ತಾಜ್ ಮಹಲ್-ನಲ್ಲಿ ಕೇವಲ ನಮಾಜ್-ಗೆ ಮಾತ್ರ ಯಾಕೆ ಅವಕಾಶ? ಹಿಂದುಗಳಿಗೂ ಪ್ರಾರ್ಥನೆಗೆ ಅವಕಾಶ ಯಾಕೆ ಮಾಡಬಾರದು?

0
404

ತಾಜ್​ ಮಹಲ್​ನಲ್ಲಿ ಶುಕ್ರವಾರ ನಡೆಯುವ ನಮಾಜ್​​ ನಿಷೇಧಿಸಬೇಕೆಂದು ಆರ್​ಎಸ್​ಎಸ್​ ಅಂಗ ಸಂಸ್ಥೆಯೊಂದು ಹೇಳಿಕೆ ನೀಡಿದ್ದಿ, ಈಗ ವಿವಾದ ಸೃಷ್ಟಿಸಿದೆ. ತಾಜ್​ಮಹಲ್​ ಇದು ಪ್ರೇಮದ ಜ್ಯೋತಕ. ಇದಕ್ಕೆ ಧರ್ಮ ಇಲ್ಲ. ಇಲ್ಲಿ ಎಲ್ಲ ಧರ್ಮಿಯರಿಗೂ ಒಂದೇ ಸ್ಥಾನ.. ಇನ್ನು ಇಸ್ಲಾಂ ಧರ್ಮದವರು ಇದನ್ನು ತಮ್ಮ ಧಾರ್ಮಿಕ ಸ್ಥಳದಂತೆ ಬಿಂಬಿಸಿದ್ದಾರೆ. ಹೀಗಾಗಿ ಇಲ್ಲಿ ನಮಾಜ್​ ಮಾಡಲು ಅವಕಾಶ ನೀಡಬಾರದು. ಪ್ರೀತಿಗೆ ಕಣ್ಣು, ಜಾತಿ, ಧರ್ಮ, ಮೇಲು, ಕೀಳಿನ ಅಡ ತಡೆ ಇಲ್ಲ ಎಂದು ಹೇಳ್ತಾರಲ್ಲ. ಮತ್ತೇ ಇಲ್ಲಿ ನಮಾಜ್​ ಮಾಡೋದು ಏಕೆ ಎಂದು ಪ್ರಶ್ನಿಸಿದೆ.


ಇನ್ನು ಈ ಸ್ಥಳದಲ್ಲಿ ನಮಾಜ್​ ಮುಂದುವರೆದ್ರೆ, ಶಿವನ ಪ್ರಾರ್ಥನೆಗೂ ಅವಕಾಶ ನೀಡಬೇಕೆಂದು ಭಾರತೀಯ ಇತಿಹಾಸ ಸಂಕಲನ ಸಮಿತಿಯ ಸಂಘಟನಾ ಕಾರ್ಯದರ್ಶಿ ಡಾ. ಬಾಲ್ಮುಕುಂದ್ ಪಾಂಡೆ ಆಗ್ರಹಿಸಿದ್ದಾರೆ.
ಇಷ್ಟು ದಿನ ತಾಜ್​ಮಹಲ್​ನಲ್ಲಿ ನಮಾಜ್​ ಮಾಡಲು ಅವಕಾಶ ಕಲ್ಪಿಸಲಾಗಿತ್ತು. ಇನ್ನು ಈ ಅವಕಾಶ ನೀಡಬಾರದು. ಒಂದು ವೇಳೆ ನೀಡಿದ್ದೇ ಆಗಿದ್ದಲ್ಲಿ, ಶಿವನ ಪ್ರಾರ್ಥನೆಗೂ ಅವಕಾಶ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ಹಿಂದೂ ಯುವ ವಾಹಿನಿಯ ಕಾರ್ಯಕರ್ತರು ತಾಜ್ ಮಹಲ್ ನ ಒಳಗೆ ಶಿವ ಚಾಲಿಸ ಮಂತ್ರ ಪಠಿಸಲು ಯತ್ನಿಸಿದ್ದರು. ಈ ವೇಳೆ ಅಲ್ಲಿಯ ಭದ್ರತಾ ಸಿಬ್ಬಂದಿ ಇದನ್ನು ತಡೆದಿದ್ದರು.

ಇನ್ನು ಕೆಲ ದಿನಗಳ ಹಿಂದೆ ಬಿಜೆಪಿ ಶಾಸಕ ತಾಜ್ ಮಹಲನ್ನು ದ್ರೋಹಿಗಳು ನಿರ್ಮಿಸಿದ್ದಾರೆ ಅಂತ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇನ್ನು ಯು.ಪಿ ಸರ್ಕಾರ ಸಿದ್ಧಪಡಿಸಿದ್ದ ಕೈಪಿಡಿಯಲ್ಲೂ ತಾಜ್​ಮಹಲ್​ ಕೈ ಬಿಡಲಾಗಿತ್ತು. ಅಲ್ಲದೆ ಆಗ್ರಗೆ ಭೇಟಿ ನೀಡಿ ಸ್ವಚ್ಛತೆ ಕಾರ್ಯವನ್ನು ನಡೆಸಿದ್ರು.