ಪ್ರಥಮ್ ಗೆದ್ದಿರುವ ಹಣವನ್ನು ವಿದ್ಯುತ್ ಇಲ್ಲದ ಹಳ್ಳಿಗಳಿಗೆ ಬಡವರಿಗೆ ಮತ್ತು ವೀರ ಯೋಧರ ಕುಟುಂಬಗಳಿಗೆ ದಾನ

0
1133

ಮಾನವಿಯತೆ ಮೆರೆದ ಪ್ರಥಮ್ ಗೆದ್ದ 50.00.000 ರೂಪಾಯಿ ಹುತಾತ್ಮ ಯೋಧರ ಕುಟುಂಬಕ್ಕೆ ಮತ್ತು ಅತ್ಮ ಹತ್ಯೆ ಮಾಡಿಕೊಂಡ ಬಡ ರೈತ ಕುಟುಂಬಗಳಿಗೆ ಕರ್ನಾಟಕದ ಹ್ಯಾಂಡಿ ಕ್ಯಾಪ್ಟ ಇರುವವರಿಗೆ…..

ಕಳೆದ ಮೂರು ತಿಂಗಳಿಂದ ಕಲರ್ಸ್ ವಾಹಿನಿಯಲ್ಲಿ ನಡೆಯುತ್ತಿದ್ದ ಬಿಗ್ಬಾಸ್ ಸೀಸನ್ 4ಗೆ ತೆರೆಬಿದ್ದಿದ್ದು, ಪ್ರಥಮ್ ಗೆದ್ದಿದ್ದು, ಕಿರಿಕ್ ಕೀರ್ತಿ ರನ್ನರ್ ಅಪ್ ಆಗಿದ್ದಾರೆ.

ಸಿನಿಮಾ, ಮನೆ, ಮಕ್ಕಳಿಗೋಸ್ಕರ ಅಂತ ಆಟವಾಡಬಂದ ಸ್ಪರ್ಧಿಗಳ ಮಧ್ಯೆ ತನ್ನ ಗೆಲುವಿನ ಸಂಪೂರ್ಣ ಹಣವನ್ನ ಬಡವರಿಗಾಗಿ, ರೈತರಿಗಾಗಿ ಹಾಗು ದೇಶ ಕಾಯೋ ಸೈನಿಕರಿಗಾಗಿ ಅರ್ಪಿಸಿದ ಲಾರ್ಡ್ ಪ್ರಥಮ್ ಸಾರ್

ಒಟ್ಟಾರೆ 114 ದಿನಗಳ ಕಾಲ ನಡೆದ ಈ ರಿಯಾಲಿಟಿ ಶೋನಲ್ಲಿ 18 ಮಂದಿ ಭಾಗವಹಿಸಿದ್ದರು. ಆದರೆ ಅಂತಿಮವಾಗಿ ಸ್ಪರ್ಶ ಖ್ಯಾತಿಯ ರೇಖಾ, ಪ್ರಥಮ್‌ ಮತ್ತು ಕಿರಿಕ್‌ ಕೀರ್ತಿ ಉಳಿದುಕೊಂಡಿದ್ದರು. ಇವರಲ್ಲಿ ರೇಖಾ ಮೊದಲ ಸುತ್ತಿನಲ್ಲೇ ಹೊರಬಿದ್ದರೆ, ಕೀರ್ತಿ ಮತ್ತು ಪ್ರಥಮ್‌ ನಡುವೆ ಬಿರುಸಿನ ಪೈಪೋಟಿ ಏರ್ಪಟ್ಟಿತ್ತು.

ಭಾನುವಾರ ರಾತ್ರಿ ನಡೆದ ಗ್ರಾಂಡ್‌ ಫಿನಾಲೆಯಲ್ಲಿ ನಟ ಸುದೀಪ್‌ ಅವರು, ವಿಜೇತರ ಹೆಸರು ಘೋಷಿಸಿದರು. ಪ್ರಥಮ್‌ಗೆ 50 ಲಕ್ಷ ರೂ. ನಗದು ಬಹುಮಾನ ಮತ್ತು ಟ್ರೋಫಿ ಸಿಕ್ಕಿದೆ. ಆದರೆ ಈ ಹಣವನ್ನು ಪ್ರಥಮ್‌ ಅವರು ಹುತಾತ್ಮ ಯೋಧರ ಮತ್ತು ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬ ಹಾಗೂ ಅಂಗವಿಕಲ ಹೆಣ್ಣು ಮಕ್ಕಳ ವಿವಾಹ ಖರ್ಚಿಗೆ ಹಂಚುವುದಾಗಿ ಪ್ರಕಟಿಸಿದರು.

ಪ್ರಥಮ್ ಅವರ ಮಾತುಗಳು ಸಹ ಸ್ಪರ್ಧಿಗಳನೇಕರಿಗೆ ತೀರಾ ಕಿರಿಕಿರಿ ಎನಿಸಿದರೂ ವೀಕ್ಷಕರಿಗೆ ಅವರು ನೇರ ನಡೆನುಡಿಯವರೆನಿಸಿದ್ದಾರೆ. ಇನ್ನು, ರೇಖಾ ಅವರನ್ನು ಸ್ವೀಟ್ ರೇಖಾ ಎಂದೇ ಅಭಿಮಾನಿಗಳು ಸಂಬೋಧಿಸುತ್ತಾರೆ. ಬಹಳ ಪಕ್ವವಾದ ಗೇಮ್ ಆಡಿರುವ ಇವರು ಗೆದ್ದರೆ ಬಿಗ್ ಬಾಸ್ ಶೋಗೆ ಒಂದು ಗೌರವ ಎಂಬ ಅಭಿಪ್ರಾಯಗಳು ಸೋಷಿಯಲ್ ಮೀಡಿಯಾದಲ್ಲಿ ವ್ಯಕ್ತವಾಗಿವೆ.

ಹಿಂದಿನ ಬಿಗ್’ಬಾಸ್ ವಿನ್ನರ್ಸ್:

ಸೀಸನ್ 1: ವಿಜಯ ರಾಘವೇಂದ್ರ

ಸೀಸನ್ 2: ಅಕುಲ್ ಬಾಲಾಜಿ

ಸೀಸನ್ 3: ಶೃತಿ

ಸೀಸನ್ 4: ಪ್ರಥಮ್