ಬೆಂಗಳೂರಿಗರು ಮತ್ತೆ ಬೀದಿಗೆ; ಶುರುವಾಯಿತು ರಾಜಕಾಲುವೆಯ ಒತ್ತುವರಿ ತೆರೆವು ಕಾರ್ಯಾಚರಣೆ…

0
399

ಬೆಂಗಳೂರಿನ ಬಡ ಜನರಿಗೆ ನೆಮ್ಮದಿ ಎಲ್ಲಿದೆ ಹೇಳಿ ಸರ್ಕಾರ ಒಂದಿಲ್ಲೊಂದು ಯೋಜನೆ ಮತ್ತು ಕಾಯ್ದೆಯನ್ನು ಜಾರಿಗೆ ತಂದು ಬಡವರನ್ನು ಒಕ್ಕಲೆಬ್ಬಿಸುತ್ತಿದೆ. ಕಷ್ಟದಲ್ಲಿ ರಕ್ತವನ್ನೇ ಶುರಿಸಿ ಕಟ್ಟಿದ ಮನೆಯನ್ನೇ ನೆಲಸಮ ಮಾಡಲು ಹೊರಟ್ಟಿದೆ. ಆಘಾತಕರ ವಿಷಯನ್ನು ದಸರಾ ದೀಪಾವಳಿಯ ಹಬ್ಬದ ಕುಷಿಯಲ್ಲಿರುವ ಜನರು ಹೇಗೆ ಅರಗಿಸಿಕೊಳ್ಳುತ್ತಾರೆ ತಿಳಿಯದಾಗಿದೆ.

Also read: ಇನ್ಮೇಲೆ ನಿಮ್ಮ ಹಳೆಯ ವಾಹನಗಳು ರಸ್ತೆಗಿಳಿಯುವಂತಿಲ್ಲ?? ಈ ನಿಯಮ ಕರ್ನಾಟಕದ ತುಂಬೆಲ್ಲ ಜಾರಿಗೆ…

ಹೌದು ಬೆಂಗಳೂರಿನಲ್ಲಿ ರಾಜಕಾಲುವೆಗಳ ಪಕ್ಕ ಮತ್ತು ಅದರ ಮೇಲೆ ಕಟ್ಟಿದ ಕಟ್ಟಡ ಹಾಗೂ ಮನೆಗಳನ್ನು ಕೆಡವಲು ಬಿಬಿಎಂಪಿ ಅಧಿಕಾರಿಗಳು ಸಿದ್ದತೆ ಕೈಗೊಂಡಿದೆ. ಬಿಬಿಎಂಪಿಯು ಜೂನ್ 14 ರಿಂದ ಜುಲೈ 21ರ ತನಕ ರಾಜಧಾನಿಯ 450 ಪ್ರಕರಣಗಳಲ್ಲಿ ಸರ್ವೆ ಕಾರ್ಯ ಮಾಡಿ ಮುಗಿಸಿದೆ. ಕೆಲವು ಕಡೆಗಳಲ್ಲಿ ಈಗಾಗಲೇ ಮಾರ್ಕಿಂಗ್ ಕಾರ್ಯ ಪೂರ್ಣಗೊಂಡಿದ್ದರೆ ಕೆಲವೆಡೆ ಇನ್ನೂ ಮಾರ್ಕಿಂಗ್ ಮುಗಿಸಿಲ್ಲ. ಇದರಲ್ಲಿ ಆತಂಕಕಾರಿ ವಿಷಯ ಅಂದರೆ ಸರ್ವೆ ವರದಿಯಲ್ಲೆಲ್ಲೂ ದೊಡ್ಡ ದೊಡ್ಡ ಶ್ರೀಮಂತರ ಕಾಂಪ್ಲೆಕ್ಸ್, ಮಾಲ್​ಗಳಿಲ್ಲ. ಬಿಬಿಎಂಪಿ ಅಧಿಕಾರಿಗಳಾಗಲಿ, ಬೆಂಗಳೂರು ಜಿಲ್ಲಾಡಳಿತದ ಸರ್ವೆಯರ್ ಕಣ್ಣಿಗಾಗಲಿ ಶ್ರೀಮಂತರ ಸ್ವತ್ತುಗಳು ಸರ್ವೆ ವರದಿಯಲ್ಲಿ ಕಾಣುತ್ತಿಲ್ಲ.

ತೆರೆವು ಕಾರ್ಯಾಚರಣೆ ಯಾವಾಗ?

ಅಕ್ಟೋಬರ್ 29 ರಿಂದ ತೆರವು ಕಾರ್ಯ ಆರಂಭವಾಗಲಿದ್ದು ದಸರಾ ಹಬ್ಬ ಆಚರಿಸಿದ ಬಳಿಕ ನಗರದ ಹಲವೆಡೆ ಪ್ರಾರಂಭದಲ್ಲಿ 71 ಮನೆಗಳನ್ನು ಧರೆಗುರುಳಿಸಿ ರಾಜಕಾಲುವೆ ಒತ್ತುವರಿ ತೆರವು ಕಾರ್ಯ ಕೈಗೊಳ್ಳಲು ಪಾಲಿಕೆ ದಿನಾಂಕ ನಿಗಧಿಪಡಿಸಿದೆ. ಎಂದು ಉನ್ನತ ಮೂಲಗಳಿಂದ ಖಚಿತ ಮಾಹಿತಿ ಲಭ್ಯವಾಗಿದೆ. ಮಾರ್ಕಿಂಗ್ ಆಗುವ ತನಕ ಹಿಂದಿನ ಸರ್ವೆಯರ್ ಗಳನ್ನ ಉಳಿಸಲು ನಿರ್ಧರಿಸಲಾಗಿದೆ. ಬೃಹತ್ ನೀರುಗಾಲುವೆ ಚೀಫ್ ಎಂಜಿನಿಯರ್ ಇದಕ್ಕಾಗಿ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.


Also read: ಜಿಯೋವಿನ ಏಳಿಗೆಗೆ ಮೋದಿ ಸರ್ಕಾರ ಬಿಎಸ್ಎನ್ಎಲ್ ಅನ್ನು ಬಲಿ ಕೊಡುತ್ತಿದೆಯೇ??

ಅತಿಹೆಚ್ಚು ಒತ್ತುವರಿ ಕಂಡು ಬಂದ ಸ್ಥಳಗಳು;

ಬಿಬಿಎಂಪಿ ವ್ಯಾಪ್ತಿಯಲ್ಲಿ ಪಾಲಿಕೆ ನಡೆಸಿದ ಸರ್ವೆಯಲ್ಲಿ ಅತಿಹೆಚ್ಚು ಒತ್ತುವರಿ ಕಂಡು ಬಂದಿರೋದು ಮಹದೇವಪುರ ವಲಯದಲ್ಲಿ. ಇಲ್ಲಿ ಒಟ್ಟು 226 ಪ್ರಕರಣಗಳಲ್ಲಿ 46 ಕಟ್ಟಡ ಅಥವಾ ಮನೆಗಳು ರಾಜಕಾಲುವೆ ಒತ್ತುವರಿ ಮಾಡಿಕೊಂಡಿರೋದು ಕಂಡು ಸರ್ವೆಯಿಂದ ಕಂಡು ಬಂದಿದೆ. ಇನ್ನು ದಕ್ಷಿಣ ವಲಯದಲ್ಲಿ 20 ಪ್ರಕರಣಗಳಲ್ಲಿ 17 ಮನೆಗಳು, ಯಲಹಂಕ ಜೋನ್ ನಲ್ಲಿ 202 ಪ್ರಕರಣಗಳಲ್ಲಿ 7 ಮನೆ ಅಥವಾ ಕಟ್ಟಡ, 1 ಫ್ಯಾಕ್ಟರಿ, 1 ಅಪಾರ್ಟ್ ಮೆಂಟ್ ಗಳು ಒತ್ತುವರಿ ಸರ್ವೆಯಲ್ಲಿ ಗುರ್ತಿಸಲಾಗಿದೆ. ಇನ್ನು ರಾಜರಾಜೇಶ್ವರಿ ನಗರದಲ್ಲಿ 2 ಪ್ರಕರಣಗಳಲ್ಲಿ 1 ಕಟ್ಟಡವನ್ನು ಗುರ್ತಿಸಿದ್ದು, ಇದರ ತೆರವಿಗೆ ಕೋರ್ಟ್ ತಡೆಯಾಜ್ಞೆ ನೀಡಿದೆ.

ಈ ತೆರವು ಸರ್ವೆಗಳ ಪ್ರಕಾರ;

ಈ 450 ಪ್ರಕರಣಗಳಲ್ಲಿ ಕೇವಲ 71 ಮನೆಗಳಷ್ಟೆ ಅಲ್ಲ ಖಾಲಿ ನಿವೇಶನ, ಕೃಷಿ ಭೂಮಿ, ಕಾಂಪೌಂಡ್, ಕಾಲುವೆಗೆ ಮಣ್ಣು ಮುಚ್ಚಿ ಒತ್ತುವರಿ ಮಾಡಿಕೊಂಡ ಪ್ರಕರಣಗಳು ಸೇರಿವೆ. ಸರ್ವೆಯರ್ ಗಳು ಸ್ಥಳದಲ್ಲಿ ಒತ್ತುವರಿ ಗುರುತು ಕಾರ್ಯ ಪೂರ್ಣ ಮಾಡ್ತಿದ್ದಂತೆ ತೆರವು ಮಾಡಬೇಕಾದ ಮನೆಗಳ ಸಂಖ್ಯೆಯೂ ಹೆಚ್ಚಾಗುವ ಸಾಧ್ಯತೆಯಿದೆ. ಮುಲಾಜಿಲ್ಲದೆ ಈ ಒತ್ತುವರಿಗಳನ್ನು ತೆರವು ಮಾಡ್ತೀವಿ. ಎಲ್ಲಾ 450 ಪ್ರಕರಣಗಳಲ್ಲಿ ಸರ್ವೆ ಕಾರ್ಯ ಮುಗಿದಿದೆ. ಮಾರ್ಕಿಂಗ್ ಕಾರ್ಯ ಕೆಲವು ಕಡೆ ಆಗಿದೆ. ಕೆಲವು ಕಡೆ ಮಾರ್ಕಿಂಗ್ ಮಾಡುತ್ತಾ ರಾಜಕಾಲುವೆ ಒತ್ತುವರಿ ತೆರವು ಮಾಡುತ್ತೇವೆ ಎನ್ನುತ್ತಾರೆ ಬಿಬಿಎಂಪಿ ಬೃಹತ್ ನೀರುಗಾಲುವೆ ಚೀಫ್ ಎಂಜಿನಿಯರ್ ಪ್ರಹ್ಲಾದ್.


Also read: ನೀವು ಕಳೆದುಕೊಂಡ ಪರ್ಸ್’ ಗಳು Post Box’ ಗಳಲ್ಲಿ ಪತ್ತೆಯಾಗುತ್ತಿವೆ! ಪರ್ಸ್ ಕಳೆದುಕೊಂಡವರು Post office-ಅಲ್ಲಿ ವಿಚಾರಿಸಿ ನೋಡಿ..

ಈಗಾಗಲೇ ಸರ್ವೆಯಲ್ಲಿ ನೆಲಸಮವಾಗಳು ತಯಾರಿಸಿದ ಲಿಸ್ಟ್:

  • ಮಹದೇವಪುರ: 46 ಕಟ್ಟಡ/ಮನೆಗಳು
  • ದಕ್ಷಿಣ ವಲಯ: 17 ಮನೆ
  • ಯಲಹಂಕ: 7 ಮನೆ/ಕಟ್ಟಡ, 1 ಫ್ಯಾಕ್ಟರಿ, 1 ಅಪಾರ್ಟ್ ಮೆಂಟ್
  • ಆರ್ ಆರ್ ನಗರ: 1 ಕಟ್ಟಡ