ಸಿಲಿಕಾನ್ ಸಿಟಿ ಜನರೇ ನೀವು ಕುಡಿಯೋ ನೀರಲ್ಲಿ ಸ್ಯಾನಿಟರಿ ವಾಟರ್ ಇದೆ ಎಚ್ಚರ..!

0
458

ಬೆಂಗಳೂರಿನ ಗಾಯಿತ್ರಿನಗರ ವಾರ್ಡ್ನಲ್ಲಿ ಕಳೆದ 15 -20 ದಿನಗಳಿಂದ ಕುಡಿಯೋ ನೀರಿನಲ್ಲಿ ಸ್ಯಾನಿಟರಿ ವಾಟರ್ ಮಿಕ್ಸ್ ಆಗಿ ಬರುತ್ತಿದೆ. ಗಾಯತ್ರಿನಗರದ ಜನ ಇದೇ ನೀರು ಕುಡಿದು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಈ ಬಗ್ಗೆ ಹಲವು ಬಾರಿ ಅಧಿಕಾರಿಗಳಿಗೆ ಜನಪ್ರತಿನಿಧಿಗಳಿಗೆ ಮನವಿ ಮಾಡಿದ್ರೂ ನೋ ಯೂಸ್. ಸ್ಥಳೀಯ ಶಾಸಕರಾದ ಅಶ್ವಥ್ ನಾರಾಯಣ್ ರನ್ನ ಕೇಳಿದ್ರೆ ಊರು ಅಂದ್ಮೇಲೆ ಇವೆಲ್ಲ ಇದ್ದದ್ದೇ ಅನ್ನೋ ಹಾರಿಕೆಯ ಉತ್ತರ ನೀಡ್ತಿದ್ದಾರೆ ಅಂತಿದ್ದಾರೆ ಜನ.. ಈಗ ನಾವೇನ್ ಮಾಡ್ಬೇಕು ಅಂತ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನು ಇಲ್ಲಿನ ಕಾರ್ಪೋರೇಟರ್ ಗಿರೀಶ್ ಲಕ್ಕಣ್ಣ, ಕಾರ್ಪೋರೇಷನ್ ನೀರು ಕುಡಿಯದಂತೆ ಜನರಲ್ಲಿ ಈಗಾಗಲೇ ಜಾಗೃತಿ ಮೂಡಿಸಲಾಗಿದೆ. ಅಲ್ಲದೇ ಟ್ಯಾಂಕರ್ ಮೂಲಕ ಜನರಿಗೆ ನೀರು ಪೂರೈಕೆ ಮಾಡಲಾಗುತ್ತಿದೆ. ತಜ್ಞರನ್ನ ಕರೆಸಿ ನೀರಿನ ಸ್ಯಾಂಪಲ್ ಪರೀಕ್ಷೆಗೆ ಒಳಪಡಿಸಲಾಗಿದೆ. ನೀರನ್ನು ಕುಡಿಯಬಾರದು ತಜ್ಞರು ಸಹ ಹೇಳಿದ್ದಾರೆ ಎನ್ನುತ್ತಿದ್ದಾರೆ. ಆದ್ರೆ ಈ ಬಗ್ಗೆ ಜಲಮಂಡಳಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ರೂ ತಮಗೂ ಇದಕ್ಕೂ ಸಂಬಂಧವೇ ಇಲ್ಲ ಅನ್ನೋ ಹಾಗೆ ಇದ್ದಾರೆ. ಮಲ್ಲೇಶ್ವರಂನ ಜಲಮಂಡಳಿಯ ಎಇಇ ಕೂಡ ಸ್ಥಳಕ್ಕೇ ಬಂದಿಲ್ಲ, ಸಭೆಯಲ್ಲೂ ತುಂಬಾ ಬೇಜವಾಬ್ದಾರಿಯಿಂದ ವರ್ತಿಸುತ್ತಾರೆ ಅಂತ ಸ್ಥಳೀಯ ಕಾರ್ಪೋರೇಟರ್ ಆರೋಪಿಸಿದ್ದಾರೆ.

ಅದೆಲ್ಲಾ ಏನೇ ಇರಲಿ ಊರಿನ ನಾಯಕರು ಮುತುವರ್ಜಿ ವಹಿಸಿ ಗ್ರಾಮಸ್ಥರ ನೆರವಿಗೆ ಬಂದು ಸಮಸ್ಯೆ ಬಗೆ ಹರಿಸಬೇಕಿದೆ.