ನಿಮ್ಮ ನೆಚ್ಚಿನ ಬಾಳೆಹಣ್ಣು ಇನ್ನಮೇಲೆ ಸಿಗುವುದು ಕಷ್ಟ ಅಂತೇ ಯಾಕೆ ಅನ್ನೋದು ಇಲ್ಲಿದೆ ನೋಡಿ…!

0
2020

ಬಾಳೆಹಣ್ಣು ಭಾರತದಲ್ಲಿ ಹೆಚ್ಚು ಉಪಯೋಗಿಸುವ ಹಣ್ಣುಗಳಲ್ಲಿ ಒಂದು ಇದರಲ್ಲಿ ತುಂಬ ಆರೋಗ್ಯಕರ ಅಂಶಗಳು ಇವೆ.
ಬಾಳೆಹಣ್ಣು ಉಪಯೋಗಿಸುವುದು ಭಾರತದಲ್ಲಿ ಮಾತ್ರ ಅಲ್ಲ ಜಗತ್ತಿನ ಎಲ್ಲಾ ಭಾಗಗಳಲ್ಲಿ ಉಪಯೋಗಿಸುವ ಹಣ್ಣಾಗಿದೆ ಆದ್ರೆ ಈ ಹಣ್ಣು ಕಾಲಕ್ರಮೇಣ ಸಿಗುವುದು ಕಡಿಮೆ ಎಂದು ಸಂಶೋಧನಾ ವರದಿ ತಿಳಿಸಿದೆ. ಅಂದ್ರೆ ಇನ್ನೊಂದು ದಶಕದಲ್ಲಿ ನಶಿಸುವಾ ಹಂತಕ್ಕೆ ಬರುತ್ತದೆ ಎಂದು ಸಂಶೋಧನಾ ವರದಿ ತಿಳಿಸಿದೆ.

Banana comes to an end-1
source:Days Of The Year

ಈ ಬಾಳೆಹಣ್ಣನಿಗೆ ಮೂರು ಫಂಗಲ್ ರೋಗಗಳಿಂದ ಉದ್ಭವಿಸುವ ಸಿಗತೋಕ ಕಾಂಪ್ಲೆಕ್ಸ್ ಎಂಬ ಖಾಯಿಲೆಯಿಂದ ಈ ಅಪಾಯವಿದ್ದು ವಿಶ್ವ ಬಾಳೆಹಣ್ಣು ಪೂರೈಕೆಗೆ ಭಾರಿ ಮಾರಕ ಎಂದು ಬ್ರಿಟಿಷ್ ಮೂಲದ ಜರ್ನಲ್ ಪಿ ಎಲ್ ಓ ಎಸ್ ಜೆನೆಟಿಕ್ಸ್ ಪ್ರಕಟಿಸಿರುವುದಾಗ ಮಾಧ್ಯಮವೊಂದು ವರದಿ ಮಾಡಿದೆ.

Banana comes to an end-2
source:ibestmagazine.com

ಸಿಗತೋಕ ಕಾಂಪ್ಲೆಕ್ಸ್ ಫಂಗಲ್ ರೋಗಗಳಾದ, ಹಳದಿ ಸಿಗತೋಕ, ಯುಮುಸಾಏ ಎಲೆ ಮಚ್ಚೆ ಮತ್ತು ಕರಿ ಸಿಗತೋಕಗಳಿಂದ ಮುಂದಿನ 5 ರಿಂದ 10 ವರ್ಷಗಳಲ್ಲಿ ಬಾಳೆಹಣ್ಣಿನ ಪೂರೈಕೆಯನ್ನೇ ನಾಶಗೊಳಿಸುವ ಸಾಧ್ಯತೆ ಇದೆ. ಎಂದು ಅಧ್ಯಯನದಲ್ಲಿ ಅಮೆರಿಕಾದ ಸಸ್ಯ ರೋಗಶಾಸ್ತ್ರಜ್ಞ ಲೊಅನ್ನಿಸ್ ಸ್ಟರ್ಗಿಯೋಪೌಲೌಸ್ ಹೇಳಿರುವುದಾಗಿ ವರದಿಯಾಗಿದೆ.

Banana comes to an end-3
source:HeSCA

ಬಾಳೆಹಣ್ಣಿನ ರೋಗನಿರೋಧಕ ಶಕ್ತಿಯನ್ನು ಕಳೆಗುಂದಿಸುವುದಲ್ಲದೆ ಕರಿ ಸಿಗತೋಕ ಸಸ್ಯದ ಸೆಲ್ ಗೋಡೆಗಳನ್ನು ಒಡೆಯುವ ಎನ್ಸೈಮ್ ಗಳನ್ನೂ ಕೂಡ ಉತ್ಪಾದಿಸುತ್ತದೆ ಎಂದು ಅಧ್ಯಯನ ತಿಳಿಸಿದೆ.

Banana comes to an end-5
source:cocco-farm.co.jp

ಈ ರೀತಿಯಾದರೆ ಬಾಳೆಹಣ್ಣು ಸಿಗುವುದು ತುಂಬ ಕಷ್ಟವಾಗುತ್ತದೆ ಮತ್ತು ಮುಂದಿನ ದಿನಗಳಲ್ಲಿ ಬಾಳೆಹಣ್ಣಿನ ದರ ಸಹ ಏರಿಕೆಯಾಗುವ ಸಂಭವವಿದೆ ಎಂದು ಹೇಳಲಾಗುತ್ತಿದೆ.