ಬಸಳೆ ಸೊಪ್ಪಿನ ಆರೋಗ್ಯಕಾರಿ ಗುಣಗಳು ನಿಮಗೆ ಗೊತ್ತಾದ್ರೆ ಮನೆ ಹಿತ್ತಲಲ್ಲಿ ಬೆಳೆಸೋದು ಗ್ಯಾರಂಟೀ..

0
1829

Kannada News | Health tips in kannada

ಬಸಳೆ ಒಂದು ಬಳ್ಳಿ. ಕೆಂಪು ಬಸಳೆ, ಬಿಳಿ ಬಸಳೆ ಎಂದು ಎರಡು ವಿಧಗಳಿವೆ. ಇದರಲ್ಲಿ ಬಿಳಿ ಬಸಳೆ ಹೆಚ್ಚು ಜನಪ್ರಿಯ. ಉಪೋಧಿಕ, ಪಾತಕಿ,ಅಮೃತವಲ್ಲರಿ ಮುಂತಾದವುಗಳು ಇದಕ್ಕಿರುವ ಇನ್ನಿತರ ಹೆಸರುಗಳು. ಬಸಳೆ ರುಚಿಯಲ್ಲಿ ಸಿಹಿ. ಅಂತೂ ಸ್ವಭಾವ ಹೊಂದಿದ್ದರು ಅತ್ಯಂತ ಪುಷ್ಟಿಕರ. ಕಬ್ಬಿಣ ಮತ್ತು ಪೌಷ್ಟಿಕಾಂಶಗಳು ಅಧಿಕವಿರುವುದರಿಂದ ಮಕ್ಕಳಿಗೆ ಮತ್ತು ಗರ್ಭಿಣಿಯರಿಗೆ ಬಲು ಒಳ್ಳೆಯದು. ಉಷ್ಣ ಕಡಿಮೆ ಮಾಡುವ ಬಸಳೆಯು ವಾತ ಶಮನಕಾರಿ, ಮಲಭದ್ಧತೆಯ ನಿವಾರಕ, ಹೊಟ್ಟೆಯುರಿ, ಬಾಯಿಹುಣ್ಣುಗಳಿಗೆ ಉತ್ತಮ ಔಷಧ.


ಬಳಸುವುದು ಹೇಗೆ?
– ವಾತ ಸಮಸ್ಯೆ, ಮಲಬದ್ಧತೆ , ಹೊಟ್ಟೆಯುರಿ, ಬಾಯಿಹುಣ್ಣಿದ್ದಾಗ ಬಸಳೆ ಸೊಪ್ಪನ್ನು ಹೆಸರು ಕಾಳು ಅಥವಾ ತೊಗರಿಬೇಳೆಯೊಂದಿಗೆ ಸೇರಿಸಿ ಪಲ್ಯ ಮಾಡಿ ಸೇವಿಸಬಹುದು.
– ಸೊಪ್ಪನ್ನು ತುಪ್ಪ ಅಥವಾ ಎಣ್ಣೆಯ ಜೊತೆಗೆ ಸ್ವಲ್ಪ ಹುರಿದು ರುಚಿಗೆ ತಕ್ಕಸ್ಟು ಉಪ್ಪು,ಹುಲಿ, ಖಾರ ಸೇರಿಸಿ ಸ್ವಲ್ಪ ಅರೆಯಬೇಕು. ಇದಕ್ಕೆ ಆರರಿಂದ ಎಂಟು ಭಾಗ ಹುಳಿಯಿಲ್ಲದ ಮೊಸರು ಸೇರಿಸಿ ಜೀರಿಗೆ ಒಗ್ಗರಣೆ ಕೊಟ್ಟಲ್ಲಿ ತಂಬುಳಿ ಅಥವಾ ಮೊಸರು ಬಜ್ಜಿ ಸಿದ್ಧ.

-ದಿಢೀರ್ ದೋಸೆಗೆ ಎಲೆಗಳನ್ನು ಮೊದಲು ಬಿಸಿ ನೀರಿನಲ್ಲಿ ತೊಳೆದು ಒಂದು ಹಿಡಿ ಬಸಳೆ ಸೊಪ್ಪಿಗೆ ನಾಲ್ಕು ಹಿಡಿ ನೆಂದಿರುವ ಅಕ್ಕಿಯನ್ನು ಸೇರಿಸಿ ರುಚಿಗೆ ತಕ್ಕಸ್ಟು ಉಪ್ಪನ್ನು ಬೆರೆಸಿ ತಿರುವಬೇಕು. ತಿರುವಿದ ಹಿಟ್ಟನ್ನು ನೇರವಾಗಿ ಕಾವಲಿಗೆ ಹಾಕಿದ್ದಲ್ಲಿ ಬಿಸಿ ಬಿಸಿ ದೋಸೆ ಸಿದ್ದವಾಗುತ್ತದೆ.
– ಬಾಯಿ ಹುಣ್ಣಿದ್ದಾಗ ಒಂದೆರಡು ಬಸಳೆ ಎಲೆಗಳಿಗೆ ಉಪ್ಪಿನ ಹರಳೊಂದನ್ನು ಸೇರಿಸಿ ಅಗೆದು ತಿನ್ನಬಹುದು.

MRR ನ್ಯೂಲೈಫ್
ನ್ಯೂ ನಂ 7 , ಎರಡನೇ ಮಹಡಿ, 50 ಅಡಿ ರಸ್ತೆ,
ಹನುಮಂತನಗರ, ಬೆಂಗಳೂರು 50
ದೂರವಾಣಿ ಸಂಖ್ಯೆ: 9071904622 , 8217224840

Also Read: ಪಿತ್ತಕ್ಕೆ, ಉರಿಮೂತ್ರಕ್ಕೆ, ರಕ್ತಶುದ್ಧಿಗೆ ದುಬಾರಿ ಔಷಧಿ ಮೊರೆ ಹೋಗೋ ಬದ್ಲು ಈ ಶರಬತ್ತು ಮಾಡ್ಕೊಂಡು ಕುಡಿದ್ರೆ ಸಾಕು…