ಇಂದು ಬನದ ಹುಣ್ಣಿಮೆ ಈ ದಿನ ಪೂರ್ಣಾನಂದ ಸ್ವರೂಪಳಾದ ಬನಶಂಕರಿ ದೇವಿಯನ್ನು ಪೂಜಿಸಿದರೆ ಸಕಲ ಕಾರ್ಯಗಳು ಈಡೇರುವುದು..!!

0
864

ಇಂದು ಬನದ ಹುಣ್ಣಿಮೆ ಈ ದಿನ ಪೂರ್ಣಾನಂದ ಸ್ವರೂಪಳಾದ ಬನಶಂಕರಿ ದೇವಿಯನ್ನು ಪೂಜಿಸಿದರೆ ಸಕಲ ಕಾರ್ಯಗಳು ಈಡೇರುವುದು..!!

ಕರ್ನಾಟಕದಲ್ಲಿ ಪ್ರತಿ ಹುಣ್ಣಿಮೆಗೂ ಒಂದೊಂದು ವಿಶಿಷ್ಟ ಆಚರಣೆಯೂ ಇದೆ. ಅದರಲ್ಲಿ ಪುಷ್ಯ ಮಾಸದ ಹುಣ್ಣಿಮೆಯನ್ನು ಬನದ ಹುಣ್ಣಿಮೆ ಅಥವಾ ಬನಶಂಕರಿ ಹುಣ್ಣಿಮೆಗೆ ಅದರದೇ ಆದ ವಿಶಿಷ್ಟತೆ ಇದೆ. ಬನದ ಹುಣ್ಣಿಮೆಯ ನವರಾತ್ರಿಯು ಪ್ರತಿವರ್ಷ ಪುಷ್ಯ ಮಾಸದ ಶುಕ್ಲ ಪಕ್ಷದ ಅಷ್ಟಮಿ ದಿನದಿಂದ ಪ್ರಾರಂಭ ಆಗುವುದು. ಈ ದಿನದಂದು ಅಷ್ಟಭುಜಗಳಾದ ಅಷ್ಟ ಸಿದ್ಧಿಯನ್ನು ಕೊಡುವ ಸರ್ವಮಂಗಳಾ ದೇವಿಯನ್ನು ಪೂಜಿಸಬೇಕು. ಅಂದು ಪೂರ್ಣಾನಂದ ಸ್ವರೂಪಳಾದ ಬನಶಂಕರಿ ದೇವಿಯನ್ನು ಪೂಜಿಸಿದರೆ ಸಕಲ ಕಾರ್ಯಗಳು ಈಡೇರುವುದು ಎಂಬುದು ನಂಬಿಕೆ.

ಈ ದಿನದಂದು ಬಾದಾಮಿ ಬನಶಂಕರಿ ದೇವಾಲಯ ಮತ್ತು ಕರ್ನಾಟಕದ ಎಲ್ಲಾ ಬನಶಂಕರಿ ದೇವಾಲಯಗಳಲ್ಲಿ ಜಾತಿ, ಮತ ಭೇಧವಿಲ್ಲದೆ ಎಲ್ಲಾ ಭಕ್ತರು ಸೇರಿ ಬನಶಂಕರಿ ರಥೋತ್ಸವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಶಕ್ತಿ ದೇವಿಯಾದ ಬನಶಂಕರಿದೇವಿಯನ್ನು ಬನಸಿರಿದೇವಿ ಎನ್ನಲಾಗುವುದು. ಅಂದು ಬನಶಂಕರಿ ಅಮ್ಮನಿಗೀಗ ವಿಶೇಷ ಅಲಂಕಾರ-ನೈವೇದ್ಯದ ಅಭಿಷೇಕ, ಚಿನ್ನ-ಬೆಳ್ಳಿ-ವಜ್ರಾಭರಣಗಳ ಹೊದಿಸಲಾಗುತ್ತದೆ.

ಈ ದಿನದಂದು ವಿಶೇಷ ಪೂಜೆಗಳು ಹಾಗೂ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಮುತ್ತೈದೆಯರು ಹಾಗೂ ಮದುವೆಯಾಗದವರು ತಮ್ಮ ಬೇಡಿಕೆ ಪೂರೈಸುವಂತೆ ದೇವಿಯನ್ನು ಪೂಜಿಸಿ, ನಿಂಬೆ ಹಣ್ಣಿನ ಸಿಪ್ಪೆಯಲ್ಲಿ ದೀಪವನ್ನು ಹಚ್ಚಿ ಇಡುತ್ತಾರೆ. ಇದರಿಂದ ಬೇಡಿದ ಎಲ್ಲ ಸುಖ ಸಂತೋಷಗಳು ಈಡೇರುತ್ತವೆ. ಯಾವುದೇ ಜಾತಿ ಧರ್ಮದ ಹಂಗಿಲ್ಲದೇ ಎಲ್ಲ ವರ್ಗದವರು ಬನಶಂಕರಿಯ ದರ್ಶನ ಮಾಡಿ ತಮ್ಮ ಜೀವನ ಪಾವನ ಮಾಡಿಕೊಳ್ಳುತ್ತಾರೆ. ಸಾಂಪ್ರದಾಯಗಳನ್ನು ಅಚ್ಚುಕಟ್ಟಾಗಿ ಪಾಲಿಸುವ ಈ ದೇವಾಲಯದಲ್ಲಿ ಕೆಲವೊಂದು ನೀತಿ ನಿಮಯಗಳನ್ನು ಕಠಿಣವಾಗಿ ಪಾಲಿಸುವುದರಿಂದ ಆ ದೇವಿಯನ್ನು ಒಲಿಸಿಕೊಳ್ಳಬಹುದು ಎಂಬ ನಂಬಿಕೆ ಉಂಟು.