ಸುಂದರ ಬೆಂಗಳೂರನ್ನು ಕಾಂಗ್ರೆಸ್ ಸರ್ಕಾರ ಕ್ರೈಂ ಸಿಟಿ ಮಾಡಿದೆ, ಬೆಂಗಳೂರನ್ನು ನಾವು ಕಾಪುಡುತ್ತೇವೆ ಎಂದು ಹೊಸ ಅಭಿಯಾನ ಶುರು ಮಾಡಿದ ಬಿ.ಜೆ.ಪಿ.

0
427

Kannada News | Karnataka News

ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಅಧಿಕಾರಕ್ಕೆ ಬಂದಾಗಿನಿಂದ ಭ್ರಷ್ಟಾಚಾರ ಹೆಚ್ಚಿದೆ. ಜನ ಸಾಮಾನ್ಯರು ಕಟ್ಟಿದ ತೆರಿಗೆ ಹಣವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ದುರುಪಯೋಗ ಪಡಿಸಿಕೊಂಡಿದೆ, ಸರ್ಕಾರ ಜನರ ಹಣವನ್ನು ಹಗಲು ದರೋಡೆ ಮಾಡುತ್ತಿದೆ ಎಂದು ಬಿಜೆಪಿಯವರು ಆರೋಪಿಸಿದ್ದಾರೆ.

ಏನಿದು ಹೊಸ ಆರೋಪ ಅಂತೀರಾ? ಬಿಜೆಪಿಯವರು “ಬೆಂಗಳೂರಿನ ಜನರಿಗೆ ಲೆಕ್ಕ ಕೊಡಿ” ಎಂಬ ಘೋಷಣಾ ವಾಕ್ಯದೊಂದಿಗೆ ಬಿಜೆಪಿ ನಗರ ಘಟಕ ಸಿದ್ಧಪಡಿಸಿರುವ 15 ಪುಟಗಳ ಆರೋಪ ‍ಪಟ್ಟಿಯನ್ನು ಪಕ್ಷದ ರಾಜ್ಯ ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವಡೇಕರ್ ಗುರುವಾರ ಬಿಡುಗಡೆ ಮಾಡಿದ್ದಾರೆ ಇದನ್ನೇ ಹಿಡಿದುಕೊಂಡು ಕಾಂಗ್ರೆಸ್ ಅನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ ಬಿಜೆಪಿ ನಾಯಕರು.

ಇತ್ತೀಚಿಗೆ ಕಾಂಗ್ರೆಸ್‌ ಶಾಸಕರಾದ ಹ್ಯಾರಿಸ್ ಪುತ್ರನ ದೌರ್ಜನ್ಯ, ಬಿ.ಎ. ಬಸವರಾಜ್‌ ಬೆಂಬಲಿಗ ನಾರಾಯಣ ಸ್ವಾಮಿಯಿಂದ ಪೆಟ್ರೋಲ್ ಚೆಲ್ಲಾಟ, ಪೊಲೀಸ್ ಅಧಿಕಾರಿಯ ಮನೆಯಲ್ಲೇ ಕಳವು, ಸಬ್ ಇನ್ಸ್‌ಪೆಕ್ಟರ್‌ ರಿವಾಲ್ವರ್‌ ಕಸಿದುಕೊಂಡ ಪ್ರಕರಣ, ಮಹಿಳಾ ಸಬ್ ಇನ್ಸ್‌ಪೆಕ್ಟರ್‌ ಮೇಲೆ ಗೂಂಡಾಗಳ ದೌರ್ಜನ್ಯ, ನಿಲ್ಲದ ಸರಗಳವು ಪ್ರಕರಣಗಳು ಗೂಂಡಾರಾಜ್ಯವಾಗಿ ಬದಲಾಗಿರುವುದಕ್ಕೆ ಸಾಕ್ಷಿಯಾಗಿದೆ.

ಕೇಂದ್ರ ಸರ್ಕಾರ ಬೆಂಗಳೂರು ಅಭಿವೃದ್ಧಿಯ ಬಗ್ಗೆ ಸಾಕಷ್ಟು ಅನುದಾನ ನೀಡಿದೆ, ಆದರೆ ಅದನ್ನು ಅಭಿವೃದ್ಧಿ ಕಾರ್ಯಕ್ಕೆ ಬಳಸದೆ ಕೊಳ್ಳೆ ಹೊಡೆದ್ದಿದ್ದಾರೆ ಎಂದು ರಾಜ್ಯ ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವಡೇಕರ್ ಗಂಭೀರ ಆರೋಪ ಮಾಡಿದ್ದಾರೆ. ವಸತಿ ಸಚಿವ ಕೃಷ್ಣಪ್ಪ, ಬೆಂಗಳೂರು ಅಭಿವೃದ್ಧಿ ಸಚಿವ ಜಾರ್ಜ್‌ ರಿಯಲ್ ಎಸ್ಟೇಟ್ ಕೇವಲ ತಮ್ಮ ಅಭಿವೃದ್ಧಿ ಮಾಡಿಕೊಳ್ಳುತ್ತಿದ್ದಾರೆ ಎಂದರು.

Also Read: 34 ವರ್ಷಗಳಲ್ಲಿ 71 ಟ್ರಾನ್ಸ್ಫರ್-ಗಳ ಬಳಿಕ ಈ ನಿಷ್ಠಾವಂತ ಐ.ಎ.ಎಸ್. ಅಧಿಕಾರಿಗೆ 6 ತಿಂಗಳಿನಿಂದ ಸಂಬಳವೂ ಕೊಟ್ಟಿಲ್ಲ.. ಎತ್ತ ಸಾಗುತ್ತಿದೆ ನಮ್ಮ ಭಾರತ??