ಹಲವು ರೋಗಗಳಿಗೆ ರಾಮಬಾಣ ಬಾಳೆಹಣ್ಣು

0
655

ಇದು ಸಾಮಾನ್ಯವಾಗಿ ಎಲ್ಲರೂ ಉಪಯೋಗಿಸುವಂತಹ ಹಾಗೂ ಜನಪ್ರಿಯವಾದ ಸ್ವಾದಭರಿತ ಹಣ್ಣು.

1. ಬಾಳೆಹಣ್ಣನ್ನು ಕಿವುಚಿ ಹಾಲು ಹಾಗೂ ಜೇನಿನೊಂದಿಗೆ ಎಳೆಮಕ್ಕಳಿಗೆ ತಿನ್ನಲು ನೀಡಿದರೆ ಮಕ್ಕಳ ಬೆಳೆವಣಿಗೆಗೆ ಹಿತಕರ.

Related image

2. ಗರ್ಭಿಣಿಯರು ನಿಯಮಿತವಾಗಿ ಬಾಳೆಹಣ್ಣು ಸೇವಿಸಿದರೆ ಹೆರಿಗೆ ಸುಲಭವಾಗಿ ಆಗುತ್ತದೆ.

Image result for pragnent

3. ಹಾಲಿಗೆ ಬಾಳೆಹಣ್ಣು ಸಕ್ಕರೆ ಹಾಗೂ ತುಪ್ಪ ಬೆರೆಸಿ ಸೇವಿಸಿದರೆ ದೇಹದ ತೂಕ ಹೆಚ್ಚುತ್ತದೆ.

Image result for banana and sugar and milk

4. ಊಟದ ನಂತರ ಬಾಳೆಹಣ್ಣು ತಿಂದು ಬಿಸಿ ನೀರು ಅಥವಾ ಹಾಲು ಸೇವಿಸಿದರೆ ಮಲಬದ್ಧತೆ ನಿವಾರಣೆಯಾಗುತ್ತದೆ.

Related image

5. ನೇಂದ್ರಬಾಳೆಹಣ್ಣಿನ ತಿರುಳನ್ನು ಬೇಯಿಸಿ ಬೆಲ್ಲ ಮತ್ತು ಜೀರಿಗೆ ಪುಡಿ ಬೆರೆಸಿ ನಿತ್ಯವೂ ಸೇವಿಸಿದರೆ ಹೊಟ್ಟೆಯ ಹುಣ್ಣು ಗುಣವಾಗುತ್ತದೆ.

Image result for stomach ulcer

6. ಬಾಳೆಹಣ್ಣು ಕತ್ತರಿಸಿ ಹಾಲು ಸಕ್ಕರೆ ಬೆರೆಸಿ ಸೇವಿಸಿದರೆ ಪಿತ್ತದಿಂದ ಉಂಟಾದ ಆಮ್ಲಿಯತೆ ಕಡಿಮೆಯಾಗುತ್ತದೆ.

Image result for ಪಿತ್ತ

7. ರಸಬಾಳೆಹಣ್ಣಿನ ಜ್ಯೂಸನ್ನು ಅರ್ಧಲೋಟದಂತೆ ದಿನಕ್ಕೆ ಮೂರು ಸಾರಿ ಕುಡಿಯುವುದರಿಂದ ರಕ್ತಾಯುಕ್ತವಾದ ಭೇದಿ ನಿಲ್ಲುತ್ತದೆ.

Image result for banana juice

8. ಬಾಳೆಹಣ್ಣಿನ ಒಳಗೆ ೪-೫ ಮೆಣಸಿನ ಕಾಲುಗಳನ್ನು ಇತ್ತು ಅದನ್ನು ಜಗಿದು ತಿಂದರೆ ಕೆಮ್ಮು ಪರಿಹಾರವಾಗುತ್ತದೆ.

Image result for cough

9. ಬಾಳೆಯ ಹೂವನ್ನು ವಿಸಿಮಾಡಿ ೧೦-೧೨ ಚಮಚ ರಸ ತೆಗೆಯಬೇಕು. ಅದರಲ್ಲಿ ಅರ್ಧ ಚಮಚ ಕಲ್ಲುಸಕ್ಕರೆ ಪುಡಿ ಬೆರೆಸಿ ಬೆಳೆಗ್ಗೆ ರಾತ್ರಿ ಸೇವಿಸುವುದರಿಂದ ಭೇದಿಯಲ್ಲಿ ರಕ್ತಬೀಳುವುದು ಗುಣವಾಗುತ್ತದೆ.

Image result for banana flower

10. ಬಾಳೆ ಹೂ, ಮಲ್ಲಿಗೆ ಹೂ ಹಿಪ್ಪಲಿ ಹಾಗೂ ತುಳಸಿ – ಇವುಗಳನ್ನು ೧ ಚಮಚದಷ್ಟು (೫ ಗ್ರಾಂ) ಸೇರಿಸಿ ಅರೆದು, ಅಕ್ಕಿ ತೊಳೆದ ನೀರಿನಲ್ಲಿ ಸೇವಿಸಿದರೆ ಕೆಮ್ಮು ದಮ್ಮು ಪರಿಹಾರ. (೧-೨ ವಾರ)

Image result for ದಮ್ಮು