ಬೆಂಗಳೂರಿನಲ್ಲಿ ಜೋರಾಗಿ ತಲೆಯೆತ್ತಿದೆ ಡ್ರಗ್ ಮಾಫಿಯಾ? ಬರ್ತ್ ಡೇ ಪಾರ್ಟಿಯಲ್ಲಿ ಮಾದಕ ವಸ್ತು ಸೇವಿಸಿ ಇಬ್ಬರು ಸಾವು!!

0
221

ಬೆಂಗಳೂರಿನಲ್ಲಿ ಮಾದಕ ವಸ್ತುಗಳಿಗೆ ಎರಡು ಬಲಿಯಾಗಿದ್ದು ಇನ್ನೂ 9 ಜನರ ಸ್ಥಿತಿ ಚಿಂತಾಜನಕವಾಗಿದೆ, ಇವರೆಲ್ಲರೂ ಸ್ನೇಹಿತನ ಬರ್ತ್ ಡೇ ಪಾರ್ಟಿಯಲ್ಲಿ ಡ್ರಗ್​ ಬಳಸಿದ್ದರಿಂದ ಎಲ್ಲರಿಗೂ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಪಾರ್ಟಿಯಲ್ಲಿದ್ದ 11 ಮಂದಿ ಪೈಕಿ ಇಬ್ಬರು ಈಗ ಸಾವನಪ್ಪಿದ್ದು, 9 ಜನರಿಗೆ ಚಿಕಿತ್ಸೆ ಮುಂದುವರೆದಿದೆ. ಮೃತ ಯುವಕರು ಹಾಗೂ ಅವರ ಸ್ನೇಹಿತರು ಟೈಡಾಲ್ ಎಂಬ ಮಾದಕವಸ್ತು ಅಂಶವಿರೋ ಮಾತ್ರೆಯನ್ನು ಗೆಳೆಯನ ಹುಟ್ಟುಹಬ್ಬದ ಪಾರ್ಟಿ ವೇಳೆ ಸೇವಿಸಿದ್ದರು. ಎಂದು ತಿಳಿದು ಬಂದಿದೆ.

ಏನಿದು ಘಟನೆ?

ಶನಿವಾರದಿಂದ ಸೋಮವಾರದವರೆಗೆ ಮಲ್ಲೇಶ್ವರದ ಕೋದಂಡರಾಮಪುರದ ಲಕ್ಷ್ಮೀನರಸಿಂಹಸ್ವಾಮಿ ಜಾತ್ರೆ ನಡೆದಿತ್ತು. ಜಾತ್ರೆಯ ಕಡೆಯ ದಿನವಾದ ಸೋಮವಾರ ರಾತ್ರಿ ಗೆಳೆಯರೆಲ್ಲ ಮಲ್ಲೇಶ್ವರದ ಫ್ಲವರ್ ಮಾರ್ಕೆಟ್​ನ ಬಿಬಿಎಂಪಿ ಗ್ರೌಂಡ್ ಬಳಿ ಸೇರಿ ಪಾರ್ಟಿ‌ ಮಾಡಿದ್ದರು. ಈ ಗುಂಪಿನಲ್ಲಿದ್ದ ಓರ್ವನ ಬರ್ತ್​ಡೇ ಆಚರಣೆ ಮಾಡಲು ಇವರು ಇಲ್ಲಿ ಸೇರಿದ್ದರು. ತಡರಾತ್ರಿವರೆಗೂ ಗೆಳೆಯರೊಂದಿಗೆ ಪಾರ್ಟಿ ಮಾಡಿ ನಂತರ ಇವರು ಮನೆಗೆ ತೆರಳಿದ್ದಾರೆ. ಬೆಳಗಿನ ಜಾವ ಎಲ್ಲರಿಗೂ ತೀವ್ರ ಜ್ವರ, ತಲೆಸುತ್ತು ಹಾಗೂ ಹೊಟ್ಟೆನೋವು ಕಾಣಿಸಿಕೊಂಡಿದೆ. ಈ ಪೈಕಿ ತೀವ್ರ ಅಸ್ವಸ್ಥಗೊಂಡ ಅಭಿಲಾಷ್ ಹಾಗೂ ಗೋಪಿ ಮೃತಪಟ್ಟಿದ್ದಾರೆ.

ಏನಿದು ಟೈಡಾಲ್ ಮಾತ್ರೆಗಳು?

ಟೈಡಾಲ್ ಮಾತ್ರೆಯಲ್ಲಿ ಮಾದಕವಸ್ತು ಅಂಶವಿರುತ್ತದೆ. ಟೈಡಾಲ್ ಮಾತ್ರೆ ಸೇವನೆಯಿಂದ ನಶೆ ಏರುತ್ತದೆ ಹಾಗೆಯೇ ಯುವಕರಿಗೆ ಇದು ಸುಲಭವಾಗಿ ಸಿಗುವ ಔಷಧಿಯಾಗಿದೆ. ಹೀಗಾಗಿ ನಶೆಗಾಗಿ ಯುವಕರು ಪಾರ್ಟಿ ಮಾಡುವ ವೇಳೆ ಇದನ್ನು ಸೇವಿಸಿದ್ದಾರೆ ಎನ್ನುವುದು ಬಯಲಾಗಿದೆ. ಟೈಡಾಲ್ ಮಾತ್ರೆಯನ್ನು ಡಿಸ್ಟಿಲ್ ವಾಟರ್‌ನಲ್ಲಿ ಬೆರೆಸಿ ಸಿರಿಂಜ್ ಮೂಲಕ ಯುವಕರು ತಮ್ಮ ದೇಹಕ್ಕೆ ಇಂಜೆಕ್ಟ್ ಮಾಡಿಕೊಂಡಿದ್ದಾರೆ. 17ರಂದು ಮೂರು ಮಂದಿ ಯುವಕರು ಈ ಟೈಡಾಲ್ ಮಾತ್ರೆಯನ್ನು ತೆಗೆದುಕೊಂಡಿದ್ದರು. ಆದರೆ ಅವರ ಬಗ್ಗೆ ನಿಖರ ಮಾಹಿತಿ ಲಭ್ಯವಾಗಿಲ್ಲ.

ಈ ಮಾತ್ರೆ ಹೇಗೆ ಮಾರಾಟವಾಗುತ್ತೆ?

ಅಕ್ರಮವಾಗಿ ಮೆಡಿಕಲ್ ಸ್ಟೋರ್‌ನಿಂದ ಮಾರಾಟವಾಯಿತ ಇಲ್ಲ ಬೇರೆ ಕಡೆಯಲ್ಲಿ ಇದರ ಜಾಲ ಇದಿಯಾ ಎನ್ನುವುದು ಬಗ್ಗೆ ಖಚಿತ ಮಾಹಿತಿ ಇಲ್ಲ, ಇದನ್ನು ಹೆಚ್ಚಾಗಿ ಬಳಸಿದರೆ ಇದರ ನಶೆ ಅಡಿಟ್ ಆಗುತ್ತಾರೆ ಎಂದು ಕೇಂದ್ರ ವಿಭಾಗ ಡಿಸಿಪಿ ಚೇತನ್ ಸಿಂಗ್ ರಾಠೋರ್ ಹೇಳಿದ್ದಾರೆ. ಈ ಹಿಂದೆ ಇದನ್ನು ಸೇವಿಸಿದ್ದರಾ ಅನ್ನೋದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಮೂರು ಮಂದಿ ಸೇರಿ ಮಾತ್ರೆ ತೆಗೆದುಕೊಂಡು ಬಂದಿದ್ದರು ಅನ್ನೋದು ಗೊತ್ತಾಗಿದೆ. ಬೇರೆವರ ಬಗ್ಗೆ ಮಾಹಿತಿ ಇಲ್ಲ. ಯುವಕರು ಈ ಮಾತ್ರೆಯನ್ನು ಸಿರಿಂಜ್ ಮೂಲಕ ತೆಗೆದುಕೊಂಡಿದ್ದಾರೆ. ಆಸ್ಪತ್ರೆಗೆ ಯುವಕರು ಅಡ್ಮಿಟ್ ಆದಮೇಲೆ ಮಾತ್ರೆ ತೆಗೆದುಕೊಂಡಿರೋ ಬಗ್ಗೆ ವೈದ್ಯರು ತಿಳಿಸಿದ್ದಾರೆ.

ವೈದ್ಯರು ಹೇಳಿದಂತೆ ಯುವಕರು ಪಾಲಕರ ಮರ್ಯಾದೆಗೆ ಅಂಜಿ ಮಕ್ಕಳು ಗಾಂಜಾ ಸೇವನೆ ಮಾಡಿದ್ದನ್ನು ಮುಚ್ಚಿಟ್ಟರು ಎನ್ನುವ ಮಾತು ಕೇಳಿಬಂದಿದೆ. ಈಗ ಇಬ್ಬರು ಸಾವನ್ನಪ್ಪಿದ್ದು ಉಳಿದ 9 ಮಂದಿ ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದಾರೆ. ಅದಕ್ಕಾಗಿ ಪ್ರತಿಯೊಬ್ಬ ಪಾಲಕರು ಮಕ್ಕಳ ಬಗ್ಗೆ ಎಚ್ಚರವಹಿಸುವುದು ಒಳ್ಳೆಯದು ಸ್ವಲ್ಪ ನಿರ್ಲಕ್ಷ್ಯ ವಹಿಸಿದರು ಇಂತಹ ಕೆಟ್ಟ ಚಟಗಳಿಗೆ ದಾಸರಾಗುತ್ತಾರೆ.

Also read: ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಲು ಪ್ರತ್ಯೇಕ ಬಸ್ ಪಥ; ನೀವೀನಾದರು ಕಾರ್ ಅಥವಾ ದ್ವಿಚಕ್ರ ವಾಹನದಲ್ಲಿ ಈ ಪಥದಲ್ಲಿ ಹೋದ್ರೆ ಬೀಳುತ್ತೆ ಭಾರಿ ದಂಡ!!!