ಬ್ಯಾಂಕುಗಳಲ್ಲಿ ಸಿಗಲಿದೆ ರೈಲ್ವೆ ಟಿಕೆಟ್

0
505

ಭಾರತೀಯ ರೈಲ್ವೆ ಇಲಾಖೆಯು ಜವರಲ್ ಬೋಗಿಯಲ್ಲಿ ಹೊಡಾಡುವವರಿಗೆ ಬ್ಯಾಂಕಿನಲ್ಲಿ ರೈಲ್ವೆ ಟಿಕೆಟ್ ಖರೀದಿಸಲು ಮಹತ್ವಾಕಾಂಕ್ಷೆಯ ಯೋಜನೆ ಯನ್ನು ಜಾರಿಗೆ ತರಲಿದೆ.

ಕಳೆದ ವರ್ಷ ಆಗಸ್ಟ್ ನಲ್ಲಿಯೇ ಇಂತಹ ವ್ಯವಸ್ಥೆಗಾಗಿ ರೈಲ್ವೆ ಮಂಡಳಿ ಚಿಂತನೆಯನ್ನು ಆರಂಭಿಸಿದೆ, ಈಗ ಈ ಯೋಜನೆ ಅಂತಿಮ ಹಂತದಲ್ಲಿದ್ದು ಇದನ್ನು ಸಾಧ್ಯವಾಗಿಸಲು ರೈಲ್ವೆ ಇಲಾಖೆ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಇದನ್ನು ಸಾಧ್ಯವಾಗಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತದೆ.

ಈ ಯೋಜನೆಯನ್ನು ಏಪ್ರಿಲ್ 2017 ರಲ್ಲಿ ಅಂತಿಮ ಗೊಳ್ಳಲಿದ್ದು, ಬ್ಯಾಂಕುಗಳಲ್ಲಿ ರೈಲ್ವೆ ಟಿಕೆಟ್ ಪಡೆಯಲು ಸೌಲಬ್ಯ ನಂತರದ ಆರಂಭವಾಗಲಿದೆ. ಇದು ಹಲವಾರು ಬಡವರಿಗೆ ಆಶಾದಾಯಕವಾಗಲಿದೆ ಎಂದು ತಿಳಿಸಿದ್ದರೆ.

ಬ್ಯಾಂಕಿನಲ್ಲಿ ರೈಲ್ವೆ ಟಿಕಟ್ ಪಡೆಯಲು ಮಷೀನ್ಗಳನ್ನು ಸ್ಥಾಪಿಸಿ ಅದರ ಮೂಲಕ ಟಿಕಟ್ ಪಡೆಯುವಂತೆ ಮಾಡಲಾಗುತ್ತದೆ. ನಂತರ ಎಟಿಎಂಗಳ್ಲಿ ನಿರ್ದಿಷ್ಟ ಬದಲಾವಣೆ ತಂದು ಅದರಲ್ಲಿಯೇ ರೈಲ್ವೆ ಟಿಕೆಟ್ ಪಡೆಯುವಂತೆ ಮಾಡಲಾಗಿದೆ. ಇದರಿಂದ ನಿತ್ಯ ಸಂಚರಿಸುವ ಪ್ರಯಾಣಿಕರಿಗೆ ಭಾರೀ ಅನುಕೂಲವಾಗಿದೆ ಎಂಬುದು ಇಲಾಖೆಯ ಅನಿಸಿಕೆ ಟಿಕೆಟ್ ಮುಂದೆ ಭಾರಿ ಜನದಟ್ಟನೆಯಗುವುದನ್ನು ಈ ವ್ಯವಸ್ಥೆ ತಪ್ಪಿಸಲಿದೆ. ಮತ್ತು ಪ್ರಯಾಣಿಕರು ಗಂಟೆಗಟ್ಟಲೆ ಕ್ಯೂನಲ್ಲಿ ನಿಲ್ಲುವುದನ್ನು ಕೂಡ ಇದರಿಂದ ತಪ್ಪಲಿದೆ ಎಂದು ಭಾರತೀಯ ರೈಲ್ವೆ ಸಂಸ್ಥೆಯ ಅಭಿಪ್ರಾಯವಾಗಿದೆ.