ಕೆಂಪೇಗೌಡರು ಕಟ್ಟಿದ ಬೆಂಗಳೂರಿನ ಜೀವನಾಡಿ ಕೆರೆಗಳು ಇಂದು ಮನಷ್ಯರಿಗಷ್ಟೇ ಅಲ್ಲ ಪ್ರಾಣಿಗಳಿಗೂ ವಿಷ ಕಾರುತ್ತಿದೆ.. ಇದಕೆಲ್ಲ ಯಾರು ಕಾರಣ??

0
509

Kannada News | Karnataka News

ಸಿಲಿಕಾನ್ ಸಿಟಿ ಬೆಂಗಳೂರು ತನ್ನ ಉದ್ಯಾನಗಳಿಂದ, ಬೆಳೆಯುತ್ತಿರುವ ಕೈಗಾರಿಕೆಗಳಿಂದ ಐಟಿ ಕಂಪನಿಗಳಿಂದ ಮತ್ತು ನಗರದ ಸುಂದರ ಕೆರೆಗಳಿಂದ ಸಾಕಷ್ಟು ಹೆಸರು ಮಾಡಿದೆ. ಆದರೆ, ರಾಜಧಾನಿಯ ಕೆರೆಯ ನೀರು ಮನುಷ್ಯ ಮಾತ್ರವಲ್ಲ ಯಾವ ಪ್ರಾಣಿಯು ಸಹ ಸೇವಿಸಲು ಯೋಗ್ಯವಲ್ಲದಸ್ಟು ಕಲುಷಿತವಾಗಿವೆಯಂತೆ ಗೊತ್ತೇ.

ಬೆಂಗಳೂರಿನ ಟ್ರಾಫಿಕ್ ಮತ್ತು ಗಾಳಿಯ ಗುಣಮಟ್ಟವಲ್ಲದೆ, ಜಲಮೂಲಗಳ ಪರಿಸ್ಥಿತಿಯು ಈಗ ಚರ್ಚೆಯ ವಿಷಯವಾಗಿದೆ. ನಗರದ ಟ್ಯಾಂಕುಗಳು / ಸರೋವರಗಳಲ್ಲಿನ ನೀರಿನ ಗುಣಮಟ್ಟ ಕುರಿತು ಇತ್ತೀಚಿನ ವರದಿಗಳು ಕೇವಲ ಅಗರಾ ಕೆರೆ ಮತ್ತು ಉಲ್ಸೂರ್ ಕೆರೆ ಈ ಎರಡು ಜಲಮೂಲಗಳು ಮಾತ್ರ ತೃಪ್ತಿದಾಯಕ ಮಟ್ಟದಲ್ಲಿ ಅರ್ಹತೆ ಪಡೆದಿವೆ.

ನಗರದ ಬೊಮನಹಳ್ಳಿಯಲ್ಲಿರುವ ಸೋಮಸುಂದರಾಪಾಳ್ಯ ಕೆರೆ, ಯಲಹಂಕದ ಪುಟ್ಟೆನಹಳ್ಳಿ ಕೆರೆ, ಶಿವಪುರದ ಟ್ಯಾಂಕ್ ಮತ್ತು ಪೀಣ್ಯದಲ್ಲಿರುವ ಕರಿಹೋಬನಹಳ್ಳಿ ಕೆರೆ ಪರೀಕ್ಷೆಯಲ್ಲಿ ಅತ್ಯಂತ ಕಡಿಮೆ ಅಂಕಗಳನ್ನು ಪಡೆದಿವೆ, ಅಂದರೆ ಈ ಕೆರೆಗಳು ಅತ್ಯಂತ ಕಲುಷಿತವಾಗಿವೆ ಎಂದರ್ಥ.

ಇತ್ತೀಚಿನ ಅಂಕಿ ಅಂಶಗಳನ್ನು ಕರ್ನಾಟಕ ರಾಜ್ಯ ಮಾಲಿನ್ಯ ಮಂಡಳಿಗಳು ಪ್ರಕಟಿಸಿದೆ, ಇದು ಕಳೆದ ವರ್ಷ ಏಪ್ರಿಲ್ ಮತ್ತು ಡಿಸೆಂಬರ್-ನಲ್ಲಿ ನಗರದಾದ್ಯಂತ 53 ನೀರಿನ ಸಂಗ್ರಹಗಳಿಂದ ಮಾದರಿಗಳನ್ನು ಸಂಗ್ರಹಿಸಿ ಇವುಗಳನ್ನು ಪರೀಕ್ಷೆಗೆ ಒಳಪಡಿಸಿದಾಗ ಈ ವಿಷಯ ಹೊರಬಿದ್ದಿದೆ.

ಈ ಮಾಹಿತಿಯನ್ನು ಎರಡು ಕಾರ್ಯಕ್ರಮದ ಅಡಿಯಲ್ಲಿ ಸಂಗ್ರಹಿಸಲಾಗಿದೆ, ಸಿಹಿನೀರಿನ ಜಾಗತಿಕ ಪರಿಸರ ಮಾನಿಟರಿಂಗ್ ಸಿಸ್ಟಮ್ (GEMS) ಮತ್ತು ಭಾರತೀಯ ರಾಷ್ಟ್ರೀಯ ಅಕ್ವಾಟಿಕ್ ರಿಸೋರ್ಸಸ್ ಸಿಸ್ಟಮ್ (MINARS). ಮಾಹಿತಿ ಸಂಗ್ರಹಿಸಿದ ನಂತರ ಟೆಸ್ಟಿಂಗ್ ಮಾಡಲಾಯಿತು ನಂತರ ಈ ವರದಿಯನ್ನು ನೀಡಲಾಗಿದೆ.

ಉದ್ಯಾನ ನಗರಿಯ 53 ನೀರಿನ ಮಾದರಿಗಳನ್ನು ಪರೀಕ್ಷಿಸಲಾಯಿತು, ಅದರಲ್ಲಿ 36 ವನ್ಯಜೀವಿ ಮತ್ತು ಮೀನುಗಾರಿಕೆಗೆ ಸೂಕ್ತವಾದವು, ಪರೀಕ್ಷೆಯ ಅವಧಿಯಲ್ಲಿ 11 ಕೆರೆಗಳು ಒಣಗಿದ್ದವು, ನಾಲ್ಕು ಕೆರೆಗಳು ನೀರಾವರಿ, ಕೈಗಾರಿಕಾ ತಂಪು ಮತ್ತು ನಿಯಂತ್ರಿತ ತ್ಯಾಜ್ಯ ವಿಲೇವಾರಿಗಳಿಗೆ ಸೂಕ್ತವಾದವು ಎಂದು ಗುರುತಿಸಲಾಗಿದೆ.

ಇನ್ನು 53 ಮಾದರಿಗಳಲ್ಲಿ ಸಂಪೂರ್ಣ ಉಪಯುಕ್ತ ಎಂದು, ಕೇವಲ ಎರಡೇ ಎರಡು ಕೆರೆಗಳು ತೃಪ್ತಿದಾಯಕ ಮಟ್ಟವನ್ನು ಹೊಂದಿವೆ. ಪರೀಕ್ಷೆ ವಿಫಲವಾದ ಕೆರೆಗಳು ಮನುಷ್ಯರ ಸೇವನೆಗೆ ಅನರ್ಹ ಮಾತ್ರವಲ್ಲ ಪ್ರಾಣಿಗಳ ಸೇವನೆಗೆ ಅನರ್ಹವೆಂದು ಪರೀಕ್ಷೆ ನಡೆಸಿದ ಸಂಸ್ಥೆಗಳು ತಿಳಿಸಿವೆ.

ಈ ಕೆರೆಗಳ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳದಿದ್ದರೆ, ಇವು ಸಹ ಬೆಳ್ಳಂದೂರು ಕೆರೆ ಮತ್ತು ವರ್ತೂರು ಕೆರೆಗಳ ರೀತಿ ಅತ್ಯಂತ ಕಲುಷಿತವಾಗುವುದರಲ್ಲಿ ಸಂದೇಹವೇ ಇಲ್ಲ.

Also Read: ಮನಕಲುಕುವ ಘಟನೆ: ಅತ್ಯಾಚಾರಕ್ಕೊಳಗಾದ ಮಗಳನ್ನು ತನ್ನ ತೋಳಿನಲ್ಲೇ ಎತ್ತಿಕೊಂಡು ಆಸ್ಪತ್ರೆಗೆ ಕರೆದೊಯ್ದ ತಂದೆ!!