ಮೈಮೇಲೆ ಒಂದೆರಡು ಗುಳ್ಳೆಗಳಾದರೇನೇ ಕಷ್ಟ, ಅಂತದ್ರಲ್ಲಿ ಈ ವ್ಯಕ್ತಿಯ ಮೈಮೇಲೆ ಮರ ಬೆಳೆಯುವುದನ್ನು ಕಂಡ್ರೆ ಹೀಗೂ ಉಂಟೆ ಅಂತ ಹೇಳ್ತೀರ!!

0
386

ಸಹಜವಾಗಿ ಮನುಷ್ಯನಿಗೆ ಬರುವ ಖಾಯಿಲೆಗಳು ಯಾವ ರೀತಿಯಲ್ಲಿ ಬರುತ್ತಿವೆ ಗೊತ್ತೆಯಿದೆ. ಅದರಲ್ಲಿ ಕೈ ಕಾಲುಗಳಿಗೆ ಬರುವ ಕೆಲವೊಂದು ರೋಗಗಳು ವಿಚಿತ್ರವಾಗಿವೆ. ಅದರಲ್ಲಿ ಆನೆಕಾಲು ರೋಗ ಮತ್ತು ಶುಗರ್ ನಿಂದ ಬರುವ ಖಾಯಿಲೆಯಿಂದ ಕೈ-ಕಾಲು ಕೊಳೆಯುವುದನ್ನು ನೋಡಿದ್ದಿರ ಈಗ ನಾವು ಹೇಳುವ ಖಾಯಿಲೆ ಬಗ್ಗೆ ಹೇಳಿದರೆ ವಿಚಿತ್ರದಲ್ಲಿ ವಿಚಿತ್ರ ಅನಿಸುತ್ತೆ. ಅಂತಹ ಖಾಯಿಲೆ ಏನೆಂದರೆ ವ್ಯಕ್ತಿಯೊಬ್ಬನ ಕೈಕಾಲುಗಳಲ್ಲಿ ಮರದ ತೊಗಟೆ ಬೆಳೆಯುತ್ತಿದೆ. ಇದು ಎಲ್ಲಿವು ಕೇಳಿರದ ಅಪರೂಪದ ಖಾಯಿಲೆಯಾಗಿದ್ದು, ವೈದ್ಯಲೋಕದಲ್ಲಿ ಅಶ್ಚರಿ ಮೂಡಿಸಿದೆ.

ಹೌದು ಬಾಂಗ್ಲಾದೇಶದ ಹಳ್ಳಿಯೊಂದರ ಅಬುಲ್ ಬಜಂದರ್ ಎಂಬ ವ್ಯಕ್ತಿ ಕಳೆದ ಎರಡು ದಶಕಗಳಿಂದ ಈ ಖಾಯಿಲೆಗೆ ಒಳಗಾಗಿದ್ದಾನೆ. Epidermodysplasia Verruciformis ಎಂಬ ವಿಚಿತ್ರ ಕಾಯಿಲೆಗೆ ತುತ್ತಾಗಿ ಅವರ ಮುಂಗೈ ಹಾಗೂ ಮುಂಗಾಲು ಭಾಗದಲ್ಲಿ ತೊಗಟೆ ಬೆಳೆಯುತ್ತಿದೆ. ಇದು ವೈದ್ಯ ಲೋಕಕ್ಕೆ ಸವಾಲಾಗಿದ್ದ ತೊಗಟೆಯನ್ನು ಮೂರು ವರ್ಷಗಳ ಹಿಂದೆ ಶಸ್ತ್ರ ಚಿಕಿತ್ಸೆ ಮೂಲಕ ತೆಗೆಯಲಾಗಿತ್ತು. ಈ ಹಿಂದೇನೆ 2016ರಿಂದ ಒಟ್ಟು 25 ಬಾರಿ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಇಷ್ಟಾದರೂ ಬಜಂದರ್ ಗೆ ಕಾಣಿಸಿಕೊಂಡ ಕಾಯಿಲೆ ಕಡಿಮೆಯಾಗದೆ ಮತ್ತೆ ಮತ್ತೆ ಬರುತ್ತಿದೆ.

ಈ ಖಾಯಿಲೆ ಬಗ್ಗೆ ಹೇಳಿದ ಡಾ.ಸಮಂತ್ ಲಾಲ್ ಸೇನ್ 2017 ರಲ್ಲಿ ಶಸ್ತ್ರ ಚಿಕಿತ್ಸೆ ಮಾಡಲಾಗಿತ್ತು. ಹಾಗೆಯೇ ಸತತವಾಗಿ ಚಿಕಿತ್ಸೆ ಮುಂದುವರಿಸಿ ನಿಯಂತ್ರಣಕ್ಕೆ ತರುವ ಕೇಲಸ ಮಾಡುತ್ತಿದೆವೂ. ಆದರೆ ಯುವಕ ಆಸ್ಪತ್ರೆಯಲ್ಲಿ ಉಳಿದುಕೊಳ್ಳಲು ಒಪ್ಪಲಿಲ್ಲ ಮತ್ತು ಅವನು ಹೇದರಿ ತಮ್ಮ ಗ್ರಾಮಕ್ಕೆ ವಾಪಾಸ್ ಹೋಗಿಬಿಟ್ಟ. ಇದಾದ ಬಳಿಕ ಆತನಿಗೆ ತಿಳಿಸಿ ಆಸ್ಪತ್ರೆಗೆ ಬರುವಂತೆ ನಾವು ಕೇಳಿಕೊಂಡರೂ ಬಂದಿರಲಿಲ್ಲ, ಈ ಕಾಯಿಲೆಗೆ ವಿಎಚ್‍ಪಿ ಇನಫೆಕ್ಷನ್ ಕಾರಣವಾಗಿದೆ. ಇದು ದೊಡ್ಡ ಪ್ರಮಾಣದಲ್ಲಿ ಹರಡುವುದು ಕಡಿಮೆ, ಆದರೆ ಮೊದಲನೇ ಬಾರಿಗಿಂತಲೂ ಈ ಬಾರಿ ಈ ಪ್ರಕರಣ ನಮಗೆ ಅತ್ಯಂತ ದೊಡ್ಡ ಸವಾಲಾಗಿದೆ ಅಂತ ಸರ್ಜನ್ ಸಮಂತ್ ಲಾಲ್ ಸೇನ್ ಹೇಳಿದ್ದಾರೆ.

ಈ ಬಜಂದರ್ ಹೇಳಿದ್ದು:

ರಿಕ್ಷಾ ತಳ್ಳುವ ಕೆಲಸ ಮಾಡಿಕೊಂಡಿದ್ದೆ ಈ ರೀತಿಯ ಅಪರೂಪದ ಕಾಯಿಲೆಯಿಂದ ಟ್ರಿ ಮ್ಯಾನ್ ‘ ಅಂತಾನೆ ಕರೆಯಲಾಗುತ್ತಿದೆ. ಈ ಕಾಯಿಲೆಯಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ನಾನು ಅನೇಕ ವರ್ಷಗಳಿಂದ ಕೆಲಸ ಮಾಡುತ್ತಿಲ್ಲ. ಹೀಗಾಗಿ ನನ್ನ ಜೊತೆ ಕುಟುಂಬವೂ ಆಸ್ಪತ್ರೆಯಲ್ಲಿಯೇ ಕಾಲ ಕಳೆಯುವಂತಾಗಿದೆ. ಮತ್ತೆ ನನ್ನನು ಶಸ್ತ್ರಚಿಕಿತ್ಸೆ ಒಳಪಡಿಸುತ್ತಾರಾ ಎಂಬ ಆತಂಕ ಶುರುವಾಗಿದೆ. ಇದರಿಂದ ನನ್ನ ಕೈ ಹಾಗೂ ಪಾದಗಳು ಸರಿಯಾಗುತ್ತದೆ ಎಂಬ ಭರವಸೆ ನನಗಿಲ್ಲ, ಸುಮಾರು ವರ್ಷದಿಂದ ನನಗೆ ಸ್ವಂತ ಊಟ ಮಾಡಲು ಆಗುತ್ತಿಲ್ಲ ಮತ್ತೆ ನನ್ನ ಹೆಂಡತಿ ಹಾಗೂ ಮಗು ನನ್ನ ಜೊತೆಯಲ್ಲೇ ಇರುತ್ತಾರೆ ಮಗುವನ್ನು ಶಾಲೆಗೆ ಕಳುಹಿಸಲು ಸಾಧ್ಯವಾಗುತ್ತಿಲ್ಲ ಮೊದಲೇ ನಾವು ಬಡವರು ಏನು ಮಾಡಬೇಕು ಎಂದು ತಿಳಿಯುತ್ತಿಲ್ಲ ಎಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ 27 ವರ್ಷದ ಬಜಂದರ್ ಹೇಳಿದ್ದಾರೆ.

ಇಷ್ಟೊಂದು ಅಪರೂಪದ ಕಾಯಿಲೆಗೆ ಒಳಗಾದ ಅಬುಲ್ ಬಜಂದರ್ ಸದ್ಯ ತನ್ನ ತಾಯಿಯ ಜೊತೆಗೆ ಮತ್ತೆ ಆಸ್ಪತ್ರೆಗೆ ಮರಳಿದ್ದಾನೆ. ದಿನದಿಂದ ದಿನಕ್ಕೆ ಮುಂಗೈ ಹಾಗೂ ಮುಂಗಾಲು ಭಾಗದಲ್ಲಿ ತೊಗಟೆ ಪುನಃ ಬೆಳೆಯಲು ಆರಂಭಿಸಿದೆ. ಮತ್ತೆ ಅದನ್ನು ಐದರಿಂದ ಆರು ಬಾರಿ ಶಸ್ತ್ರ ಚಿಕಿತ್ಸೆ ಮಾಡಬೇಕಾಗುವ ಅನಿವಾರ್ಯತೆ ಎದುರಾಗಲಿದೆ ಎಂದು ವೈದ್ಯರು ತಿಳಿಸಿದ್ದಾರೆ.

Also read: ಎರಡೂ ಕಾಲುಗಳನ್ನು ಕಳೆದುಕೊಂಡ ಕಂದಮ್ಮಗೆ ಮರುಜೋಡನೆ ಮಾಡಿ ಪವಾಡವನ್ನೇ ಮಾಡಿದ ಕರ್ನಾಟಕದ ವೈದ್ಯರು..