ್ದರೂ ನೆರವೇರಿಸಿ ಕೊಡುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 9880445522

ಬದನೆಕಾಯಿ ಎಣ್ಣೆಗಾಯಿ ಮಾಡುವ ವಿಧಾನ

 • ಸಣ್ಣ ಬದನೆಕಾಯಿ-6-7
 • ಈರುಳ್ಲಿ -2
 • ಹುಳಿಪುಡಿ-ಸ್ವಲ್ಪ.
 • ಶೇಗಾ(ಕಡಲೆ ಬೀಜ) 5-6 ಸ್ಪೂನ್ .
 • ಕಡ್ಲೆ ಬೇಳೆ ೨ ಸ್ಪೂನ್
 • ಉದ್ದಿನಬೇಳೆ-3-4 ಸ್ಪೂನ್
 • ಜೀರಿಗೆ 11/2ಸ್ಪೂನ್
 • ಧನಿಯ11/2ಸ್ಪೂನ್
 • ಲವಂಗ -1
 • ಒಣ ಮೆಣಸು -6-7
 • ಅರಿಸಿನ 1/2 ಸ್ಪೂನ್
 • ಇಂಗು-ಒಂದು ಚಿಟಿಕೆ
 • ತೆಂಗಿನತುರಿ-1/4 ಕಪ್
 • ಸಾಸಿವೆ -ಸ್ವಲ್ಪ
 • ಕರಿಬೇವು-ಸ್ವಲ್ಪ
 • ಎಣ್ಣೆ

ಮಾಡುವ ವಿಧಾನ

 • ಬದನೆಕಾಯಿ ಎಣ್ಣೆಗಾಯಿ ಮಾಡುವ ವಿಧಾನ: ಶೇಂಗಾ, ಕಡ್ಲೆಬೇಳೆ,ಉದ್ದಿನಬೇಳೆ, ಜೀರಿಗೆ, ಧನಿಯಾ,ಒಣಮೆಣಸು,ಇಂಗು,ಲವಂಗ ಇವೆಲ್ಲವನ್ನು ಸ್ವಲ್ಪ ಎಣ್ಣೆ ಹಾಕಿ ಹುರಿದಿಟ್ಟುಕೊಳ್ಳಿ.
 • ಬದನೆಕಾಯಿಯನ್ನು ದೊಡ್ಡದಾಗಿ ಕತ್ತರಿಸಿಕೊಳ್ಲಿ. ಈಗ ಬಾಣೆಲೆಗೆ ಎಣ್ಣೆ (ಬದನೆಕಾಯಿ ಎಣ್ಣೆಯಲ್ಲಿಯೇ ಬೇಯುವಷ್ಟು ಎಣ್ಣೆಹಾಕಬೇಕು), ಕಾದ ಬಳಿಕ ಸಾಸಿವೆ, ಕರಿಬೇವು, ಕತ್ತರಿಸಿದ ಬದನೆಕಾಯಿ ಹಾಕಿ. ಸ್ವಲ್ಪ ಉಪ್ಪು, ಹುಳಿಪುಡಿಯನ್ನೂ ಸೇರಿಸಿ.
 • ಈಗ ಹುರಿದಿಟ್ಟ ಮಸಾಲೆಗೆ ತೆಂಗಿನತುರಿ ಹಾಕಿ ಮಿಕ್ಸಿಯಲ್ಲಿ ಪುಡಿಮಾಡಿಕೊಳ್ಳಿ. ಬದನೆಕಾಯಿ ಅರ್ಧ ಬೆಂದಮೇಲೆ ಉದ್ದವಾಗಿ ಸೀಳಿಟ್ಟ ಈರುಳ್ಳಿ ಹಾಕಿ, ಬದನೆಕಾಯಿ ಆಗಾಗ ಕೈಯ್ಯಾಡಿಸುತ್ತಿರಿ. ಬದನೆಕಾಯಿ ಬೆಂದ ಬಳಿಕ ಅದಕ್ಕೆ ಪುಡಿ ಮಾಡಿಕೊಂಡ ಮಸಾಲೆ ಸೇರಿಸಿ.
 • ನಿಮಗೆ ಗೊಜ್ಜಿನಥರ ಬೇಕೆಂದರೆ ಸ್ವಲ್ಪ ನೀರು ಹಾಕಬಹುದು. ಸ್ವಲ್ಪ ಸಮಯದ ಬಳಿಕ ಒಂದು ಬೌಲ್ ಗೆ ಹಾಕಿದರೆ ಬದನೆಕಾಯಿ ಎಣ್ಣೆಗಾಯಿ ಸವಿಯಲು ಸಿದ್ಧ.

Also Read: ಭೂಕಂಪನದ ಅಳೆಯಲು ರಿಕ್ಟರ್ ಮಾಪನ ಬಳಸುತ್ತಾರೆ, ಏನದು?? ಮುಂದೆ ಓದಿ!!!