don’t worry ಶನಿವಾರ ಭಾನುವಾರವೂ ಬ್ಯಾಂಕ್ ಕೆಲಸ ಮಾಡ್ತವೆ…

0
467

ಕಾನೂನುಬದ್ಧ ದುಡಿಮೆಯ ಹಣದ ವಿವರ ಬಹಿರಂಗಪಡಿಸಲು ಯಾರೊಬ್ಬರೂ ಭಯ ಪಡಬೇಕಾಗಿಲ್ಲ ಗೃಹಿಣಿಯರು, ರೈತರ ಉಳಿತಾಯಕ್ಕೆ ತೆರಿಗೆ ಹೊರೆಯ ಭೀತಿ ಇಲ್ಲ ಎಂದು ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರು ಹೇಳಿದ ಬೆನ್ನಲ್ಲೇ ಭಾರತದ ಬ್ಯಾಂಕುಗಳು ಈ ಶನಿವಾರ ಮತ್ತು ಬಾನುವಾರವೂ ಕೆಲಸ ಮಾಡಲು ತಯಾರಿ ನೆಡೆಸಿವೆ. ₹ 500 ಮತ್ತು ₹ 1,000 ಮುಖಬೆಲೆಯ ನೋಟುಗಳ ರದ್ದತಿಯಿಂದ ಜನರಲ್ಲಿ ಮೂಡಿರುವ ಆತಂಕ ದೂರ ಮಾಡಲು ಕೇಂದ್ರ ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಂಡಿದೆ.

ಠೇವಣಿ ಇರಿಸಲು ಮತ್ತು ಹೊಸ ನೋಟುಗಳನ್ನು ಪಡೆಯಲು ಗ್ರಾಹಕರು  ಬ್ಯಾಂಕ್‌ಗಳಿಗೆ ಗುರುವಾರ ಮುಗಿ ಬೀಳುವ ನಿರೀಕ್ಷೆ ಇರುವುದರಿಂದ ಪರಿಸ್ಥಿತಿ ಎದುರಿಸಲು ಬ್ಯಾಂಕ್‌ಗಳು ಹಲವು ಕ್ರಮಗಳನ್ನು ಕೈಗೊಂಡಿವೆ. ಬ್ಯಾಂಕ್‌ಗಳ ಕೆಲಸದ ಅವಧಿಯನ್ನು ಸಂಜೆ 6 ಗಂಟೆಯವರೆಗೆ ವಿಸ್ತರಿಸಲಾಗಿದೆ. ಐಸಿಐಸಿಐ ಬ್ಯಾಂಕ್‌ ಗುರುವಾರ, ಶುಕ್ರವಾರ ರಾತ್ರಿ 8 ಗಂಟೆಯವರೆಗೆ ಕಾರ್ಯನಿರ್ವಹಿಸಲಿದೆ. ಈ ಶನಿವಾರ ಮತ್ತು ಭಾನುವಾರವೂ ಕಾರ್ಯನಿರ್ವಹಿಸಲಿವೆ. ಹೊಸ ನೋಟುಗಳನ್ನು ಹೊತ್ತ ಟ್ರಕ್‌ಗಳು ದೇಶದ ಮೂಲೆ ಮೂಲೆಗೂ ತೆರಳಿವೆ.

ಮೆಟ್ರೊ ರೈಲು, ಅಡುಗೆ ಅನಿಲ (ಎಲ್‌ಪಿಜಿ ) ಖರೀದಿ, ರೈಲ್ವೆ ಕ್ಯಾಟರಿಂಗ್‌ ಮತ್ತಿತರ ಕಡೆಗಳಲ್ಲಿ ಇದೆ 11ರವರೆಗೆ ಹಳೆ ನೋಟುಗಳನ್ನು ಸ್ವೀಕರಿಸಲು ಅವಕಾಶ ವಿಸ್ತರಿಸಲಾಗಿದೆ. ವೈದ್ಯರ ಶಿಫಾರಸಿನ ಮೇರೆಗೆ ಔಷಧಿ ಖರೀದಿಸುವಾಗಲೂ ಇದು ಅನ್ವಯಿಸುತ್ತದೆ. ಎಟಿಎಂಗಳು ಸತತ ಎರಡನೆ ದಿನ ಕಾರ್ಯನಿರ್ವಹಿಸದಿದ್ದರೂ, ಬ್ಯಾಂಕ್‌ ಮತ್ತು ಅಂಚೆ ಕಚೇರಿಗಳು ಗುರುವಾರದಿಂದಲೇ ಗರಿಷ್ಠ ಮುಖಬಲೆಯ ಹೊಸ ನೋಟುಗಳನ್ನು ವಿತರಿಸಲಿವೆ.

ಟೋಲ್‌ ಸಂಗ್ರಹ ರದ್ದು: ರಾಷ್ಟ್ರೀಯ ಹೆದ್ದಾರಿಯ ಟೋಲ್‌ ಗೇಟ್‌ಗಳಲ್ಲಿ ಸುಂಕ ಸಂಗ್ರಹಿಸುವುದನ್ನು ಈ ತಿಂಗಳ 11ರವರೆಗೆ ರದ್ದುಪಡಿಸಲು ಸರ್ಕಾರ ನಿರ್ಧರಿಸಿದೆ ಮತ್ತು ಭಾರತೀಯ ರಿಸರ್ವ್‌ ಬ್ಯಾಂಕ್‌, ಹೊಸ ನೋಟುಗಳನ್ನು ದೇಶದಾದ್ಯಂತ ಪೂರೈಸಲು ವ್ಯಾಪಕ ಕ್ರಮ ಕೈಗೊಂಡಿದೆ.

ಆದರೆ ಸರ್ಕಾರದ ಈ ನಿಲುವನ್ನು ಪ್ರಶ್ನಿಸಿ ಉತ್ತರಪ್ರದೇಶ ವಕೀಲ ಸಂಗಮ ಲಾಲ್‌ ಪಾಂಡೆ ಸುಪ್ರೀಂ ಕೋರ್ಟ್‌ನಲ್ಲಿ ಪಿಐಎಲ್‌ ಸಲ್ಲಿಸಿದ್ದಾರೆ, ಕೇಂದ್ರ ಸರ್ಕಾರ ₹500 ಮತ್ತು 1 ಸಾವಿರ ನೋಟುಗಳನ್ನು ರದ್ದುಪಡಿಸಿರುವುದನ್ನು ಪ್ರಶ್ನಿಸಿ ಜನರಿಗೆ ಅನನುಕೂಲ ತಪ್ಪಿಸಲು ಹೆಚ್ಚಿನ ಸಮಯಾವಕಾಶ ನೀಡಬೇಕು ಎಂದು ಕೋರಿದ್ದಾರೆ.