ಬಿಬಿಎಂಪಿ ಈಗಾಗ್ಲೇ 90% ಗುಂಡಿಗಳನ್ನ ಮುಚ್ಚಿದೆಯಂತೆ..! ಆದ್ರೆ ಎತ್ತ ನೋಡಿದರೂ ಗುಂಡಿಗಳು ಹಾಗೆ ಬಾಯ್ತೆರೆದಿವೆ…

0
416

ಕೇಳ್ರಪ್ಪೋ.. ಕೇಳಿ… ಉದ್ಯಾನ ನಗರಿಯಲ್ಲಿ ಶೇ.90ರಷ್ಟು ಭಾಗಗಳಲ್ಲಿ ಗುಂಡಿಗಳನ್ನು ಬಿಬಿಎಂಪಿ ಮುಚ್ಚಿದೆಯಂತೆ. ಕೆಲವೇ ಕೆಲವು ಭಾಗಗಳಲ್ಲಿ ಮಾತ್ರ ಬಾಕಿ ಇದೆ ಅಂತ ಬಿಬಿಎಂಪಿ ಹೇಳ್ತಿದೆ. ಆದ್ರೆ ಎತ್ತ ನೋಡಿದರೂ ಗುಂಡಿಗಳು ಹಾಗೆ ಬಾಯ್ತೆರೆದಿವೆ…

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಈ ಹಿಂದೆ ಗುರುತಿಸಿದ 3,176 ಹೊಂಡ, ಗುಂಡಿಗಳ ಪೈಕಿ ಶೇಕಡಾ 90 ರಷ್ಟು ಭರ್ತಿಯಾಗಿದೆ ಎಂದು ಹೇಳುತ್ತಿದೆ. ಬೆಂಗಳೂರು ನಗರದಾದ್ಯಂತ ಇರುವ ಗುಂಡಿಗಳನ್ನು ಮುಚ್ಚಲು ಹೈಕೋರ್ಟ್ ಬಿಬಿಎಂಪಿಗೆ ಇಂದಿನವರೆಗೆ ಗಡುವು ನೀಡಿತ್ತು. ಕಳೆದ ರಾತ್ರಿ ನಗರದಲ್ಲಿ ಧಾರಾಕಾರವಾಗಿ ಸುರಿದ ಮಳೆ ಕೆಲಸಕ್ಕೆ ಅಡ್ಡಿಯಾಗಿದೆ, ಮಳೆ ಬಾರದಿದ್ದರೆ ಎಲ್ಲಾ ಗುಂಡಿಗಳನ್ನು ಮುಚ್ಚುತ್ತೆದ್ದೆವು ಎಂದು ಬಿಬಿಎಂಪಿ ಅಧಿಕಾರಿಗಳು ಹೇಳಿದ್ದಾರೆ..

ನಗರದ ಎಂಟು ವಲಯಗಳಲ್ಲಿ 3,017 ಗುಂಡಿಗಳನ್ನು ಗುರುತಿಸಲಾಗಿದೆ ಎಂದು ಬಿಬಿಎಂಪಿ ಹೈಕೋರ್ಟ್ ಗೆ ತಿಳಿಸಿತ್ತು. ಅವುಗಳನ್ನು ಮುಚ್ಚುವ ಸಂದರ್ಭದಲ್ಲಿ 105 ಹೊಸ ಗುಂಡಿಗಳು ಪತ್ತೆಯಾಗಿವೆ. ನಿನ್ನೆ ಬಿಬಿಎಂಪಿ 3 ಸಾವಿರ ಗುಂಡಿಗಳನ್ನು ಮುಚ್ಚಿದೆ ಎಂದು ಹೇಳಿದೆ. ನಾವು ಹೈಕೋರ್ಟ್ ನ ಆದೇಶಕ್ಕೆ ತಲೆಬಾಗಿದ್ದು ನಮ್ಮ ಬದ್ಧತೆಯನ್ನು ಉಳಿಸಿಕೊಂಡಿದ್ದೇವೆ. ನಿನ್ನೆಯವರೆಗೆ ಮಳೆಯಿಲ್ಲದ್ದು ನಮಗೆ ನೆರವಾಯಿತು ಎಂದು ಮೇಯರ್ ಸಂಪತ್ ರಾಜ್ ತಿಳಿಸಿದ್ದಾರೆ..

ಕೋರಮಂಗಲದ ನಾಲ್ವರು ನಿವಾಸಿಗಳು 2015ರಲ್ಲಿ ಸಲ್ಲಿಸಿದ ಅರ್ಜಿ ಸಂಬಂಧ ಕಳೆದ ಬುಧವಾರ ಆದೇಶ ನೀಡಿದ್ದ ಹೈಕೋರ್ಟ್ ಮರುದಿನವೇ ಗುಂಡಿಗಳೆಲ್ಲವನ್ನೂ ಮುಚ್ಚಬೇಕು ಎಂದು ಹೇಳಿತ್ತು. ಅಲ್ಲದೆ ಬಿಬಿಎಂಪಿ ಮೇಲೆ ಛೀಮಾರಿ ಹಾಕಿದ್ದ ಹೈಕೋರ್ಟ್ ಸರಿಯಾಗಿ ಕೆಲಸ ಮಾಡಲು ಸಾಧ್ಯವಾಗದಿದ್ದರೆ ಕಚೇರಿಯನ್ನೇ ಮುಚ್ಚಿ ಎಂದು ಹೇಳಿದ್ದರು. ರಸ್ತೆಯ ಗುಂಡಿ ಮುಚ್ಚಿದ ಕಾಮಗಾರಿ ಮಾಡಿದ ಕಾಂಟ್ರಾಕ್ಟರ್ ಮತ್ತು ಎಂಜಿನಿಯರ್ ಗಳ ಹೆಸರು ಕೊಡಿ ಎಂದು ಕೂಡ ನ್ಯಾಯಾಲಯ ಹೇಳಿತ್ತು. ನಂತರ ನ್ಯಾಯಾಲಯ ಕಳೆದ ಗುರುವಾರ ಗುಂಡಿ ಮುಚ್ಚುವ ಅವಧಿಯನ್ನು ಇಂದಿಗೆ ಮುಂದೂಡಿತ್ತು.