ಗದಗಿನ ಭೀಷ್ಮ ಕೆರೆಯ ಮಧ್ಯದಲ್ಲಿ 116 ಅಡಿ ಎತ್ತರದಲ್ಲಿ ರಾರಾಜಿಸುತ್ತಿದೆ.. ಬಸವೇಶ್ವರರ ಪ್ರತಿಮೆ, ಅದ್ಬುತ ಪ್ರೇಕ್ಷಣೀಯ ಸ್ಥಳ.. ಒಮ್ಮೆ ಭೇಟಿ ಕೊಡಿ..

0
720

ಗದಗಿನಲ್ಲಿ ಕೆರೆಯೊಂದು ಇದೆ.. ಅದರ ಹೆಸರೇ ಭೀಷ್ಮ ಕೆರೆ.. ಆ ಕೆರೆಯ ಮಧ್ಯಭಾಗದಲ್ಲಿ ಬಸವೇಶ್ವರರ ಮೂರ್ತಿ ನೋಡಲೆರೆಡು ಕಣ್ಣು ಸಾಲದು.. ದಿನ ನಿತ್ಯ ನೂರಾರು ಪ್ರವಾಸಿಗರು ಬಂದು ಹೋಗುವ ಈ ಅಧ್ಬುತ ಸ್ಥಳಕ್ಕೊಮ್ಮೆ ಭೇಟಿ ನೀಡಲೇ ಬೇಕು..

38 ವರ್ಷದ ಮುಖಚರ್ಯೆ ಬಸವೇಶ್ವರರು 38 ವರ್ಷಗಳ ಕಾಲ ಮಾತ್ರ ಬದುಕಿದ್ದರಿಂದ ಪ್ರತಿಮೆಯ ಮುಖಚರ್ಯೆ ಅದೇ ವಯಸ್ಸಿನವರಂತೆ ವೀಕ್ಷಕರಿಗೆ ಕಾಣುವಂತೆ ರಚಿಸಲಾಗಿದೆ.

ಬೆಂಗಳೂರಿನ ಶಿಲ್ಪಿ ಶ್ರೀಧರ್ ಪ್ರತಿಮೆಯನ್ನು ನಿರ್ಮಿಸಿದ್ದಾರೆ. ಬಸವೇಶ್ವರ ಪ್ರತಿಮೆಯ ಕೆಳಗೆ ನಿರ್ಮಿಸಿರುವ 14 ಕಮಾನುಗಳಲ್ಲಿ ಬಸವೇಶ್ವರರ ಜೀವನ ಚರಿತ್ರೆ, 12ನೇ ಶತಮಾನದ ಕಲ್ಯಾಣ ನಾಡಿನ ಶರಣ ಕಾಲಘಟನೆಗಳಿಗೆ ಸಂಬಂಧಿಸಿದ ವರ್ಣಚಿತ್ರಗಳನ್ನು ರಚಿಸಲಾಗಿದೆ. ಈ ವರ್ಣಚಿತ್ರಗಳಿಗೆ ಧ್ವನಿ-ಬೆಳಕಿನ ವ್ಯವಸ್ಥೆ ಮಾಡಲಾಗಿದೆ. ಬಸವನ ಬಾಗೇವಾಡಿ, ಕೂಡಲ ಸಂಗಮ, ಇಂಗಳೇಶ್ವರದಲ್ಲಿ ನಿರ್ಮಿಸಿರುವ ಚಿತ್ರಗಳ ಮಾದರಿಯಲ್ಲಿ ಈ ವರ್ಣಚಿತ್ರಗಳನ್ನು ನಿರ್ಮಿಸಲಾಗಿದೆ. ಕಲ್ಲುಗಳಲ್ಲಿ 16 ವಚನಗಳನ್ನು ಕೆತ್ತಲಾಗಿದ್ದು, ಅವುಗಳನ್ನು ಬಸವೇಶ್ವರ ಪ್ರತಿಮೆಯ ಸುತ್ತಲೂ ಪ್ರದಕ್ಷಿಣೆ ಹಾಕುವ ಯಾತ್ರಿಕರು ಓದಲು ಅನುಕೂಲವಾಗುವಂತೆ ಅಳವಡಿಸಲಾಗುತ್ತದೆ.

ನೆಲ ಮಟ್ಟದಿಂದ 116.7 ಅಡಿ ಎತ್ತರದ ಪ್ರತಿಮೆ ಸ್ಥಾಪಿಸಲಾಗಿದ್ದು, ಅದರಲ್ಲಿ 97 ಅಡಿ ಎತ್ತರ ಪ್ರತಿಮೆ, ಇನ್ನುಳಿದ 19.7 ಮೀ. ಪದತಲ ನಿರ್ಮಿಸಲಾಗಿದೆ.

ಪ್ರತಿಮೆಯ ಸುತ್ತಲಿನ ಪ್ರದೇಶದಲ್ಲಿ ಉದ್ಯಾನ ವನ ಮಾಡಲಾಗಿದೆ..

116 ಅಡಿ ಎತ್ತರದ ಬಸವೇಶ್ವರರ ಮುಂದೆ ಫೋಟೋ ತೆಗೆಸಿಕೊಂಡು ತಮ್ಮ ನೆನಪಿನ ಬುತ್ತಿಗೆ ಸೇರಿಸಿಕೊಳ್ಳುವವರಲ್ಲಿ ನೀವೂ ಒಬ್ಬರಾಗಿ..

ಶುಭವಾಗಲಿ.. ಶೇರ್ ಮಾಡಿ ಮಾಹಿತಿ ಹಂಚಿ..