ನಾಗರಿಕರೇ ಎಚ್ಚರ!! ರಿಯಾಲಿಟಿ ಷೋ ಹೆಸರು ಹೇಳ್ಕೊಂಡು ಒಂದು ಗ್ಯಾಂಗ್ ಜನರಿಗೆ ಮೋಸ ಮಾಡ್ತಿದೆ, ದುರಾಸೆ ಪಟ್ಟು ಮೋಸ ಹೋಗ್ಬೇಡಿ!!

0
609

ಬೆಂಗಳೂರು: ಸ್ನೇಹಿತರೆ ನಿಮ್ ಮೊಬೈಲ್ ಗೆ ಲಕ್ಷಲಕ್ಷ ಬಂಪರ್ ಆಫರ್ ಗಳ ಕರೆ ಬರ್ತಿದ್ಯಾ? ಹಾಗಾದರೆ ಎಚ್ಚರವಾಗಿರಿ. ಇದು ಆಫರ್ ಕರೆ ಅಲ್ಲ. ಇದು ತಲ್ಮೇಲ್ ಟೋಪಿ ಹಾಕೋ ಜಾಲದ ಕರಾಮತ್ತು.

Money

ಹೌದು.. ಪ್ರತಿಷ್ಠಿತ ಹಿಂದಿ ರಿಯಾಲಿಟಿ ಶೋ ಹೆಸರಿನಲ್ಲಿ ಆನ್‍ಲೈನ್ ಮೂಲಕ ಮೋಸ ಮಾಡುವ ಜಾಲವೊಂದು ಪತ್ತೆಯಾಗಿದೆ. ಇಂಥವೊಂದು ಜಾಲ ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಡಾಬಸ್‍ಪೇಟೆ ನಿವಾಸಿ ರವಿ ಎಂಬವರಿಗೆ ಮೋಸ ಮಾಡಲು ಯತ್ನಿಸಿದೆ. ಯುವಕನೊಬ್ಬ ಕಳೆದೆರಡು ದಿನಗಳ ಹಿಂದೆ ಕೌನ್ ಬನೇಗಾ ಕರೋಡ್ ಪತಿ ಹೆಸರಿನಲ್ಲಿ ರವಿ ಗೆ ಕರೆ ಮಾಡಿದ್ದಾನೆ. ಈ ರಿಯಾಲಿಟಿ ಶೋಗೆ ನಿಮ್ಮ ನಂಬರ್ ಆಯ್ಕೆಯಾಗಿದೆ. ನೀವು 25 ಲಕ್ಷ ಹಣ ಗೆದ್ದಿರುವಿರಿ ನಿಮ್ಮ ಖಾತೆಗೆ ಹಣ ಜಮಾವಣೆಯಾಗಲಿದೆ ಎಂದು ತಿಳಿಸಿದ್ದಾನೆ.

Kaunbanega-karodpathi

ಮತ್ತೆ ಮಾರನೇ ದಿನ ಮುಂಜಾನೆ ಕರೆ ಮಾಡಿ ವಾಟ್ಸಾಪ್ ನಂಬರ್  ಕೇಳಿದ್ದಾನೆ.. ವಾಟ್ಸಪ್ ಗೆ ನೀವು ಪ್ರೈಜ್ ಗೆ ಆಯ್ಕೆಯಾಗಿರುವ ವಿಡಿಯೋ ಕಳಿಸುತ್ತೇನೆ ಎಂದು ಹೇಳಿ, ವಿಡಿಯೋವನ್ನು ಸಹ ಕಳಿಸಿದ್ದಾನೆ. ನಂತರ ಸರ್ಕಾರದ ನಿಯಾಮಾವಳಿ ಪ್ರಕಾರ 25 ಸಾವಿರ ಹಣ ತೆರಿಗೆಯನ್ನು ನೀವು ಮುಂಗಡವಾಗಿ ಪಾವತಿಸಬೇಕು ಎಂದಿದ್ದಾನೆ.

Money

ನಂತರ ರವಿ ಬಹುಮಾನವನ್ನು ತಿರಸ್ಕರಿಸಿದ್ದಾರೆ. ಆಗ ಯುವಕ 10 ಸಾವಿರ ಜಮಾ ಮಾಡುವಂತೆ ಕೇಳಿದ್ದಾನೆ. ರವಿ ಬ್ಯಾಂಕ್ ಮ್ಯಾನೇಜರ್ ಹತ್ತಿರ ಮಾತನಾಡುತ್ತೇನೆ ಎಂದ ಕೂಡಲೇ ಯುವಕ ಗಾಬರಿಗೊಂಡು ಯಾರಿಗೂ ಹೇಳಬೇಡಿ. ಹೇಳಿದರೆ ನಿಮ್ಮ ಹಣಕ್ಕೆ ತೊಂದರೆಯಾಗುತ್ತೆ ಎಂದಿದ್ದಾನೆ.

ಸೋ ಫ್ರೆಂಡ್ಸ್, ನಿಮಗೂ ಇಂಥಾ ಬಹುಮಾನಗಳ ಫೋನ್ ಕಾಲ್, ಮೆಸೇಜ್, ಇ-ಮೇಲ್ ಗಳು ಬರಬಹುದು ಎಚ್ಚರವಾಗಿರಿ.