ಬಾಕಿಲ ಹುಕ್ರಪ್ಪ ಆದರ್ಶ ರಾಜಕೀಯ ನಾಯಕ

0
1068

ಪ್ರಿಯಾ ಬಂದುಗಳೇ ಈ ಪೋಟೋದಲ್ಲಿರುವ ಗಡ್ಡದಾರಿಯ ವ್ಯಕ್ತಿ ಮಾಜಿ..ಶಾಸಕರು ಎಂದರೆ ನಂಬುತ್ತೀರ..?

14542699_10154196912843025_1220518809_n

ಹೌದು ನಾನು ಕೊಡ ಉಹಿಕೊಂಡಿರಲಿಲ್ಲ. ಅತ್ಯಂತ ಹಿಂದುಳಿದ ಮುಗೇರ ಸಮುದಾಯದವರಾದ ಇವರ ಹೆಸರು ಮಾನ್ಯ ಶ್ರೀ ಬಾಕಿಲ ಹುಕ್ರಪ್ಪ ಎಂದು. ೮೩_೮೪ರ ದಶಕದಲ್ಲಿ ಮಾನ್ಯ ದಿ.ರಾಮಕೃಷ್ಣಹೆಗಡೆ ಅವರ ಅಧಿಕಾರದಲ್ಲಿ ಸುಳ್ಯ ಕ್ಷೇತ್ರದ ಬಿ.ಜೆ.ಪಿ.ಪಕ್ಷದ ಶಾಸಕರಾಗಿ ನಂತರ ಕಾಂಗ್ರೇಸಿನ ಮುಖಂಡರಾಗಿ ನಿಷ್ಟವಾಂತ ಸಮಾಜ ಸೇವಕರಾಗಿ ದುಡಿದ ವ್ಯಕ್ತಿಯ ಸ್ಥಿತಿ ಎಂದು ಕೇಳಿದಾಗ ನಂಬಲು ಸಾದ್ಯವಾಗಲಿಲ್ಲ.

capture

ಇವರ ಅಧಿಕಾರದಲ್ಲಿ ಅನೇಕ ಮಂದಿ ವಿವಿಧ ರೀತಿಯ ಉನ್ನತ ಉದ್ಯೋಗವನ್ನು ಪಡೆದುಕೊಂಡಿದ್ದಾರೆ..ಆದರೆ ಇಂದು ಯಾರಿಗೂ ಬೇಡವಾದ ವ್ಯಕ್ತಿಯಾಗಿ ಅವರ ಬದುಕೇ ಒಂದು ಕಾಲೋನಿಯಲ್ಲಿ ಸಾಗುತ್ತಿದೆಯೆಂದರೆ..

ಊಹಿಸಿಕೊಳ್ಳಿ. ? ನಿಜಕ್ಕೂ ಅವರೊಡನೆ ನಾನು ಮಾತನಾಡಿದೆ ಎಂಬುದೇ ನನಗೆ ಹೆಮ್ಮೆ ಎನಿಸಿತು. ಅವರಿಗೆ ನನ್ನ ಕಿಸೆಯಿಂದ ಐವತ್ತು ರೂ ಗಳನ್ನಿಟ್ಟು ನೀವು ಬೇಡವೆನ್ನದೆ ಒಂದು ಚಹಾವನ್ನಾದರು ಕುಡಿಯಬೇಕು ಎಂದಾಗ ಅವರ ಕಣ್ಣಲ್ಲಿ ಆನಂದ ಬಾಷ್ಪ ಮಿಡಿದು ನನ್ನ ಬದುಕಿಗೆ ಆತ್ಮ ವಿಶ್ವಾಸದ ನುಡಿಗಳನ್ನಾಡಿ ಹೃದಯತುಂಬಿ ಹರಸಿದರು. ಅವರಿಗೆ ನನ್ನ ಸಾವಿರ ಪ್ರಣಾಮಗಳು.

capture1

ಇಂತ ವ್ಯಕ್ತಿಗಳ ಆದರ್ಶ ಜೀವನವನ್ನು ಸರ್ಕಾರ ಮನಗೊಂಡು ಅವರ ಮೌಲ್ಯಗಳನ್ನು ದಾಖಲಿಸಿ ನಾಡಿಗೆ ಅರ್ಪಿಸಬೇಕು. ಅವರ ಬದುಕಿಗೆ ಸರ್ಕಾರ ಆಸರೆಯನ್ನು ನೀಡುವಂತಾಗಲಿ ಎಂಬುದು ನನ್ನ ಆಶಯ. ಮತ್ತೊಮ್ಮೆ ಮಾನ್ಯ ಹುಕ್ರಪ್ಪ ಅವರಿಗೆ ನನ್ನ ಕೃತಜ್ಞತೆಗಳನ್ನು ಅರ್ಪಿಸುತ್ತಿದ್ದೇನೆ.

*ಬರಹ: ಮೋಹನ್ ಕುಮಾರ್