ಬಾಳೆ ಹಣ್ಣಿನಲ್ಲಿರೋ ಆರೋಗ್ಯಕರ ಗುಣ ಗೊತ್ತಾದ್ರೆ ಮನೇಲಿ ಬಾಳೆಗೊನೆ ಕಟ್ಟೋದಂತೂ ಗ್ಯಾರಂಟೀ..

0
2035

ಬಾಳೆಹಣ್ಣು ರುಚಿಯಲ್ಲಿ ಸಿಹಿ ಮತ್ತು ಪೌಷ್ಟಿಕವಾದ ಆಹಾರ. ಇದನ್ನು ಪ್ರತಿನಿತ್ಯ ಸೇವಿಸುವುದರಿಂದ ತೂಕದಲ್ಲಿ ಹೆಚ್ಚಳ ಕಂಡುಬರುವುದು ಮತ್ತು ದೇಹಶಕ್ತಿ ದ್ವಿಗುಣವಾಗುವುದು. ಬಾಳೆಹಣ್ಣು ಶೀತಲ ಗುಣವುಳ್ಳದ್ದು. ಬಾಳೆ ಹಣ್ಣಿನಲ್ಲಿ ಗಂಧಕ ಮತ್ತು ಕಬ್ಬಿಣದ ಸತ್ವವು ಅಧಿಕವಾಗಿರುವುದರಿಂದ ಬಲವರ್ಧಕವು, ವೀರ್ಯವರ್ಧಕವು ಆಗಿದೆ.

– ಊಟದ ನಂತರ ಒಂದೆರಡು ಪಕ್ವವಾದ ಬಾಳೆಹಣ್ಣು ಸೇವಿಸುತ್ತಿದ್ದರೆ ಮಲಬದ್ಧತೆಯು ನಿವಾರಣೆಯಾಗುವುದು, ಧಾತು ವೃದ್ಧಿಯಾಗುವುದು.

– ಮೂಲವ್ಯಾಧಿ, ಹೊಟ್ಟೆ ಹುಣ್ಣು ಮತ್ತು ಗುದದ್ವಾರದ ನೋವು ಮತ್ತು ಉರಿಗೆ ಬಾಳೆಕಾಯಿ ತಿರುಳನ್ನು ಹಾಲಿನಲ್ಲಿ ಬೇಯಿಸಿ ತಿನ್ನಬೇಕು.

-ಹೊಟ್ಟೆ ಹುಣ್ಣಿಗೆ: ನೇಂದ್ರ ಬಾಳೆಕಾಯಿಯ ತಿರುಳನ್ನು ಬೇಯಿಸಿ ಮಸೆದು ಅದಕ್ಕೆ ಅದು ಟೀ ಚಮಚ ಒಣಶುಂಠಿ ಚೂರ್ಣ,ಎರಡು ಟೀ ಚಮಚ ಜೀರಿಗೆ ಪುಡಿ,ಎರಡು ಟೀ ಚಮಚ ತುಪ್ಪ, ಬೆಲ್ಲ ಸೇರಿಸಿ ಬೇಯಿಸಿ ಸೇವಿಸಿದರೆ ಹೊಟ್ಟೆ ಹುಣ್ಣು ಗುಣವಾಗುವುದು.

-ಕರುಳಿನಲ್ಲಿರುವ ಸೂಕ್ಷ್ಮ ಕ್ರಿಮಿಗಳು ಹೊರ ಬೀಳಲು ಎಳೆ ಬಾಳೆಕಾಯಿಗಳ್ನ್ನು ಸಿಪ್ಪೆ ಸಹಿತ ಸೇವಿಸಿ.

-ಅಂಗಾಲು ಉರಿ, ಕಣ್ಣು ಉರಿ ನಿವಾರಣೆಗೆ ಬಾಳೆಹಣ್ಣಿನ ತಿರುಳನ್ನು ಮಜ್ಜಿಗೆಯೊಂದಿಗೆ ಚೆನ್ನಾಗಿ ಮಸೆದು ಸೇವಿಸಬೇಕು.

-ಬಾಳೆಹಣ್ಣನ್ನು ಮಜ್ಜಿಗೆಯೊಂದಿಗೆ ಸೇವಿಸಿದರೆ ವಿಷಮಶೀತಜ್ವರ, ಆಮಶಂಕೆ, ಮೂಲವ್ಯಾಧಿಗಳಿಂದ ಗುಣ ಹೊಂದಬಹುದು.

-ಗರ್ಭಿಣಿಯರು ಬಾಳೆಹಣ್ಣನ್ನು ಕ್ರಮವಾಗಿ ಸೇವಿಸುವುದರಿಂದ ರಕ್ತ ಪುಷ್ಟಿಯಾಗುವುದು ಮತ್ತು ಸುಖ ಪ್ರಸವಕ್ಕೆ ದಾರಿಯಾಗುವುದು.

-ಕೆಮ್ಮು ಮತ್ತು ಎದೆನೋವು ಇರುವವರು ಬಾಳೆಹಣ್ಣನ್ನು ಸಕ್ಕರೆ ಮತ್ತು ಜೇನುತುಪ್ಪದೊಂದಿಗೆ ಸೇವಿಸಿದರೆ ಕಡಿಮೆಯಾಗುವುದು.

-ಪ್ರತಿದಿನ ರಾತ್ರಿ ಊಟವಾದ ಎರಡು ಗಂಟೆಗಳ ನಂತರ ಒಂದು ಬಾಳೆಹಣ್ಣು ಮತ್ತು ಒಂದು ಬಟ್ಟಲು ಹಾಲನ್ನು ಸೇವಿಸುವುದರಿಂದ ಜೀರ್ಣಶಕ್ತಿ ಮತ್ತು ದೇಹದ ತೂಕ ಕ್ರಮೇಣ ಹೆಚ್ಚುವುದು.

-ಬಾಳೆಹಣ್ಣಿನ ತಿರುಳನ್ನು ಚೆನ್ನಾಗಿ ಕಿವುಚಿ ಕುರುವಿನ ಮೇಲೆ ಲೇಪಿಸಿದರೆ ವ್ರಣ ಬೇಗ ಮಾಯುವುದು.

– ಬಾಯಾರಿಕೆ ಪರಿಹಾರವಾಗುವುದಕ್ಕೆ,ಆಮಶಂಕೆ ನಿವಾರಣೆಗೆ ಬಾಳೆಹಣ್ಣಿನ ಸಿಪ್ಪೆಯ ಕಷಾಯ ತಯಾರಿಸಿ ಸಕ್ಕರೆ ಮಿಶ್ರ ಮಾಡಿ ಸೇವಿಸಬೇಕು.

-ಬಾಳೆಹಣ್ಣಿನ ತಿರುಳನ್ನು ಹುಣಸೇಹಣ್ಣಿನೊಂದಿಗೆ ಚೆನ್ನಾಗಿ ಅರೆದು ಸೇವಿಸಿದ್ದಲ್ಲಿ ಮಲಬದ್ಧತೆ ನಿವಾರಣೆಯಾಗುವುದು.

-ಚಿಲಿಕ ಹುಡುಗಿಯರಲ್ಲಿ ರಜಸ್ವಲೆಯಾದ ನಂತರ ಅತಿ ರಕ್ತಸ್ರಾವವಾಗುತ್ತಿದ್ದರೆ ಬಾಳೆ ಹೂವಿನ ರಸ ತೆಗೆದು ಮೊಸರಿಗೆ ಸೇರಿಸಿ ಕುಡಿದ್ದಲ್ಲಿ ಗುಣ ಕಂಡುಬರುವುದು.

ಎಲ್ಲ ಖಾಯಿಲೆಗಳಿಗೆ ದುಬಾರಿ ಔಷಧವಿಲ್ಲದೆ, ದುಬಾರಿ ಖರ್ಚಿಲ್ಲದೆ, ಯಾವುದೇ side effects ಇಲ್ಲದಿರುವ treatments ಪಡೆದುಕೊಳ್ಳಿ…
Dr Sharanya
No 1417, Behind Kumaraswamy Temple, Hanumanthanagar
Bengaluru
Phone : 9480198302