ಸಾವಿರಾರು ಉದ್ಯೋಗಗಳು ಬೆಂಗಳೂರು ಉದ್ಯೋಗ ಮೇಳದಲ್ಲಿ ಭರ್ತಿಯಾಗುವ ಸಾಧ್ಯತೆ ಇದೆ. ಉದ್ಯೋಗಾಕಾಂಕ್ಷಿಗಳೇ ತಪ್ಪದೆ ಇದನ್ನು ಓದಿ..

0
1019

ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಹಾಗು ಖಾಸಗಿ ನಿಯೋಜಕರ ಸಂಯುಕ್ತ ಆಶ್ರಯದಲ್ಲಿ ನಿರುದ್ಯೋಗಿ ಯುವಕರು ಹಾಗು ಯುವತಿಯರಿಗೆ ನೇರ ಸಂದರ್ಶನಕ್ಕೆ ಅನುಕೂಲವಾಗುವಂತೆ

ದಿನಾಂಕ 26/10/2017ರ ಗುರುವಾರ ಬೆಳಿಗ್ಗೆ 10:00 ಗಂಟೆಯಿಂದ ಸಂಜೆ 4:00 ಗಂಟೆಯವರೆಗೆ ಸರ್ಕಾರಿ ವಿಜ್ಞಾನ ಕಾಲೇಜು, ನೃಪತುಂಗ ರಸ್ತೆ, ಬೆಂಗಳೂರು, ಕರ್ನಾಟಕ 560001 ಇಲ್ಲಿ “ಉದ್ಯೋಗ ಮೇಳ” ಹಮ್ಮಿಕೊಳಲಾಗಿದೆ.

ಈ ಮೇಳದಲ್ಲಿ ಟಾಟಾ ಮೋಟಾರ್ಸ್‌, ಟಾಟಾ ಮಾರ್ಕೋಪೋಲೋ, ವಿಪ್ರೊ ಸೇರಿದಂತೆ ಸುಮಾರು 40 ಕಂಪೆನಿಗಳು ಪಾಲ್ಗೊಳ್ಳಲಿವೆ.

ಅರ್ಧದಲ್ಲಿಯೇ ಶಿಕ್ಷಣ ಮೊಟಕುಗೊಳಿಸಿದವರು, ಎಸ್‌ಎಸ್‌ಎಲ್‌ಸಿ, ಡಿಪ್ಲಮೋ, ಬಿಇ, ಬಿಟೆಕ್, ಐಟಿಐ, ಪದವಿ ಮುಗಿಸಿದ ಯುವಕ ಮತ್ತು ಯುವತಿಯರು ತಮ್ಮ ಮೂಲ ದಾಖಲಾತಿಗಳೊಂದಿಗೆ ಆಧಾರ್ ಕಾರ್ಡ್ ಪ್ರತಿ ಸಮೇತ ಮೇಳದಲ್ಲಿ ಪಾಲ್ಗೊಳ್ಳಬಹುದಾಗಿದೆ.

ಸಾವಿರಾರು ಉದ್ಯೋಗಗಳು ಬೆಂಗಳೂರು ಉದ್ಯೋಗ ಮೇಳದಲ್ಲಿ ಭರ್ತಿಯಾಗುವ ಸಾಧ್ಯತೆ ಇದೆ. ಉದ್ಯೋಗಾಕಾಂಕ್ಷಿಗಳಿಗೆ ಇದು ಸುವರ್ಣಾವಕಾಶ. ಹಲಾವಾರು ಪ್ರತಿಷ್ಠಿತ ಸಂಸ್ಥೆಗಳಲ್ಲಿ ಒಳ್ಳೆ ಸಂಬಳ ಸಿಗುವ ಕೆಲಸ ಹಿಡಿದುಕೊಂಡು ಜೀವನದಲ್ಲಿ ಒಳ್ಳೆ ವೃತ್ತಿ ಜೀವನ ಆರಂಭಿಸ ಬೇಕು ಎಂದು ಕನಸ್ಸು ಕಾಣುತ್ತಿರುವ ಯುವಕ-ಯುವತಿಯರಿಗೆ ಇದು ಬಹಳ ಅನುಕೂಲವಾಗುತ್ತದೆ..

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 22289668 / 22261184 / 22374582 / 22268846 / 22259351.