ಬೆಂಗಳೂರಿನಲ್ಲಿ ವಿಚಿತ್ರ ಕಳ್ಳರ ಗ್ಯಾಂಗ್​; ರಾತ್ರಿ ವೇಳೆ ಬೆತ್ತಲಾಗಿ ಕಳ್ಳತನ ಮಾಡುವ ಗ್ಯಾಂಗ್.!

0
423

ರಾಜ್ಯದಲ್ಲಿ ವಿಚಿತ್ರ ಕಳ್ಳರ ಗ್ಯಾಂಗ್ ಎಂಟ್ರಿಯಾಗಿದ್ದು, ಈ ಗ್ಯಾಂಗ್​ ರಾತ್ರಿ ವೇಳೆ ಕಳ್ಳತನಕ್ಕೆ ಇಳಿಯುತ್ತದೆ. ಎಲ್ಲರೂ ಮಲಗಿದ್ದಾಗ ಕಾರ್ಯಾಚರಣೆ ನಡೆಸುವ ಇವರು ಮೈ ಮೇಲೆ ಚಿಕ್ಕ ಚಡ್ಡಿ ಬಿಟ್ಟು ಮತ್ತೇನನ್ನೂ ಇಟ್ಟುಕೊಳ್ಳುವುದಿಲ್ಲ. ಸಪ್ಪಳ ಆಗಬಾರದು ಎನ್ನುವ ಕಾರಣಕ್ಕೆ ಇವರು ಚಪ್ಪಲಿಯನ್ನೂ ಕೈಯಲ್ಲೇ ಇಟ್ಟುಕೊಂಡು ಓಡಾಡುತ್ತಾರೆ! ಇತಂಹ ಕಳ್ಳರು ಬೆಂಗಳೂರಿನಲ್ಲಿ ಕಂಡು ಬಂದಿದ್ದು, ಜನರು ರಸ್ತೆಯಲ್ಲಿ ನಡೆದಾಡಲು ಹೆದರುತ್ತಿದ್ದಾರೆ. ಅಚ್ಚರಿ ಎಂದರೆ, ಈ ಗ್ಯಾಂಗ್​ಗೂ ರಾಯಚೂರಿಗೆ ಕನೆಕ್ಷನ್​ ಇದೆ ಎನ್ನಲಾಗಿದೆ.

Also read: ಇಷ್ಟು ದಿನ ಬೈಕ್-ಕಾರ್ ಸವಾರರಿಗೆ ಫೈನ್ ಹಾಕುತ್ತಿದ್ದ ಟ್ರಾಫಿಕ್ ಪೊಲೀಸರು, ಈಗ ಬಸ್ ಪ್ರಯಾಣಿಕರಿಗೂ ದಂಡ ವಿಧಿಸುತ್ತಿದ್ದಾರೆ, ಯಾಕೆ ಅಂತ ಮುಂದೆ ಓದಿ!!

ಬೆತ್ತಲಾಗಿ ಕಳ್ಳತನ?

ಹೌದು ಕಳ್ಳತನ ಮಾಡಲು ಗ್ಯಾಂಗ್ ಮಾಡಿಕೊಂಡು ಪ್ಲಾನ್ ಮಾಡುವ ಖದೀಮರ ವೇಷ ವಿಚಿತ್ರವಾಗಿರುತ್ತೇವೆ. ಅದರಲ್ಲಿ ಗೋಡೆ ಕೊರೆದು, ಕಾರದ ಪುಡಿ ಎರಚಿ, ಗನ್ ಮತ್ತು ಲಾಂಗ್ ತೋರಿಸಿ, ಮಾಸ್ಕ್​​ ಹಾಕೊಂಡು ಕದಿಯೋದು ಮಾಮೂಲಿ. ಆದರೆ, ಬೆಂಗಳೂರಿನಲ್ಲೊಂದು ವಿಚಿತ್ರ ಗ್ಯಾಂಗ್​ ಪ್ರತ್ಯಕ್ಷವಾಗಿದೆ. ಈ ಖದೀಮರು ಕಳ್ಳತನ ಮಾಡುವಾಗ ಬಟ್ಟೆ ಬಿಚ್ಚಿಟ್ಟು ಹೋಗುತ್ತಾರೆ ಎನ್ನುವುದು ವಿಚಿತ್ರ. ಏಕೆಂದರೆ ಈಗ ಜನರು ಮತ್ತು ಪೊಲೀಸ್ ಇಲಾಖೆಗಳು ಹೆಚ್ಚು ಎಚ್ಚರವಹಿಸುತ್ತಿದ್ದು, ಕಳ್ಳತನಕ್ಕೆ ಬ್ರೇಕ್ ಹಾಕುತ್ತಿದ್ದಾರೆ. ಅದಕ್ಕಾಗಿ ಕಳ್ಳರು ಕೂಡ ಅಪ್ಡೇಟ್ ಆಗಿದ್ದು ಹೊಸ ರೀತಿಯಲ್ಲಿ ಕಳ್ಳತನ ಮಾಡುತ್ತಿದ್ದಾರೆ.

Also read: ಕುಡಿತದಿಂದ ಸಾವಿರಾರು ಕುಟುಂಬಗಳು ಬೀದಿಗೆ ಬಂದಿವೆ, ಇದಕ್ಕೆ ಕಾರಣವಾಗಿರುವ ಬಾರ್-ಗಳಿಗೆ ದೇವರ ಹೆಸರು ಇಡುವುದನ್ನು ಬ್ಯಾನ್ ಮಾಡಿದ ಸರ್ಕಾರದ ನಡೆ ಸರಿಯೇ??

ಈ ಗ್ಯಾಂಗ್​ ರಾತ್ರಿ ವೇಳೆ ಕಳ್ಳತನಕ್ಕೆ ಇಳಿಯುತ್ತದೆ. ಎಲ್ಲರೂ ಮಲಗಿದ್ದಾಗ ಕಾರ್ಯಾಚರಣೆ ನಡೆಸುವ ಇವರು ಮೈ ಮೇಲೆ ಚಿಕ್ಕ ಚಡ್ಡಿ ಬಿಟ್ಟು ಮತ್ತೇನನ್ನೂ ಇಟ್ಟುಕೊಳ್ಳುವುದಿಲ್ಲ. ಸಪ್ಪಳ ಆಗಬಾರದು ಎನ್ನುವ ಕಾರಣಕ್ಕೆ ಇವರು ಚಪ್ಪಲಿಯನ್ನೂ ಕೈಯಲ್ಲೇ ಇಟ್ಟುಕೊಂಡು ಓಡಾಡುತ್ತಾರೆ! ಮತ್ತೊಂದು ವಿಚಿತ್ರ ಎಂದರೆ, ಇವರ ಕೈಯಲ್ಲಿ ಕಲ್ಲಿರುತ್ತದೆ. ಯಾರಾದರೂ ಹಿಡಿಯಲು ಮುಂದಾದರೆ ಕಲ್ಲಿನಿಂದ ದಾಳಿ ಮಾಡಿ ಬಿಡುತ್ತಾರೆ. ಹತ್ತಿರ ಬಂದರೆ ಚಾಕುವಿನಿಂದ ಇರಿಯುತ್ತಾರೆ. ಯಾರ ಹಿಡಿತಕ್ಕೂ ಸಿಗಬಾರದು ಎನ್ನುವ ಕಾರಣಕ್ಕೆ ಮೈಗೆ ಎಣ್ಣೆ ಹಚ್ಚಿಕೊಳ್ಳುತ್ತಾರೆ.

ಇವರು ಎಷ್ಟು ಚಾಲಾಕಿ ಎನ್ನುವುದಕ್ಕೆ ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯಗಳೇ ಸಾಕ್ಷಿ. ಈ ತಂಡ ಮನೆಯೊಂದರಲ್ಲಿ ಕಳ್ಳತನ ನಡೆಸಿದೆ. ಆ ಮನೆಯವರು ನಾಯಿಯನ್ನು ಕೂಡ ಸಾಕಿದ್ದರು. ಆದರೆ, ನಾಯಿಗೂ ಗೊತ್ತಾಗದಂತೆ ಕಳ್ಳತನ ಮಾಡಿ ಈ ಗ್ಯಾಂಗ್​ ಮನೆಯಿಂದ ಹೊರ ಬಿದ್ದಿದೆ.ಇವರು ಕದ್ದಂತಹ ವಸ್ತುಗಳನ್ನು ಟವೆಲ್​ನಲ್ಲಿ ಕಟ್ಟಿ ಬೆನ್ನಿಗೆ ಕಟ್ಟಿಕೊಳ್ಳುತ್ತಾರೆ. ಎದುರಿನಿಂದ ಬರುವವರಿಗೆ ಈತ ಕಳ್ಳ ಎನ್ನುವ ಒಂದು ಚಿಕ್ಕ ಸೂಚನೆಯೂ ಸಿಗುವುದಿಲ್ಲ. ಒಂದೊಮ್ಮೆ ಸಿಕ್ಕರೆ ಎದುರಿದ್ದವರ ಕೊಲೆ ಗ್ಯಾರಂಟಿ.
ಈ ಗ್ಯಾಂಗ್​ಗೂ ರಾಯಚೂರಿಗೆ ಕನೆಕ್ಷನ್​ ಇದೆ ಎನ್ನಲಾಗಿದೆ.

Also read: ಕರ್ನಾಟಕ ಕ್ರಿಕೆಟ್-ಗೆ ಕರಾಳ ದಿನ; ಫಿಕ್ಸಿಂಗ್ ಆರೋಪ ಹೊತ್ತು ಸಿ.ಎಂ.ಗೌತಮ್, ಅಬ್ರಾರ್ ಕಾಝಿ ಸೇರಿದಂತೆ ೭ ಜನ ಅರೆಸ್ಟ್!

ಕಳೆದ ವರ್ಷ ರಾಯಚೂರು ಜಿಲ್ಲೆಯಲ್ಲಿಯೂ ಇದೇ ರೀತಿಯ ಗುಂಪು ಆ್ಯಕ್ಟಿವ್​ ಆಗಿತ್ತು. ಇವರು ಹಾಡುಹಗಲೇ ಗುಂಪಾಗಿ ಹೋಗಿ ಕಳ್ಳತನ ಮಾಡುತ್ತಿದ್ದರು. ಇವರು ಚಡ್ಡಿ ಹಾಕಿಕೊಂಡು, ಮೈಗೆ ಎಣ್ಣೆ ಹಚ್ಚಿಕೊಂಡಿರುತ್ತಿದ್ದರು. ಹೀಗಾಗಿ, ಇವರಿಗೆ ಚಡ್ಡಿ ಗ್ಯಾಂಗ್​ ಎನ್ನುವ ಪಟ್ಟ ನೀಡಲಾಗಿತ್ತು. ಈ ತಂಡದಲ್ಲಿ ೧೦ಕ್ಕೂ ಹೆಚ್ಚು ಜನ ಇದ್ದರು. ರಾಯಚೂರಿನಲ್ಲಿ ಸಾಕಷ್ಟು ಮನೆಗಳನ್ನು ಇವರು ಕಳ್ಳತನ ಮಾಡಿದ್ದರು. ಈ ವರ್ಷದ ಆರಂಭದಲ್ಲಿ ತಂಡದ 5 ಜನರನ್ನು ಪೊಲೀಸರು ಬಂಧಿಸಿದ್ದರು. ಕೆಲವರು ಪೊಲೀಸರ ಕಣ್ಣುತಪ್ಪಿಸಿ ಪರಾರಿಯಾಗಿದ್ದರು ಎನ್ನಲಾಗಿದೆ. ಹೀಗೆ ತಪ್ಪಿಸಿಕೊಂಡು ಬಂದವರೇ ಈಗ ಬೆಂಗಳೂರಿನಲ್ಲಿ ಆ್ಯಕ್ಟಿವ್​ ಆಗಿದ್ದಾರಾ ಎನ್ನುವ ಶಂಕೆ ಕೂಡ ಮೂಡಿದೆ. ಆದ ಕಾರಣ ಬೆಂಗಳೂರಿಗರು ಎಚ್ಚರದಿಂದ ಇರುವುದು ಒಳ್ಳೆಯದು.