ಪೊಲೀಸರ ದೌರ್ಜನ್ಯದ ಸುದ್ದಿಗಳ ನಡುವೆ ಕದ್ದು ಸಿನೆಮಾ ನೋಡಿ ಸಿಕ್ಕಿ ಬಿದ್ದ ವ್ಯಕ್ತಿಗೆ ಜೀವನಕ್ಕೆ ದಾರಿ ಮಾಡಿ ಕೊಟ್ಟ ಈ ಪೋಲಿಸ್ ಎಲ್ಲರಿಗೂ ಮಾದರಿ!!

0
98

ಪೊಲೀಸ್ ಎಂದರೇನೆ ಜನರಿಗೆ ಒಂದು ರೀತಿಯ ಕಲ್ಪನೆ, ಏಕೆಂದರೆ ಕೆಲವರು ಮಾನವಿತೆ ಮರೆತು ಅಧಿಕಾರದ ದಾಹದಲ್ಲಿ ಜನ ಸಾಮಾನ್ಯೆರ ಮೇಲೆ ನಡೆದುಕೊಳ್ಳುವ ರೀತಿ ಪೊಲೀಸರ ಮೇಲೆ ಅಪನಂಬಿಕೆ ಹುಟ್ಟಿಸಿದೆ. ಬರಿ ಹಣದ ಆಸೆ ಬಿದ್ದ ಪೊಲೀಸರು ಬಡವರ ಪಾಲಿಗೆ ಎಷ್ಟರಮಟ್ಟಿಗೆ ಇದ್ದಾರೆ ಇನ್ನು ಪ್ರಶ್ನೆ ಜನರಲ್ಲಿ ಹುಟ್ಟಿಕೊಂಡಿದ್ದು. ಕಾಕಿಯನ್ನು ನೋಡಿ ಭಯ ಬಿಳ್ಳುತ್ತಾರೆ. ಆದರೆ ಇವರ ನಡುವೆ ಕೆಲವು ಪೊಲೀಸರು ಜನರಿಗೆ ಹತ್ತಿರವಾಗಿ ಮಾನವಿತೆ ತೋರಿಸಿ ಮೆಚ್ಚುಗೆ ಪಡೆದುಕೊಳ್ಳುತ್ತಿದ್ದಾರೆ. ಇಂತಹವರ ಸಾಲಿನಲ್ಲಿ ಬರುವ ಬೆಂಗಳೂರಿನ ಪೋಲಿಸ್ ಇನ್ಸ್ ಪೆಕ್ಟರ್ ಕದ್ದು ಸಿನಿಮಾ ನೋಡಲು ಬಂದು ಸಿಕ್ಕಿಬಿದ್ದ ಬಡ ವ್ಯಕ್ತಿಗೆ ಜೀವನವನ್ನೇ ರೋಪಿಸಿ ಮಾನವಿತೆ ಮೆರೆದಿದ್ದಾರೆ.

Also read: ಕಡಿಯುತ್ತಿರುವ ಮರಗಳನ್ನು ಬುಡಸಮೇತ ತೆಗೆದು ಸ್ಥಳಾಂತರ ಮಾಡಿ ಇನ್ನೊಂದೆಡೆ ನೆಟ್ಟು ಮರಗಳನ್ನು ಬದುಕಿಸುತ್ತಿರುವ ಬೆಳಗಾವಿಯ ಯುವಕ.!

ಹೌದು ಬೆಂಗಳೂರು ದಕ್ಷಿಣ ವ್ಯಾಪ್ತಿಯ ಆಡುಗೋಡಿ ಪೊಲೀಸ್ ಇನ್ಸ್ ಪೆಕ್ಟರ್ ದಿಲೀಪ್ ಕೆ.ಎಚ್ ಅವರೇ ಈ ಮಾನವಿತೇ ಮೆರೆದ್ದಿದ್ದು, ಇವರು ಎಂದಿನಂತೆ ಕರ್ತ್ಯವ್ಯದ ಮೇಲಿದ್ದಾಗ ಪಿವಿಆರ್ ಸಿನಿಮಾ ಥೇಟರ್-ನಿಂದ ಕರೆಯೊಂದು ಬರುತ್ತೆ, ಅದನ್ನು ಆಲಿಸಿದಾಗ ಅಪರಿಚಿತ ವ್ಯಕ್ತಿಯೊಬ್ಬ ಟಿಕೆಟ್ ಇಲ್ಲದೆ ಥೇಟರ್ ಒಳಗಡೆ ನುಗ್ಗುತ್ತಿದ್ದಾನೆ. ಎನ್ನುವ ಮಾಹಿತಿ ಬರುತ್ತೆ. ತಕ್ಷಣ ಸ್ಥಳಕ್ಕೆ ಧಾವಿಸಿದ ದಿಲೀಪ್ ಮತ್ತು ಅವರ ಸಿಬ್ಬಂದಿ ವ್ಯಕ್ತಿಯನ್ನು ವಶಕ್ಕೆ ಪಡೆದು ಠಾಣೆಗೆ ಕರೆ ತರುತ್ತಾರೆ. ಟಿಕೆಟ್ ಇಲ್ಲದೆ ಸಿನಿಮಾ ನೋಡಲು ಒಳನುಗ್ಗುತ್ತಿದ್ದ ಎಂಬ ಆರೋಪದಲ್ಲಿಮೇಲೆ ವ್ಯಕ್ತಿಯನ್ನು ವಶಕ್ಕೆ ಪಡೆಯುತ್ತಾರೆ ಆದರೆ. ವಿಚಾರಣೆ ನಡೆಸಿದಾಗ ಬೇರೆಯದೇ ಕತೆ ಹುಟ್ಟುತ್ತೆ.

ಉತ್ತರ ಕರ್ನಾಟಕ ಮೂಲದ ಕಡುಬಡತನದ ಕುಟುಂಬದಿಂದ ಬಂದ ಸುರೇಶ್ ಎಂಬ ಯುವಕ ತನ್ನ ನೆಚ್ಚಿನ ಹೀರೋ ಪ್ರಭಾಸ್ ಅಭಿನಯದ ಸಾಹೋ ಚಿತ್ರವನ್ನು ನೋಡುವ ಆಸೆ ಹೊಂದಿದ್ದ. ಆದರೆ, ಹಣವಿಲ್ಲದ ಕಾರಣ ನೇರವಾಗಿ ಪಿವಿಆರ್ ಗೆ ಹೋಗಿ ಟಿಕೆಟ್ ಇಲ್ಲದೇ ಒಳನುಗ್ಗಲು ಪ್ರವೇಶಿಸಿದಾಗ ಸಿಬ್ಬಂದಿ ಹಿಡಿದು ತಳಿಸಿದ್ದಾರೆ ಎನ್ನುವುದು ವ್ಯಕ್ತಿಯಿಂದ ತಿಳಿಯುತ್ತೆ, ಇದನ್ನು ಕೇಳಿದ ಪೊಲೀಸ್ ದಿಲೀಪ್ ಅವರ ಕಣ್ಣಲ್ಲಿ ನೀರು ಬಂದು, ತಕ್ಷಣ ದಿಲೀಪ್ ಠಾಣೆಗೆ ಕರೆದುಕೊಂಡು ಬಂದಿದ್ದ ಸುರೇಶ್ ಅವರಿಗೆ ಮೊದಲು ತಿಂಡಿ ಮತ್ತು ಬಟ್ಟೆಯ ವ್ಯವಸ್ಥೆ ಮಾಡಿ ನಂತರ ಸುರೇಶ್ ಅವರನ್ನು ಪಿವಿಆರ್ ಗೆ ಕರೆದುಕೊಂಡು ಹೋಗಿ ತಮ್ಮದೇ ಹಣದಲ್ಲಿ ಸಾಹೋ ಸಿನಿಮಾ ತೋರಿಸಿದ್ದಾರೆ ಅಲ್ಲದೆ ದಿಲೀಪ್ ಸಹ ಆತನೊಂದಿಗೆ ಸಿನಿಮಾ ನೋಡಿದ್ದಾರೆ.

Also read: ಯೂಟ್ಯೂಬ್ ಚಾನೆಲ್ ತೆರೆದು ಬಂದ ಹಣದಿಂದ 1200 ಅನಾಥ ಮಕ್ಕಳಿಗೆ ವಿಶೇಷ ಅಡುಗೆ ತಿಂಡಿಗಳನ್ನು ಮಾಡಿ ಕೊಡುತ್ತಿರುವ ಮಾದರಿ ವ್ಯಕ್ತಿ..

ಇಲ್ಲಿಯ ವರೆಗೆ ಬರಿ ಬಡ ವ್ಯಕ್ತಿಯ ಆಸೆಯನ್ನು ತಿರಿಸಿದ ದಿಲೀಪ್ ಅವರು ಇಷ್ಟಕ್ಕೆ ಸುಮ್ಮನಾಗಾದೆ ಆ ವ್ಯಕ್ತಿಯ ಜೀವನಕ್ಕೆ ಏನಾದರು ಸಹಾಯ ಮಾಡಬೇಕು ಎಂದು ಸ್ಟೇಶನ್ ಅಲ್ಲಿ ಹೌಸ್ ಕಿಪ್ಪಿಂಗ್ ಕೆಲಸ ಕೊಟ್ಟು ಜೊತೆಗೆ ಹತ್ತಿರದ ಹೋಟೆಲ್ ಒಂದರಲ್ಲಿ ಕೆಲಸ ಕೊಡಿಸಿದ್ದಾರೆ. ಇದರಿಂದ ಸಂತಸಗೊಂಡ ವ್ಯಕ್ತಿ ದಿಲೀಪ್ ಅವರಿಗೆ ಧನ್ಯವಾದ ತಿಳಿಸಿದ್ದಾನೆ. ಈ ವಿಚಾರ ತಿಳಿಯುತ್ತಿದ್ದಂತೆ ಪೊಲೀಸ್ ಅಧಿಕಾರಿಗಳಿಗೆ ಮೆಚ್ಚುಗೆ ವ್ಯಕ್ತವಾಗಿದ್ದು, ಡಿಸಿಪಿ ಇಶಾ ಪಂತ್ ಸಹ ಮೆಚ್ಚುಗೆ ಸೂಚಿಸಿದ್ದಾರೆ. ಇದು ಪ್ರತಿಯೊಬ್ಬ ನಾಗರಿಕರಲ್ಲೂ ಇದ್ದರೆ ಬಡತನಕ್ಕೆ ಎಲ್ಲಿ ನೆಲೆಯಿರುತ್ತೆ ಅಲ್ವ?