ಇಲ್ಲಿ ಹನುಮಂತನೇ ಹೈಕೋರ್ಟ್, ಸುಪ್ರೀಂ ಕೋರ್ಟ್ ಎಲ್ಲ, ಆಧುನಿಕ ಕಾಲದವರನ್ನು ನಾಚಿಸುವಂತಿದೆ ಇಲ್ಲಿಯ ನ್ಯಾಯಾಂಗ ವ್ಯವಸ್ಥೆ…!!

0
4547

ತಂತ್ರಜ್ಞಾನ ಎಷ್ಟೇ ಮುಂದುವರಿದರು ಪ್ರಕೃತ್ತಿ ಮತ್ತು ದೇವರ ಮುಂದೆ ತಲೆಬಾಗಲೇಬೇಕು. ಮನುಷ್ಯ ಎಷ್ಟೇ ವಿದ್ಯಾವಂತನಾಗಿದ್ದರು, ಜ್ಞಾನಿಯಾಗಿದ್ದರು ನಿಸರ್ಗದ ಸಾಕಷ್ಟು ರಹಸ್ಯವನ್ನು ತಿಳಿಯಲು ಇನ್ನು ಸಾಧ್ಯವಾಗಿಲ್ಲ. ಅದೇ ರೀತಿ ಇದೆ ಈ ಗ್ರಾಮ ಹಾಗು ಈ ನಗರದ ಪವಾಡ ಶಕ್ತಿಯಾದ ಪಂಚಾಯತ್‌ ಹನುಮಂತ ದೇವರು.

 

ಈ ನಗರದಲ್ಲಿ ಹೈಕೋರ್ಟ್ ಇದೆ, ಆದರೂ ಜನ ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ದೇವರ ಮೊರೆಹೋಗುತ್ತಾರೆ, ಅಷ್ಟರ ಮಟ್ಟಿಗೆ ಜನರಿಗೆ ಈ ದೇವರ ಬಗ್ಗೆ ಭಕ್ತಿ, ನಂಬಿಕೆ ಇದೆ. ಈ ನಗರದ ಹೆಸರು ಬಿಲಾಸಪುರ, ಇಲ್ಲಿ ಭಜರಂಗಿ ಪಂಚಾಯತ್‌ ಹೆಸರಿನ ಹನುಮಂತನ ಮಂದಿರ ತುಂಬಾನೆ ಫೇಮಸ್.

ಬಿಲಾಸಪುರದ ಭಜರಂಗಿ ಪಂಚಾಯತ್‌ ಹೆಸರಿನ ಮಂದಿರದಲ್ಲಿ, ಕಳೆದ 80 ವರ್ಷಗಳಿಂದ ಏನೇ ವಿವಾದಗಳು ಸಮಸ್ಯೆಗಳು ಬಂದರು ಇಲ್ಲಿಯೇ ಬಗೆಹರಿಸಲಾಗುತ್ತದೆ. ಜನರಿಗೆ ಇಂತಹುದೇ ಕಠಿಣ ಸಮಸ್ಯೆ ಇದ್ದರೂ ಸಹ ಅದನ್ನು ಈ ಮಂದಿರಕ್ಕೆ ತರುತ್ತಾರೆ. ಇಲ್ಲಿನ ಹನುಮಂತ ಜನರ ಸಮಸ್ಯೆಗಳನ್ನು ಪರಿಹಾರ ಮಾಡುತ್ತಾನೆ ಎಂದು ಜನ ನಂಬುತ್ತಾರೆ.

 

ಇಲ್ಲಿನ ಹಿರಿಯರು ಹೇಳುವ ಪ್ರಕಾರ ಸುಮಾರು 80 ವರ್ಷದ ಹಿಂದೆ ಸುರುಖ್‌ ನಾಯಿ ಹೆಸರಿನ ಒಬ್ಬ ಹನುಮಂತ ಭಕ್ತ, ಅಶ್ವಥ ಮರದ ಕೆಳಗೆ ಅಂಜನೇಯನ ಮೂರ್ತಿಯನ್ನಿಟ್ಟು ಪೂಜೆ ಮಾಡುತ್ತಿದ್ದನಂತೆ, ನಂತರ 1983 ರಲ್ಲಿ ಪಂಚಾಯತ್‌ ಸದಸ್ಯರು ಹಾಗೂ ಹನುಮಾನ್‌ ಭಕ್ತರ ಸಹಾಯದಿಂದ ದೊಡ್ಡದಾದ ಮಂದಿರ ನಿರ್ಮಾಣ ಮಾಡಲಾಯಿತು. ಇಲ್ಲಿಯ, ಮಾರುತಿಯ ಸನ್ನಿದಿಯಲ್ಲಿ ಅನ್ಯಾಯವಾದವರಿಗೆ ಹನುಮಂತನನ್ನು ಸಾಕ್ಷಿಯಾಗಿರಿಸಿ ನ್ಯಾಯ ನೀಡಲಾಗುವುದು, ಜನ ಕೂಡ ಮರು ಮಾತನಾಡದೆ ಗೌರವದಿಂದ ತೀರ್ಪನ್ನು ಒಪ್ಪಿಕೊಳ್ಳುತ್ತಾರೆ.