ಅಪಾರ್ಟ್‌ಮೆಂಟ್‌-ನಲ್ಲಿ ಮನೆ ಖರೀದಿಸುವ ಯೋಚನೆಯಲ್ಲಿರುವವರಿಗೆ ಸರ್ಕಾರದಿಂದ ಶಾಕ್; ಇನ್ನೂ ಐದು ವರ್ಷ ಬೆಂಗಳೂರಿನಲ್ಲಿ ಅಪಾರ್ಟ್‌ಮೆಂಟ್‌ ನಿರ್ಮಾಣಕ್ಕೆ ತಡೆ..

0
372

ರಾಜ್ಯದಲ್ಲಿ ಸರಿಯಾದ ಮಳೆಯಿಲ್ಲದೆ ಬರಗಾಲ ಸಂಭವಿಸಿದ್ದು ನೀರಿನ ಸಮಸ್ಯೆಯನ್ನು ಸರಿದೂಗಿಸಲು ಮುಂದಿನ 5 ವರ್ಷ ನಗರದಲ್ಲಿ ಅಪಾರ್ಟ್‌ಮೆಂಟ್‌ ನಿರ್ಮಾಣಕ್ಕೆ ತಡೆ ಹೇರಲು ಸರ್ಕಾರ ಚಿಂತನೆ ನಡೆಸಿದೆ. ಅದಕ್ಕಾಗಿ ಮುಂದಿನ ಐದು ವರ್ಷ ಬಿಲ್ಡರ್​ಗಳು ಯಾವುದೇ ಅಪಾರ್ಟ್​​​ಮೆಂಟ್​ ನಿರ್ಮಾಣ ಮಾಡಬೇಡಿ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್​ ತಿಳಿಸಿದ್ದಾರೆ. ಅಪಾರ್ಟ್ಮೆಂಟ್ ಕಟ್ಟಿ, ಅದರಿಂದ ಲಾಭ ಗಳಿಸಿ, ಅರಾಮಾಗಿ ಇರಬಹುದು. ಅಪಾರ್ಟ್ಮೆಂಟ್ ಗೆ ಹೋಗಿ ನೆಮ್ಮದಿಯಾಗಿ ಇರಬಹುದು ಎಂದು ಕನಸು ಕಾಣುತ್ತಿರುವ ರಾಜಧಾನಿಯ ಜನರಿಗೆ ರಾಜ್ಯ ಸರ್ಕಾರ ಎಚ್ಚರಿಕೆ ಬಿಸಿಯನ್ನು ನೀಡಿದೆ.

Also read: ಮಂಡ್ಯದಲ್ಲಿ ಜೆಡಿಎಸ್ ಶಾಸಕರು, ಸಚಿವರು ನಾಪತ್ತೆ; ಹುಡುಕಿಕೊಟ್ಟವರಿಗೆ ಸೂಕ್ತ ಬಹುಮಾನ, ಜಿಲ್ಲೆಯ ತುಂಬೆಲ್ಲ ಎಂದು ಕಾಣುತ್ತಿರುವ ಫ್ಲೆಕ್ಸ್‌ಗಳು..

ಅಪಾರ್ಟ್‌ಮೆಂಟ್‌ ನಿರ್ಮಾಣ ವಿಲ್ವಾ?

ಹೌದು ಅಪಾರ್ಟ್‌ಮೆಂಟ್‌ ಕಟ್ಟಡಗಳಿಗೆ ಕಡಿವಾಣ ಹಾಕಲು ಸರ್ಕಾರ ಮುಂದಾಗಿದ್ದು, ಈ ಕುರಿತು ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದ ಡಿಸಿಎಂ, ರಾಜ್ಯದಲ್ಲಿ ಈಗಾಗಲೇ ಸಾವಿರಾರು ಅಪಾರ್ಟ್​ಮೆಂಟ್​ಗಳು ಮಾರಾಟವಾಗದ ಉಳಿದಿದೆ, ಅಲ್ಲದೆ ನೀರಿಗೂ ಸಹ ಸಾಕಷ್ಟು ಸಮಸ್ಯೆ ಎದುರಾಗಿದೆ. ಪ್ರಸ್ತುತ ರಾಜ್ಯ ಎದುರಿಸುತ್ತಿರುವ ಕುಡಿಯುವ ನೀರಿನ ಬವಣೆ ಕುರಿತು ಬೆಂಗಳೂರಿನಲ್ಲಿ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್, “ರಾಜಧಾನಿಯಲ್ಲಿ ಈಗಾಗಲೇ ಬಿಡಿಎ ಹಾಗೂ ಖಾಸಗಿ ಕಂಪೆನಿಗಳಿಂದ ಅನೇಕ ಅಪಾರ್ಟ್​ಮೆಂಟ್​ಗಳು (ವಸತಿ ಸಮುಚ್ಚಯ) ನಿರ್ಮಾಣವಾಗಿದೆ. ಅದರಲ್ಲಿ ಸಾವಿರಾರು ಅಪಾರ್ಟ್​ಮೆಂಟ್​ ಮಾರಾಟವಾಗಿಲ್ಲ. ಅದಕ್ಕೆ ನೀರು, ವಿದ್ಯುತ್​ ಕೊಡುತ್ತಿದ್ದೇವೆ.

ಅಪಾರ್ಟ್​ಮೆಂಟ್​ ನಿರ್ಮಾಣ ಮಾಡಬೇಕಾದರೆ ಅದಕ್ಕೆ ಮೂಲಭೂತವಾಗಿ ವಿದ್ಯುತ್​ ಹಾಗೂ ನೀರಿನ ಸೌಲಭ್ಯವನ್ನು ನೀಡಲೇಬೇಕು. ಇದರಿಂದ ನೀರಿನ ಸಮಸ್ಯೆ ಉದ್ಭವಿಸುತ್ತಿದೆ. ಈ ಹಿನ್ನೆಲೆಯಲ್ಲಿ ಇನ್ನು ಐದು ವರ್ಷ ಅಪಾರ್ಟ್​ಮೆಂಟ್​ ನಿರ್ಮಾಣ ಮಾಡದಿರುವುದು ಒಳಿತು. ರಾಜ್ಯ ಸರ್ಕಾರ ಈ ಕುರಿತು ಸದ್ಯದಲ್ಲೇ ಮಹತ್ವದ ತೀರ್ಮಾನ ಹೊರಡಿಸಲಿದೆ” ಎಂದು ಅವರು ತಿಳಿಸಿದ್ದಾರೆ.

Also read: ಬಿಗ್ ಬ್ರೇಕಿಂಗ್ ಅಂಗವಿಕಲ ಮಾಸಾಶನ, ವೃದ್ದಾಪ್ಯ ವೇತನವನ್ನು ಎರಡರಷ್ಟು ಹೆಚ್ಚಿಸಿದ ಸಿಎಂ ಕುಮಾರಸ್ವಾಮಿ..

ಅಪಾರ್ಟ್​ಮೆಂಟ್​ ನಿರ್ಮಾಣ ಮಾಡಬೇಕಾದರೆ ಅದಕ್ಕೆ ಮೂಲಭೂತವಾಗಿ ವಿದ್ಯುತ್​ ಹಾಗೂ ನೀರಿನ ಸೌಲಭ್ಯವನ್ನು ನೀಡಲೇಬೇಕು. ಇದರಿಂದ ನೀರಿನ ಸಮಸ್ಯೆ ಉದ್ಭವಿಸುತ್ತಿದೆ. ಈ ಹಿನ್ನೆಲೆಯಲ್ಲಿ ಇನ್ನು ಐದು ವರ್ಷ ಅಪಾರ್ಟ್​ಮೆಂಟ್​ ನಿರ್ಮಾಣ ಮಾಡದಿರುವುದು ಒಳಿತು. ಅಪಾರ್ಟ್​ಮೆಂಟ್​ಗಳಿಗೆ ಕುಡಿಯುವ ನೀರಿನ್ನು ಪೂರೈಸುವುದು ಪಾಲಿಕೆಗೆ ಕಷ್ಟವಾಗುತ್ತಿದೆ. ನೀರಿನ ಕೊರತೆಯಿಂದ ಅಪಾರ್ಟ್ಮೆಂಟ್ ಗಳ ನಿರ್ಮಾಣಕ್ಕೆ ಕಡಿವಾಣ ಹಾಕಲು ಸರ್ಕಾರ ಗಂಭೀರ ಚಿಂತನೆ ನಡೆಸಿದೆ. ಈ ಕುರಿತು ನಿನ್ನೆ ನಡೆದ ಪಕ್ಷದ ಸಭೆಯಲ್ಲಿಯೂ ಚರ್ಚಿಸಲಾಗಿದೆ, ಈ ಕುರಿತು ಬಿಲ್ಡರ್ಸ್​ಗಳ ಜೊತೆ ಕೂಡ ಚರ್ಚೆ ನಡೆಸಲಾಗುವುದು ಅಲ್ಲದೆ ಇನ್ನು ಮುಂದೆ ಅಪಾರ್ಟ್​ಮೆಂಟ್ ನಿರ್ಮಾಣಕ್ಕೆ ಅನುಮತಿ ಕಡ್ಡಾಯಗೊಳಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

47 ಸಾವಿರ ಅಪಾರ್ಟ್​ಮೆಂಟ್​ ಖಾಲಿ

Also read: ಇನ್ಮುಂದೆ ಯಾವುದೇ ತುರ್ತು ಸೇವೆಗೆ ಒಂದೇ ನಂಬರ್; 112ಕ್ಕೆ ಕಾಲ್ ಮಾಡಿ ಎಲ್ಲ ತರಹದ ತುರ್ತು ಸೇವೆ ಪಡೆಯಬಹುದು..

ಬೆಂಗಳೂರು ನಗರದಲ್ಲಿ ಈಗಾಗಲೇ 45 ಸಾವಿರ ಖಾಸಗಿ ವಸತಿ ಸಮುಚ್ಚಗಳು ಮಾರಾಟವಾಗಿಲ್ಲ. ಇನ್ನು ಬಿಡಿಎ ನಿರ್ಮಾಣದ 2 ಸಾವಿರ ಫ್ಲಾಟ್​ಗಳೂ ಖಾಲಿ ಇವೆ. ಈ ಅಪಾರ್ಟ್​ಮೆಂಟ್​ಗಳಿಗೆ ಈಗಾಗಲೇ ನೀರಿನ ವ್ಯವಸ್ಥೆ ಸೇರಿದಂತೆ ಎಲ್ಲ ಸೌಲಭ್ಯಗಳು ನೀಡಲಾಗಿದೆ. ಆದರೆ ಮುಂದೆ ಕಟ್ಟುವ ಕಟ್ಟಡಗಳಿಗೆ ಮೂಲಭೂತ ವ್ಯವಸ್ಥೆ ಕಲ್ಪಿಸುವುದು ಕಷ್ಟವಾಗುತ್ತೆ ಎನ್ನುವ ಉದೇಶದಿಂದ ಈ ನಿರ್ಧಾರ ಮಾಡಲಾಗಿದೆ.