ಬ್ಯಾಟಿಲೋನಿಯಾದ ತೂಗುವ ಉದ್ಯಾನ

0
1201

ಬ್ಯಾಟಿಲೋನಿಯಾದ ತೂಗುವ ಉದ್ಯಾನ

ದಂತ ಕಥೆಯಾದ ಈ ಉದ್ಯಾನವನವನ್ನು ಯುಪ್ರಿಟೆಸ್ ನದಿಯ ದಂಡೆಯ ಮೇಲೆ ಸುಮಾರು ಕ್ರಿ.ಪೂ 7ನೇಯ ಶತಮಾನದಲ್ಲಿ ನಿರ್ಮಿಸಲಾಯಿತು. ಇದು ಪ್ರಾಚೀನ ಜಗತ್ತಿನ ಏಳು ವಿಸ್ಮಯಗಳಲ್ಲಿ ಒಂದು. ಸೋಜಿಗವೆಂದರೆ, ಬ್ಯಾಟಿಲೋನಿನ ಕ್ಯೂನಿಫಾರ್ಮ್ ದಾಖಲೆಗಳು ಅಲ್ಲಿನ ಅರಮನೆ. ಬ್ಯಾಟಿಲೋನ್’ನ ನಗರ ಮತ್ತು ಅದರ ಗೋಡೆಗಳನ್ನು ಉಲ್ಲೇಖಿಸುವಂತೆ ತೂಗುವ ಉದ್ಯಾನವನವದ ಬಗ್ಗೆ ಎಳ್ಳಷ್ಟು ಉಲ್ಲೇಖಿಸದಿರುವುದು ಅಚ್ಚರಿಯನ್ನು ಮೂಡಿಸಿದೆ.

ಬಹುತೇಕ ವಿದ್ವಾಂಸರು ತೂಗುವ ಉದ್ಯಾನವನವನ್ನು ಕಟ್ಟಿದನು ದೊರೆ ಎರಡನೆ ನೆಬುಕಡ್ನಿಜರ್ ಎಂದು ಅಭಿಪ್ರಾಯಪಡುತ್ತಾರೆ. ನೆಬುಕಡ್ನಿಜರ್’ನ ಪತ್ನಿಯಾದ ಅಮೈಟಿಸ್, ಮೀಡ್ ಪ್ರದೇಶದವಳು. ಅವಳ ತಾಯ್ನಾಡಿನ ಬೆಟ್ಟ, ಮರ –ಗಿಡಗಳ ಹಸಿರಿನ ಸುಂದರ ಪರಿಸರದ ಅಗಲಿಕೆಯಲ್ಲಿದ್ದ ಈಕೆಯನ್ನು ಸಂತೈಸಲು ನೆಬುಕಡ್ನಿಜರ್ ಇದನ್ನು ಕಟ್ಟಿದನು ಎನ್ನಲಾಗಿದೆ. ಮತ್ತೆ ಕೆಲವರು ಇದು ಅಸ್ಸಾರಿಯದ ರಾಣಿಯಾಗಿದ್ದ ಸಮ್ಮು-ರಾಮತ್’ಳಿಂದ ರಚಿಸಲಾಯಿತು ಎಂದು ಅಭಿಪ್ರಾಯಪಡುತ್ತಾರೆ.

ಉದ್ಯಾನವನವು ವಾಸ್ತವದಲ್ಲಿ ಗಾಳಿಯಲ್ಲೇನು ತೂಗಿದ್ದಿಲ್ಲ. ಮರ-ಗಿಡಗಳನ್ನು ಜಿಗುರಾಟ್ಟಿನ ವಿವಿಧ ಹಂತಗಳಲ್ಲಿ ಕೃಷಿಮಾಡಲಾಗುತ್ತಿತ್ತು. ಅವು ಹಂತಗಳಲ್ಲಿ ಜೋತು ಬಿದ್ದು ತೂಗುತ್ತಿದ್ದ ಕಾರಣ ನೋಡುಗರಿಗೆ ತೂಗುವ ಉದ್ಯಾನದಂತೆ ಕಾಣುತ್ತಿತ್ತು. ಯುಪ್ರಿಟೆಸ್ಟಿ ನದಿಯಿಂದ ಇವುಗಳಿಗೆ ನೀರನ್ನು ಹಾಯಿಸಲಾಗುತ್ತಿತ್ತು.

ಮೆಸಪಟೋಮಿಯವು ಎರಡು ನದಿಗಳ ನಡುವಿನ ಕಣಿವೆ ಪ್ರದೇಶ. ಬೈಬಲಿನ ಹಳೆಯ ಒಡಂಬಡಿಕೆಯು ವಿವರಿಸುವ ಪ್ರದೇಶಗಳು ಇಲ್ಲಿವೆ. ವಿಸ್ಮಯ ಮತ್ತು ಹಚ್ಚರಿಗಳ ನಾಡಾದ ಇದನ್ನು ಗ್ರೀಕರು ಮೆಸಪಟೋಮಿಯಾ ಅಥವಾ ‘ನದಿಗಳ ನಡುವಿನ ನಾಡು’ ಎಂದು ಕರೆಯುತ್ತಾರೆ. ಇಲ್ಲಿ ಹರಿಯುವ ಎರಡು ನದಿಗಳಾದ ಯುಪ್ರೆಟಿಸ್ ಮತ್ತು ಟೈಗ್ರಿಸ್ ನದಿಗಳು ಪಶ್ಚಿಮ ಏಷ್ಯಾದ ಬರಡು ಭೂಮಿಯನ್ನು ಫಲವತ್ತಾಗಿಸಿವೆ. ಇದರಿಂದ ಇಲ್ಲಿನ ಜನರು ಸಮೃದ್ಧಿಯಾಗಿ ಬೆಳೆಬೆಳೆದು ಸುಕಾಗಿದ್ದರು ಎಂದು ತಿಳಿದು ಬರುತ್ತದೆ.

ಮೆಸಪಟೊಮಿಯಾದ ಚರಿತ್ರೆಯು ಒಂದು ಕೊನೆಯಿಲ್ಲದ ಹಗೆತನ ಹಾಗೂ ಸಂಘರ್ಷಗಳ ಕಥೆ. ಉತ್ತರದ ಗುಡ್ಡವಾಸಿಗಾಳದ ಸುಮೇರಿಯನ್ನರು ಇಲ್ಲಿಗೆ ಬಂದ ಮೊದಲಿಗರು. ತಮ್ಮ ದೆವರುಗಳನ್ನು ಬೆಟ್ಟದ ತಪ್ಪಲಿನ ಮೇಲೆ ಆರಾಧಿಸುತ್ತಿದ್ದ ಇವರು, ಸಮತಟ್ಟಾದ ಪ್ರದೇಶಕ್ಕೆ ಬಂದು ನೆಲಸಿದ ಮೇಲೆ ಕೃತಕವಾದ ಬೆಟ್ಟಗಳನ್ನು ಕಟ್ಟಿ ಅದರ ಮೇಲೆ ಆರಾಧನಾ ಸ್ಥಳಗಳನ್ನು ಕಟ್ಟಿಕೊಂಡರು. ಅವುಗಳನ್ನು ‘ಜಿಗ್ಗುರಟ್’ ಎಂದು ಕರೆಯುತ್ತಾರೆ. ಮೆ್ಟಿಲುಗಳನ್ನು ಕಟ್ಟಲು ಬರದ ಅವರು ಸುತ್ತಲೂ ಇಳಿಜಾರುಗಳನ್ನು ನಿರ್ಮಿಸಿಕೊಂಡಿದ್ದರು. ಯಹೂದಿಗಳು ಈ ಗೋಪುರಗಳನ್ನು ಬೆಬೆಲ್’ನ ಗೋಪುರಗಳೆಂದು ಕರೆದರು.