ಟ್ರಾಫಿಕ್ ಪೊಲೀಸ್ ನಿಮ್ಮನ್ನು ಹಿಡಿದರೆ, ನೆನಪಿರಲಿ ಪ್ರತಿಯೊಬ್ಬ ನಾಗರಿಕರಿಗೂ ಈ ಹಕ್ಕುಗಳಿವೆ!!

0
3592

Kannada News | Karnataka Achiecers

ದಿನೇ ದಿನೇ ಎಲ್ಲ ನಗರಗಳಲ್ಲೂ ಟ್ರಾಫಿಕ್ ದಟ್ಟಣೆ ಹೆಚ್ಚಾಗುತ್ತಾನೆ ಇದೆ, ೫ ಕಿ.ಮೀ.ದೂರ ಹೋಗಲು ಕೆಲುವೊಮ್ಮೆ ೧ ಗಂಟೆ ಬೇಕಾಗಬಹುದು. ಟ್ರಾಫಿಕ್-ನಲ್ಲಿ ಗಾಡಿ ಓಡಿಸುವುದು ನಗರ ವಾಸಿಗಳಿಗೆ ಒಂದು ದೊಡ್ಡ ಸವಾಲಾಗಿ ಬಿಟ್ಟಿದೆ. ಇಷ್ಟೊಂದು ಒತ್ತಡದಲ್ಲಿ ಹಾಗು ಗಡಿಬಿಡಿಯಲ್ಲಿ ಕೆಲುವೊಮ್ಮೆ ಟ್ರಾಫಿಕ್ ನಿಯಮ ಬದಿಗೊತ್ತಿ ವಾಹನ ಚಾಲನೆ ಮಾಡುವುದು ಸರ್ವೇ ಸಾಮಾನ್ಯವಾಗಿದೆ.

ಟ್ರಾಫಿಕ್ ನಿಯಮ ಪಾಲಿಸುವುದು ಪ್ರತಿಯೊಬ್ಬರ ಕರ್ತವ್ಯ, ಒಮ್ಮೊಮ್ಮೆ ನಮ್ಮ ಕೈ ಮೀರಿ ತಪ್ಪಾಗುತ್ತದೆ. ಅದಕ್ಕಾಗಿ ದಂಡವು ತೆರಬೇಕಾಗುತ್ತದೆ. ಆದರೆ ಹಲವಾರು ನಾಗರಿಕರು ಹೇಳೋ ಪ್ರಕಾರ ಟ್ರಾಫಿಕ್ ಪೊಲೀಸರು ಹಲವಾರು ಬಾರಿ ಜನರಿಗೆ ತೊಂದರೆ ಕೊಟ್ಟಿದ್ದಾರೆ ಎಂದು ನಮಗೆ ಆಗಾಗ ಕೇಳಿ ಬರುತ್ತದೆ.

ನಾಗರಿಕರಿಗೆ ಟ್ರಾಫಿಕ್ ಪೊಲೀಸ್-ನವರು ದಾರಿಯಲ್ಲಿ ತಡೆಯೊಡ್ಡಿದರೆ, ಅವರಿಗಿರೋ ಅಧಿಕಾರವನ್ನು ಮಾತ್ರ ನಾವು ಇಲ್ಲಿ ಹೇಳ್ತಾ ಇದ್ದಿವಿ..

  • ಟ್ರಾಫಿಕ್ ಪೊಲೀಸ್-ರವರಿಗೆ ನಿಮ್ಮ ಲೈಸೆನ್ಸ್-ಅನ್ನು ರದ್ದು ಪಡಿಸಿ ಎಂದು, ಸಂಚಾರಿ ಇಲಾಖೆಗೆ ಶಿಫಾರಸ್ಸು ಮಾಡೋ ಅಧಿಕಾರವಿದೆ. ಅವರು ನಿಮ್ಮ ಲೈಸೆನ್ಸ್ ಅನ್ನು ಕಸಿದು ಕೊಂಡರೆ ಅದಕ್ಕೆ ಅವರು ಸರಿಯಾದ ರಸೀದಿ ಕೊಡಬೇಕು.
  • ನಿಮಗೆ ದಂಡ ವಹಿಸಿದರೆ, ಅವರು ಕಂಪ್ಯೂಟರ್ ಅಥವಾ ಅಧಿಕೃತ ರಸೀದಿ ಕೊಡಬೇಕು ಅದರಲ್ಲಿ ನೀವು ಮಾಡಿರೋ ಟ್ರಾಫಿಕ್ ನಿಯಮ ಉಲ್ಲಂಘನೆ ಹಾಗು ದಂಡದ ಮೊತ್ತ ಇರಲೇಬೇಕು.
  • ನಿಮ್ಮ ಕಾರ್ ಅಥವಾ ಬೈಕ್-ನ ಕೀಲಿಯನ್ನು ಅವರು ಕಸಿದುಕೊಳ್ಳುವಂತಿಲ್ಲ.
  • ನಿಮ್ಮ ಹತ್ತಿರ ದಂಡ ವಸೂಲಿ ಮಾಡಲು ಪಿ.ಸಿ.ಐ. ಮತ್ತು ಹಿರಿಯ ಅಧಿಕಾರಿಗಳಿಗೆ ಮಾತ್ರ ಅಧಿಕಾರವಿರುತ್ತೆ, ಟ್ರಾಫಿಕ್ ಪೇದೆಗಳಿಗೆ ಈ ಹಕ್ಕು ಇರುವುದಿಲ್ಲ.

 • ಹೆಣ್ಣು ಮಕ್ಕಳು ಕಾರ್-ನಲ್ಲಿ ಇದ್ದರೆ, ಆರು ಗಂಟೆಯ ಮೇಲೆ ಕಾರ್-ನ ಒಳಗೆ ಪುರುಷ ಪೊಲೀಸರು ಪರಿಶೀಲಿಸುವಂತಿಲ್ಲ.
 • ಪೊಲೀಸ್ ಯುನಿಫಾರ್ಮ್ ಹಾಗು ಹೆಸರು ಮತ್ತು ಬ್ಯಾಚ್ ಸಂಖ್ಯೆ ಇರುವ ಬ್ಯಾಡ್ಜ್ ಧರಿಸದಿರುವ ವ್ಯಕ್ತಿ ಬಂದು ಶುಲ್ಕ ಕಟ್ಟುವಂತೆ ಹೇಳಿದರೇ ಅವರ ಐಡೆಂಟಿಟಿ ಕಾರ್ಡ್ ತೋರಿಸಲು ಹೇಳಿ.
 • ಆದಷ್ಟು ಟ್ರಾಫಿಕ್ ನಿಯಮ ಪಾಲಿಸಿ, ಹಾಗೆಯೇ ಇದು ಸದಾ ನೆನಪಿರಲಿ ಟ್ರಾಫಿಕ್-ನಲ್ಲಿ ಗಾಡಿ ಓಡಿಸುವುದು ಎಷ್ಟು ಕಷ್ಟವೋ, ಟ್ರಾಫಿಕ್ ನಿಭಾಯಿಸುವುದು ಅದಕ್ಕಿಂತ ದುಪ್ಪಟ್ಟು ಕಷ್ಟ ಮತ್ತು ಒತ್ತಡದಾಯಕ ಕೆಲಸ. ಎಲ್ಲರು ಟ್ರಾಫಿಕ್ ನಿಯಮ ಪಾಲಿಸಿದರೆ, ಶೇಕಡಾ ೮೦% ಟ್ರಾಫಿಕ್ ಜಾಮ್ ತಡೆಗಟ್ಟಬಹುದು ಅನ್ನುತೆ ಒಂದು ವರದಿ..

Also Read: ನೀವು ನಿತ್ಯ ಸಾಮಾನ್ಯವಾಗಿ ಎದುರಿಸುವ ಈ ಸಮಸ್ಯೆಗಳನ್ನು ಎಷ್ಟು ಸುಲಭವಾಗಿ ಪರಿಹರಿಸಬಹುದು ಗೊತ್ತೇ?