ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳು, ಅನ್ಯರಾಜ್ಯದ ವಲಸಿಗರು ಇದಕ್ಕೆ ಕಾರಣರೇ?

0
456

ಬೆಂಗಳೂರು ತನ್ನ ನೈಸರ್ಗಿಕ ಸೌಂದರ್ಯ, ಉದ್ಯಾನವನಗಳು, ಸ್ವಚ್ಛ ವಾತಾವರಣ, ಮೆಟ್ರೋ ರೈಲು, ಐಟಿ ಪಾರ್ಕ್ ಮತ್ತು ಕಂಪನಿಗಳಿಗೆ ಇತ್ಯಾದಿಗಳಿಗೆ ತುಂಬಾನೆ ಫೇಮಸ್.

ಬೇರೆ ರಾಜ್ಯದವರು, ಇಂತಹ ಮಹಾನಗರ ನಮ್ಮ ರಾಜ್ಯದಲ್ಲಿ ಏಕಿಲ್ಲ ಎಂಬುವ ಮಟ್ಟಿಗೆ ಬೆಳೆದಿದೆ ಆದರೆ ಬೆಳೆಯುತ್ತಿರುವ ನಗರದ ಜೊತೆಜೊತೆಗೆ ಇಲ್ಲಿ ಅಫರಾಧಗಳು ಬೆಳೆಯುತ್ತಿವೆ ಇದನ್ನು “ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ” ತನ್ನ ವರದಿಯಲ್ಲಿ ಹೇಳಿದೆ.

2015ರಲ್ಲಿ ಬೆಂಗಳೂರಿನಲ್ಲಿ ದಾಖಲಾದ ಪ್ರಕರಣಗಳಿಗಿಂತ ಹೆಚ್ಚು ಪ್ರಕರಣಗಳು, ಎಂದರೆ ಸುಮಾರು 10,216 ಪ್ರಕರಣಗಳು 2016ರಲ್ಲಿ ದಾಖಲಾಗಿವೆ. ಬೆಳೆಯುತ್ತಿರುವ ತಂತ್ರಜ್ಞಾನದ ಜೊತೆಗೆ ಸೈಬರ್ ಅಫರಾಧಗಳು ಬೆಳೆಯುತ್ತಿವೆ ಇದಕ್ಕೆ ಪುರಾವೆ ಎಂಬಂತೆ 2016ರಲ್ಲಿ ನಗರದಲ್ಲಿ ಒಟ್ಟು 762 ಸೈಬರ್ ಅಪರಾಧ ಪ್ರಕರಣಗಳು ದಾಖಲಾಗಿವೆ, ಇದು ದೇಶದಲ್ಲಿ ಹೆಚ್ಚು ಸೈಬರ್ ಅಪರಾಧ ಪ್ರಕರಣಗಳು ದಾಖಲಾದ ನಗರಗಳ ಪಟ್ಟಿಯಲ್ಲಿ ಬೆಂಗಳೂರು ಎರಡನೇ ಸ್ಥಾನ ಪಡೆದಿದೆ.

ಬೆಂಗಳೂರಿನಲ್ಲಿ 2016 ರಲ್ಲಿ ಒಟ್ಟು 45,797 ಅಪರಾಧ ಪ್ರಕರಣಗಳು ದಾಖಲಾಗಿವೆ, ಇದು ದೇಶದಲ್ಲಿ ಹೆಚ್ಚು ಅಪರಾಧ ಪ್ರಕರಣಗಳು ದಾಖಲಾದ ನಗರಗಳ ಪಟ್ಟಿಯಲ್ಲಿ ಬೆಂಗಳೂರು ಎರಡನೇ ಸ್ಥಾನದಲ್ಲಿದೆ. ಈ ವಿಷಯದಲ್ಲಿ ರಾಷ್ಟ್ರ ರಾಜಧಾನಿ ದೆಹಲಿ ಮೊದಲ ಸ್ಥಾನದಲ್ಲಿದೆ.

2005 ರ ನಂತರ ಬೆಂಗಳೂರಿಗೆ ಬೇರೆ ರಾಜ್ಯಗಳಿಂದ ಬರುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ, ಇದು ಕಾರಣವಾಗಿರಬಹುದೇ.

ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಇನ್ನು ಮುಂದೆಯಾದರು ಅಫರಾಧಕ್ಕೆ ಬ್ರೇಕ್ ಹಾಕುತ್ತ ಕಾದು ನೋಡಬೇಕು…!