ಮೆಟ್ರೋ ಪ್ರಯಾಣಿಕರೆ ಹುಷಾರ್; ಮೆಟ್ರೋ ನಿಲ್ದಾಣದಲ್ಲಿ ನೆಲಕ್ಕೆ ಹಾಕಿರುವ ಗ್ರಾನೈಟ್ ಮೇಲೆ ನೋಡಿಕೊಂಡು ನಡೆದಾಡಿ ಇಲ್ಲದಿದ್ದರೆ ಕೈ ಕಾಲು ಮುರಿಯುತ್ತೆ..

0
268

ಬೆಂಗಳೂರಿನ ಪ್ರಯಾಣಿಕರಿಗೆ ಒಂದಿಲ್ಲದೊಂದು ಕಿರಿಕಿರಿ ಸುದ್ದಿಗಳು ಕೇಳಿ ಬರುತ್ತಲೇ ಇವೆ. ಬೆಂಗಳೂರಿನಲ್ಲಿ ಟ್ರಾಫಿಕ್ ಕಿರಿಕ್‍ನಿಂದ ಬೇಸತ್ತ ಜನರಿಗೆ ಮೆಟ್ರೋ ಬಂದು ಸ್ವಲ್ಪ ಆರಾಮಾಗಿದ್ದ ಜನರಿಗೆ ಮೆಟ್ರೋದಿಂದ ಹಲವು ಸಮಸ್ಯೆಗಳು ಕೇಳಿ ಬರುತ್ತಲೇ ಇದ್ದು ಈಗ ನೆಲಕ್ಕೆ ಹಾಕಿರುವ ಗ್ರಾನೈಟ್ ಮೇಲೆ ಕಾಲಿಟ್ಟರೆ ಜಾರುತ್ತೆ. ಅಷ್ಟೇ ಅಲ್ಲದೆ ನಿಮ್ಮ ಕೈಕಾಲಿಗೆ ನಾವು ಜವಾಬ್ದಾರರಲ್ಲ ಅಂತ ಮೆಟ್ರೋ ಬೋರ್ಡ್ ಕೂಡ ಹಾಕಿದ್ದು ಪ್ರಯಾಣಿಕರಲ್ಲಿ ಆತಂಕ ಮೂಡಿಸಿದೆ.

Also read: http://kannada.thenewsism.com/neither-modi-nor-rahul-would-become-next-pm-says-prakash-ambedkar/

ಹೌದು ಮೆಟ್ರೋ ಪಿಲ್ಲರ್ ಬಿರುಕು ಕಥೆ ಆಯ್ತು. ಸದ್ಯ ಗ್ರಾನೈಟ್ ಸಮಸ್ಯೆ ಶುರುವಾಗಿದೆ. ನಮ್ಮ ಮೆಟ್ರೋ ರೈಲು ನಿಲ್ದಾಣಕ್ಕೆ ಕೋಟಿಗಟ್ಟಲೆ ಹಣ ವೆಚ್ಚ ಮಾಡಲಾಗಿದೆ. ಆದ್ರೆ ಮೆಟ್ರೋ ನಿಲ್ದಾಣಗಳಲ್ಲಿ ನೆಲಕ್ಕೆ ಹಾಕಿರುವ ಗ್ರಾನೈಟ್ ಮೇಲೆ ಕಾಲಿಟ್ಟರೆ ಜಾರುತ್ತೆ. ಅಷ್ಟೇ ಅಲ್ಲದೆ ನಿಮ್ಮ ಕೈಕಾಲಿಗೆ ನಾವು ಜವಾಬ್ದಾರರಲ್ಲ ಅಂತ ಮೆಟ್ರೋ ಬೋರ್ಡ್ ತುಗಾಡುತ್ತಿದೆ. ಅದರಂತೆ ಜಾರಿ ಬಿಳ್ಳುತ್ತಿರುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಮೆಟ್ರೋ ಸ್ಟೇಷನ್‍ನಲ್ಲಿ “ನೆಲ ನುಣುಪಾಗಿದೆ ನಿಧಾನವಾಗಿ ನಡೆದಾಡಿ” ಅಂತ ಹೊಸ ಎಚ್ಚರಿಕೆ ಫಲಕಗಳನ್ನ ಹಾಕಲಾಗಿದೆ.

ಈ ಹಿಂದೆ ಎಸ್ಕಲೇಟರ್ ಬಳಿ ಜಾಲರಿಯನ್ನು ಹಾಕದೇ ಒಂದು ಮಗು ಜೀವ ಬಿಟ್ಟಿದೆ. ಸರ್ಕಾರ ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ಮೆಟ್ರೋ ನಿಲ್ದಾಣಗಳನ್ನು ನಿರ್ಮಾಣ ಮಾಡಿದೆ. ಆದರೆ ಪ್ರಯಾಣಿಕರು ಸುಗುಮವಾಗಿ ನಡೆದಾಡುವಂತ ನೆಲವು ಇಲ್ಲವೆಂದು ಪ್ರಯಾಣಿಕರು ಮಾತನಾಡುತ್ತಿದ್ದಾರೆ. ಈ ಹಿಂದೆವು ಕೂಡ ಮೆಟ್ರೋ ಹಳಿಯ ಪಿಲ್ಲರ್-ಗಳಲ್ಲಿ ಬಿರುಕುಗಳು ಕಂಡು ಬರುತ್ತಿದ್ದು ಪ್ರಯಾಣಿಕರು ಭಯಪಡುವಂತೆ ಆಗಿತ್ತು. ಬೈಯ್ಯಪ್ಪನಹಳ್ಳಿ-ಎಂ.ಜಿ ರೋಡ್​ ಮಾರ್ಗದಲ್ಲಿರುವ ಟ್ರಿನಿಟಿ ನಿಲ್ದಾಣದ ಬಳಿ ಮೆಟ್ರೋ ಸೇತುವೆ ಪಿಲ್ಲರ್​ನಲ್ಲಿ ಬಿರುಕು ಕಾಣಿಸಿಕೊಂಡಿತ್ತು,

Also read: ಬೆಂಗಳೂರು ಮೆಟ್ರೋ ರೈಲ್ವೆ ಗ್ರಾಜುಯೇಟ್ ಇಂಜಿನಿಯರ್ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ..

ಸ್ಥಳಕ್ಕಾಗಮಿಸಿದ ಬಿಎಂಆರ್​ಸಿಎಲ್​ ಅಧಿಕಾರಿಗಳು ತಪ್ಪನ್ನು ಮರೆ ಮಾಚಲು ವ್ಯತಿರಿಕ್ತ ಹೇಳಿಕೆ ನೀಡಿ ಪಿಲ್ಲರ್​ನಲ್ಲಿ ಕಾಣಿಸಿಕೊಂಡಿರುವುದು ಬಿರುಕು ಅಲ್ಲ ಎಂದಿರುವ ಮೆಟ್ರೋ ಅಧಿಕಾರಿಗಳು, ಅದು ಜೇನು ಗೂಡು ಕಟ್ಟಿರುವುದಾಗಿ ಜಾರಿಕೊಳ್ಳುವ ಪ್ರಯತ್ನ ಮಾಡಿದ್ದರು. ಆದರೆ ಪಿಲ್ಲರ್ ಸ್ವಲ್ಪ ಮಟ್ಟಿಗೆ ಜರುಗಿರುವುದು ಸ್ಪಷ್ಟವಾಗಿದ್ದು, ಇದರ ಪರಿಶೀಲನೆಗಾಗಿ ಕೆಲವೊತ್ತು ಮೆಟ್ರೋ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ನಂತರ ಈ ಮಾರ್ಗದ ಪ್ರಯಾಣಿಕರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ತಿಳಿಸಿರುವ ಅಜಯ್ ಸೇಠ್​, ಪಿಲ್ಲರ್​ನಲ್ಲಿ ದೋಷ ಕಂಡು ಬಂದಿರುವುದು ನಿಜ ಎಂದು ಕೊನೆಗೂ ಸಮ್ಮತಿಸಿದರು.

Also read: ಇನ್ಮೇಲೆ ಮೆಟ್ರೋ ರೈಲಿನ ಟಿಕೆಟ್-ಗೆ ಕ್ಯೂ ನಿಲ್ಲ ಬೇಕಿಲ್ಲ, ನಿಮ್ಮ ಸ್ಮಾರ್ಟ್-ಫೋನ್ ಇಂದಾನೆ ಬುಕ್ ಮಾಡಬಹುದು…

ಆದಾದ ನಂತರ ಮೆಟ್ರೋ ರೈಲು ನಿಲ್ದಾಣದ ಮತ್ತೆರಡು ಪಿಲ್ಲರ್- ಗಳಲ್ಲಿ ಬಿರುಕು ಕಾಣಿಸಿಕೊಂಡಿರುವುದು ಪ್ರಯಾಣಿಕರಲ್ಲಿ ಆತಂಕ ಸೃಷ್ಟಿಸಿದೆ. ಜಯನಗರದ ಸೌತ್ ಎಂಡ್ ಸರ್ಕಲ್‍ನಲ್ಲಿರುವ ಮೆಟ್ರೋ ಪಿಲ್ಲರ್ 66 ಮತ್ತು 67ರಲ್ಲಿ ಕಾಣಿಸಿಕೊಂಡ ಬಿರುಕು ಮೆಟ್ರೋ ರೈಲು ಸಂಚಾರದ ಮೇಲೆ ಸಾಕಷ್ಟು ವಿಚಾರಗಳನ್ನು ಹುಟ್ಟು ಹಾಕಿತ್ತು, ಮೊದಲು 67ನೇ ಪಿಲ್ಲರ್‍ನಲ್ಲಿ ಕಾಣಿಸಿಕೊಂಡ ಬಿರುಕನ್ನು BMRCL ಅಧಿಕಾರಿಗಳು ಸರಿಪಡಿಸಿದ್ದರು. ಆದರೆ ಮುಂಭಾಗದ 66ನೇ ಪಿಲ್ಲರ್‍ನಲ್ಲಿರುವ ಬೇರಿಂಗ್ ಬಿರುಕು ಬಿಟ್ಟಿತ್ತು, 67ರ ಪಿಲ್ಲರ್‍ ಸಮಸ್ಯೆಯನ್ನು ಬಗೆಹರಿಸಿದ BMRCL ಅಧಿಕಾರಿಗಳು 66ರ ಸಮಸ್ಯೆಯನ್ನು ಕಡೆಗಣಿಸಿರುವುದು ಆತಂಕಕ್ಕೆ ಕಾರಣವಾಗಿತ್ತು. ಇದೆಲ್ಲ ಮರೆಯುವ ಮುನ್ನವೇ ಮತ್ತೆ ಮೆಟ್ರೋ ಗ್ರಾನೈಟ್‍ನ ಹೊಸ ಕಥೆ ಶುರುವಾಗಿದೆ.