ಬದನೇಕಾಯಿ ಇಂದ ಮಾಡುವ ವಿಶೇಷ ಅಡುಗೆ, ಬೈಂಗನ್ ಬರ್ತಾ ಮಾಡೋದು ಕಲಿಯಿರಿ..

0
772

ಬೇಕಾಗುವ ಸಾಮಗ್ರಿಗಳು

 • ಬದನೆಕಾಯಿ- 1
 • ಈರುಳ್ಳಿ- 1
 • ಬೆಳ್ಳುಳ್ಳಿ- 8 ಎಸಳು
 • ಶುಂಠಿ ಪೇಸ್ಟ್- 1 ಟೀಚಮಚ
 • ಟೊಮೊಟೊ- 1
 • ಹಸಿಮೆಣಸಿನಕಾಯಿ- 3
 • ಉಪ್ಪು- ರುಚಿಗೆ ತಕ್ಕಷ್ಟು
 • ಜೀರಿಗೆ ಪುಡಿ- 1 ಟೀಚಮಚ
 • ಅರಿಶಿಣ ಪುಡಿ- 1/2 ಟೀಚಮಚ
 • ಅಚ್ಚಖಾರದ ಪುಡಿ- 1/2 ಟೀಚಮಚ
 • ಗರಂಮಸಾಲ ಪುಡಿ- 1/2 ಟೀಚಮಚ
 • ಕೊತ್ತಂಬರಿ ಸೊಪ್ಪು- ಸ್ವಲ್ಪ
 • ಎಣ್ಣೆ- 1 ಟೀಚಮಚ

ಮಾಡುವ ವಿಧಾನ

Also read: ಬದನೆಕಾಯಿ ಎಣ್ಣೆಗಾಯಿ ಮಾಡುವ ವಿಧಾನ

 1. ಒಲೆಯನ್ನು ಹೊತ್ತಿಸಿ ಬದನೆಕಾಯಿಯನ್ನು ನೇರ ಅದರ ಮೇಲಿಟ್ಟು 4-5 ನಿಮಿಷಗಳವರೆಗೆ ಸುಡಿ. ಬದನೆಕಾಯಿಯ ಎಲ್ಲ ಬದಿಗಳನ್ನು ಚೆನ್ನಾಗಿ ಕಪ್ಪಾಗುವವರೆಗೆ ಸುಡಿ.
 2. ಹೀಗೆ ಸುಟ್ಟ ಬದನೆಕಾಯಿಯನ್ನು ತಣ್ಣಗಿನ ನೀರಿನಲ್ಲಿ ಹಾಕಿಡಿ. ಇದರಿಂದ ಬದನೆಕಾಯಿ ಸಿಪ್ಪೆ ಬಿಡಿಸುವುದು ಸುಲಭವಾಗುತ್ತದೆ.
 3. ನಂತರ ಸಿಪ್ಪೆಯನ್ನು ಬಿಡಿಸಿಕೊಂಡು ಅದನ್ನ ಸಣ್ಣದಾಗಿ ಹೆಚ್ಚು ಇಟ್ಟುಕೊಳ್ಳಿ.
 4. ಬಾಣಲಿಯಲ್ಲಿ ಎರಡು ಚಮಚ ಎಣ್ಣೆ ಹಾಕಿ ಕಾದನಂತರ ಲವಂಗ ದಾಲ್ಚಿನ್ನಿಯನ್ನು ಹಾಕಿ ಫ್ರೈ ಮಾಡಿಕೊಳ್ಳಿ.
 5. ಈಗ ಹಸಿಮೆಣಸಿನಕಾಯಿ ಹಾಕಿ ಸ್ವಲ್ಪ ಫ್ರೈ ಮಾಡಿಕೊಳ್ಳಿ. ನಂತರ ಇಂದು ಕಪ್ ಈರುಳ್ಳಿ ಹಾಕಿ ಸ್ವಲ್ಪ ಉಪ್ಪನ್ನು ಹಾಕಿ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಚೆನ್ನಾಗಿ ಹುರಿಯಿರಿ.
 6. ಈಗ ಇದಕ್ಕೆ 1 /2 ಟೇಬಲ್ ಚಮಚ್ ಅಚ್ಚಖಾರದ ಪುಡಿ, 1 /2 ಟೇಬಲ್ ಚಮಚ್ ಗರಂ ಮಸಾಲ, 1 /2 ಟೇಬಲ್ ಚಮಚ್ ಧನಿಯಾ ಪುಡಿ, 1 /2 ಟೇಬಲ್ ಚಮಚ್ ಅರಿಶಿಣ ಪುಡಿ ಹಾಕಿ ಎಲ್ಲವನ್ನೂ ಕಲಸಿ ೨ ನಿಮಿಷಿಗಳ ಕಾಲ ಸಣ್ಣ ಉರಿಯಲ್ಲಿ ಫ್ರೈ ಮಾಡಿಕೊಳ್ಳಬೇಕು.
 7. ನಂತರ ಟೊಮೊಟೊ ಹಾಕಿ ಎಣ್ಣೆ ಬಿಡುವ ತನಕ ಫ್ರೈ ಮಾಡಬೇಕು.
 8. ಈಗ ಇದಕ್ಕೆ ಹೆಚ್ಚಿಟ್ಟುಕೊಂಡ ಬದನೆಕಾಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ 2 ರಿಂದ 3 ನಿಮಿಷಗಳ ತನಕ ಬೇಯಿಸಿ.
 9. ಕೊನೆಯದಾಗಿ ಇದಕ್ಕೆ ಕೊತ್ತಂಬರಿಸೊಪ್ಪನ್ನು ಸೇರಿಸಿ. ಒಲೆಯಿಂದ ಇಳಿಸಿ.
 10. ಈಗ ರುಚಿಯಾದ ಬೈಂಗನ್ ಬರ್ತಾ ಸವಿಯಲು ಸಿದ್ದ.