ಪೈಲ್ವಾನ್ ಸಿನಿಮಾ ಲಿಕ್ ಮಾಡಿದ ಆರೋಪಿ ಬಂಧನ; ಆರೋಪಿಯ ಫೇಸ್​ಬುಕ್​-ನಲ್ಲಿ ದರ್ಶನ್​ ಫೋಟೋ.. ಹಾಗಾದ್ರೆ ಪೈರಸಿ ಮಾಡಿದ್ದು ದರ್ಶನ್ ಅಭಿಮಾನಿನಾ??

0
357

ಕಿಚ್ಚ ಸುದೀಪ್ ಅವರ ‘ಪೈಲ್ವಾನ್’ ಸಿನಿಮಾ ಕುರಿತು ಹಲವು ವಿವಾದಗಳು ಸೃಸ್ತಿಯಾಗಿದ್ದು, ಅಭಿಮಾನಿಗಳು ಮಾಡಿದ ತಪ್ಪಿಗೆ ಇಬ್ಬರು ಸ್ಟಾರ್ ನಟರ ನಡುವೆ ಯುದ್ದ ತಂದಿತ್ತು, ಅದರಂತೆ ಪೈಲ್ವಾನ್ ಸಿನಿಮಾ ಭಾರಿ ಸದ್ದು ಮಾಡಿ ಬಾಕ್ಸ್ ಆಫೀಸ್ ತುಂಬಿಸುತ್ತಿದ್ದು, ಇದರ ಹವಾ ಮುರಿಯಲಿ ಕಿಡಿಗೇಡಿಗಳು ಪೈಲ್ವಾನ್​’ ಸಿನಿಮಾ ಪೈರಸಿ ಮಾಡಿ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ ಹಾಗೂ ಯುಟ್ಯೂಬ್‌ಗ ಹಾಕಿದ್ದಾರೆಂದು ಆರೋಪಿಸಿ ನಿರ್ಮಾಪಕಿ ಸ್ವಪ್ನ ಕೃಷ್ಣ ಸೈಬರ್‌ ಕ್ರೈಂ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದರು ಈ ಕುರಿತು ಪ್ರಕರಣವನ್ನು ಬೆನ್ನುಹತ್ತಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

Also read: ತೆರೆಗೆ ಬರಲಿದೆ ಕಾಂಗ್ರೆಸ್ ಟ್ರಬಲ್ ಶೂಟರ್, ಕನಕಪುರ ಬಂಡೆ ಡಿ.ಕೆ ಶಿವಕುಮಾರ್ ಜೀವನಾಧಾರಿತ ಚಿತ್ರ?

ಪೈಲ್ವಾನ್ ಸಿನಿಮಾ ಲಿಕ್ ಮಾಡಿದ ಆರೋಪಿ ಅಂದರ್?

ಹೌದು ಕಿಚ್ಚ್ ಸುದೀಪ್ ಅವರ ಅಭಿಮಾನಿಗಳಲ್ಲಿ ಬೇಸರ ಹುಟ್ಟಿಸಿದ ಸಿನಿಮಾ ಲಿಕ್ ವಿಚಾರಕ್ಕೆ ರಾಕೇಶ್ ಅಲಿಯಾಸ್ ವಿರಾಟ್ ಎನ್ನುವನನ್ನು ಸೈಬರ್ ಪೊಲೀಸರು ಬಂಧಿಸಿದ್ದು, ರಾಕೇಶ್ ಪೈಲ್ವಾನ್ ಸಿನಿಮಾದ ಲಿಂಕ್ ಅನ್ನು ತನ್ನ ಫೇಸ್‍ಬುಕ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದನು. ಹೀಗಾಗಿ ಸಿಸಿಬಿ ಪೊಲೀಸರು ನೆಲಮಂಗಲದ ಹಿಮಚೇನಹಳ್ಳಿಯಲ್ಲಿ ಆರೋಪಿ ರಾಕೇಶ್‍ನನ್ನು ವಿಚಾರಣೆ ನಡೆಸಿದ್ದಾರೆ ಪೈಲ್ವಾನ್ ಚಿತ್ರದ ನಿರ್ಮಾಪಕಿ ಸ್ವಪ್ನ ಕೃಷ್ಣ ಅವರು ಚಿತ್ರ ಬಿಡುಗಡೆ ಆದ ದಿನವೇ ಪೈರಸಿಯಾಗಿತ್ತು ಎಂದು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ನಿರ್ಮಾಪಕಿ ದೂರು ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ನೆಲಮಂಗಲದ ಹಿಮಚೇನಹಳ್ಳಿ ನಿವಾಸಿ ರಾಕೇಶ್​ ವಿರಾಟ್​ ಬಂಧಿತ ಯುವಕ. ರಾಕೇಶ್​ ಫೇಸ್​​ಬುಕ್​ನಲ್ಲಿ ‘ಪೈಲ್ವಾನ್​’ ಸಿನಿಮಾದ ಲಿಂಕ್​ ಶೇರ್​ ಮಾಡಿಕೊಂಡಿದ್ದ. ಹೀಗಾಗಿ, ರಾಕೇಶ್ ಮೊಬೈಲ್​ಅನ್ನು ಸಿಸಿಬಿ ಪೊಲೀಸರು ಜಪ್ತಿ ಮಾಡಿ, ತನಿಖೆ ಆರಂಭಿಸಿದ್ದಾರೆ. ಈತ ರಾಕೇಶ್ ವಿರಾಟ್ ಎಂದು ಹೆಸರು ಬದಲಿಸಿಕೊಂಡಿದ್ದ. ತಮಿಳ್​ ರಾಕರ್ಸ್​ ಸೇರಿ ಸಾಕಷ್ಟು ಸೈಟ್​ಗಳು ‘ಪೈಲ್ವಾನ್​’ ಸಿನಿಮಾ ತೆರೆಕಂಡ ದಿನವೇ ಪೈರಸಿ ಮಾಡಿದ್ದವು. ಇದನ್ನು ದರ್ಶನ್​ ಅಭಿಮಾನಿಗಳು ಶೇರ್​ ಮಾಡಿಕೊಂಡಿದ್ದಾರೆ ಎನ್ನಲಾಗಿತ್ತು. ಈ ಕುರಿತು ಪ್ರತಿಕ್ರಿಯಿಸಿರುವ ಸಿಸಿಬಿ ಆಯುಕ್ತ ಸಂದೀಪ್​ ಪಾಟೀಲ್​, “ಇತ್ತೀಚೆಗೆ ‘ಪೈಲ್ವಾನ್’​ ಸಿನಿಮಾ ಲೀಕ್ ಆದ ಬಗ್ಗೆ ಹಾಗೂ ಅದರ ಲಿಂಕ್​ ಶೇರ್​ ಮಾಡುತ್ತಿರುವ ಬಗ್ಗೆ ನಮಗೆ ದೂರು ಬಂದಿತ್ತು. ಪ್ರಕರಣದ ಪ್ರಮುಖ ಆರೋಪಿ ರಾಕೇಶ್​ ಎಂಬುವವನ್ನು ಬಂಧಿಸಿದ್ದೇವೆ. ಎಂದು ಮಾಹಿತಿ ನೀಡಿದ್ದು.

ಲಿಕ್ ಮಾಡಿದವನು ದರ್ಶನ್ ಅಭಿಮಾನಿ?

ಪೈಲ್ವಾನ್ ಸಿನಿಮಾ ಲಿಂಕ್​ ಮಾಡಿದ ರಾಕೇಶ್ ಬಳಿ ಲಿಂಕ್ ಹೇಗೆ ಬಂತು ಮತ್ತು ಎಷ್ಟು ಜನರಿಗೆ ಇದನ್ನು ಈತ ಶೇರ್​ ಮಾಡಿದ್ದಾನೆ ಎನ್ನುವುದನ್ನು ತನಿಖೆ ನಡೆಸುತ್ತೇವೆ,” ಎಂದಿದ್ದಾರೆ. ಫೇಸ್​ಬುಕ್​ ಖಾತೆಯಲ್ಲಿ ದರ್ಶನ್​ ಹಾಗೂ ವಿರಾಟ್ ಕೊಹ್ಲಿ ಫೋಟೋಗಳಿವೆ. ಹೀಗಾಗಿ ಈತ ದರ್ಶನ್​ ಹಾಗೂ ವಿರಾಟ್​ ಅಭಿಮಾನಿ ಎನ್ನಲಾಗುತ್ತಿದೆ. ದರ್ಶನ್​ ಅಭಿನಯದ ‘ವಿರಾಟ್​’ ಸಿನಿಮಾ ನೋಡಿ ಈತ ತನ್ನ ಹೆಸರನ್ನು ರಾಕೇಶ್ ವಿರಾಟ್​ ಎಂದು ಬದಲಾಯಿಸಿಕೊಂಡಿದ್ದಾನೋ ಅಥವಾ ಈತ ಕೊಹ್ಲಿ ಅಭಿಮಾನಿಯೋ ಎಂಬುದು ತಿಳಿದುಬಂದಿಲ್ಲ. ಈ ಬಗ್ಗೆ ಪೊಲೀಸರಿಂದ ಅಧಿಕೃತ ಮಾಹಿತಿ ಸಿಕ್ಕಿಲ್ಲ. ಎಂದು ಸೈಬರ್ ಪೊಲೀಸರು ತಿಳಿಸಿದ್ದಾರೆ.

ಒಟ್ಟಾರೆಯಾಗಿ ಕನ್ನಡ ಸಿನಿಮಾ ರಂಗದಲ್ಲಿ ಹತ್ತಿ ಉರಿಯುತ್ತಿದ್ದ ಪೈರೆಸಿ ವಿವಾದಕ್ಕೆ ಒಂದು ರೀತಿಯ ಸುಳಿವು ಸಿಕ್ಕಿದ್ದು, ಇವನು ದರ್ಶನ ಅಭಿಮಾನಿ ಎನುವುದು ವಿಚಾರಣೆಯಿಂದ ತಿಳಿಯಬೇಕಿದೆ ಸದ್ಯ ವ್ಯಕ್ತಿಯ ಫೇಸ್ಬುಕ್ ಪ್ರೊಫೈಲ್ ನೋಡಿದರೆ ದರ್ಶನ ಹೆಸರು ಎದ್ದು ಕಾಣುತ್ತಿದೆ.

Also read: ಮತ್ತೊಮ್ಮೆ ದಚ್ಚು, ಕಿಚ್ಚು ಮುಖಾಮುಖಿ; ಸ್ಯಾಂಡಲ್ ವುಡ್-ನಲ್ಲಿ ಮತ್ತೆ ದರ್ಶನ್ ಸುದೀಪ್ ನಡುವೆ ಕಾಳಗ; ಎಲ್ಲಿ? ಹೇಗೆ? ಇಲ್ಲಿದೆ ನೋಡಿ ಮಾಹಿತಿ..