ಒಳ್ಳೆ ರಸ್ತೆಗಳನ್ನು ಕೊಡಲು ವಿಫಲವಾದ ಸಿದ್ದು ಸರ್ಕಾರ, ಅಪಘಾತ ತಡೆಯಲು ಹಿಂಬದಿ ಸವಾರರಿಗೆ ನಿಷೇಧ ಹೇರಲು ಹೊರಟಿದೆ!!

0
599

ರಾಜ್ಯದಲ್ಲಿ ಅದರಲ್ಲೂ ಮುಖ್ಯವಾಗಿ ರಾಜಧಾನಿ ಬೆಂಗಳೂರಿನಲ್ಲಿ ರಸ್ತೆಗಳು ಸಂಪೂರ್ಣವಾಗಿ ಹಾಳಾಗಿವೆ. ರಸ್ತೆಗಳಲ್ಲಿನ ರಕ್ಕಸ ಗುಂಡಿಗಳೇ ಹಲವಾರು ಅಪಘಾತಗಳಿಗೆ ಕಾರಣವಾಗಿವೆ. ಈಗಂತೂ ಬೆಂಗಳೂರಲ್ಲಿ ದಿನೇ ದಿನೇ ದ್ವಿಚಕ್ರವಾಹನ ಸವಾರರು ರಸ್ತೆಗಳಲ್ಲಿ ಜೀವವನ್ನು ಕೈಯಲ್ಲಿ ಹಿಡಿದು ಓಡಾಡುವಂಥಹ ಪರಿಸ್ಥಿತಿ ಬಂದೊದಗಿದೆ.

ರಸ್ತೆಯ ಕಳಪೆ ಕಾಮಗಾರಿಗಳಿಗೆ ಕಡಿವಾಣ ಹಾಕುವುದನ್ನು ಬಿಟ್ಟು ಈಗ ನಮ್ಮ ರಾಜ್ಯಸರ್ಕಾರ, ದ್ವಿಚಕ್ರ ವಾಹನಗಳಲ್ಲಿ ಹಿಂಬದಿ ಸವಾರಿಯನ್ನೇ ನಿಷೇಧಿಸಲು ಹೊರಟಿದೆ. ರಾಜ್ಯ ಸರ್ಕಾರದ ಪ್ರಕಾರ, ಪ್ರತಿ ಬಾರಿಯೂ ಅಫಘಾತ ಸಂಭವಿಸಿದಾಗ ಹಿಂಬದಿ ಸವಾರರೇ ಹೆಚ್ಚು ಬಲಿಯಾಗುವ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆ ಈ ಕ್ರಮಕ್ಕೆ ಮುಂದಾಗಿದೆಯಂತೆ.

ಇತ್ತೀಚಿಗೆ ದ್ವಿಚಕ್ರ ವಾಹನದಲ್ಲಿ ಹೋಗುವಾಗ ಹಿಂಬದಿ ಕುಳಿತಿದ್ದ ಮಕ್ಕಳು, ಹಿರಿಯರು ಸಾವನ್ನಪ್ಪಿರೋ ಪ್ರಕರಣಗಳು ಹೆಚ್ಚಾಗಿ ದಾಖಲಾಗಿವೆ. ಇದನ್ನು ತಪ್ಪಿಸಲು ರಾಜ್ಯ ಸರ್ಕಾರ ಹೊಸ ಆದೇಶ ತರಲು ಹೊರಟಿದೆಯಂತೆ. ಈ ಕುರಿತು ಹೈಕೋರ್ಟ್-ಗೆ ಅಫಿಡವಿಟ್ ಸಲ್ಲಿಸಿದ್ದು ಇನ್ನೇನು ಕೆಲವೇ ದಿನಗಳಲ್ಲಿ ಆದೇಶ ಸೊರ ಬೀಳಲಿದೆಯಂತೆ. ಮೋಟಾರ್ ವಾಹನ ಕಾಯ್ದೆ ಯಲ್ಲಿ 100 ಸಿಸಿ ವಾಹನಗಳಲ್ಲಿ ಹಿಂಬದಿಯಲ್ಲಿ ಸವಾರಿ ಮಾಡುವಂತಿಲ್ಲ ಎಂಬ ನಿಯಮವಿದೆ.

ಈ ಹೊಸ ಆದೇಶ ಹೊಸದಾಗಿ ಖರೀದಿಸುವ ವಾಹನಗಳಿಗೆ ಮಾತ್ರ ಅನ್ವಯಿಸಲಿದೆ. ಸರ್ಕಾರ ಒಳ್ಳೆ ರಸ್ತೆಗಳನ್ನು ಜನತೆಗೆ ಕೊಡಲು ವಿಫಲವಾಗಿವೆ, ಅದನ್ನು ಮುಚ್ಚಿಹಾಕಲು ನಾಗರಿಗಕರಿಗೆ ಇಂತಹ ನಿರ್ಬಂಧ ಹೇರುವುದು ಎಷ್ಟು ಸರಿ?? ದ್ವಿಚಕ್ರ ವಾಹನ ಮಾಧ್ಯಮ ಹಾಗು ಕೆಲ ಮಾಧ್ಯಮ ವರ್ಗದವರಿಗೆ ಅತಿ ಅನುಕೂಲವಾದ ವಾಹನ, ಇಂತಹ ಆದೇಶಗಳು ತರುವುದಕ್ಕೆ ಮುನ್ನ ಸರ್ಕಾರ ನಾಗರಿಕರೊಂದಿಗೆ ಸಮಾಲೋಚನೆ ನಡೆಸಿ ಮುಂದುವರಿದರೆ ಒಳಿತು.

ಈ ಸುದ್ದಿ ಹೊರಬೀಳುತ್ತಿದ್ದಂತೆ, ಸಾಮಾಜಿಕ ಜಾಲತಾಣಗಳಲ್ಲಿ ನಾಗರಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೆಲ ನಾಗರಿಕರು ಹೇಗೆ ಹೇಳಿದ್ದಾರೆ, “ಉಗುರಿಗೆ ಗಾಯವಾದರೆ, ಕೈಯನ್ನೇ ಕಡೆಯುವುದು ಮೂರ್ಖತನದ ಪರಮಾವಧಿ”..