ಬೆಂಗಳೂರಿನ ಎಲ್ಲ ಸ್ಥಳಗಳಲ್ಲಿ ಪಟಾಕಿ ಮಾರಾಟಕ್ಕೆ ನಿರ್ಬಂಧ; BBMP ಕೇವಲ ಈ ಸ್ಥಳಗಳಲ್ಲಿ ಮಾತ್ರ ಮಾರಟಕ್ಕೆ ಅನುಮತಿ ನೀಡಿದೆ..

0
472

ಬೆಳಕಿನ ಹಬ್ಬ ದೀಪಾವಳಿಗೆ ಪಟಾಕಿ ಇದ್ರೇನೆ ಹಬ್ಬಕೊಂದು ಕದರ್ ಇಲ್ಲ ಅಂದ್ರೆ ದೀಪಾವಳಿ ಹಬ್ಬ ಅಂತ ಅನಿಸೋದೇ ಇಲ್ಲ ಆದ ಕಾರಣ ಪಟಾಕಿ ಖರೀದಿಸಲು ನಾನ್ ಮುಂದೆ ತಾ ಮುಂದೆ ಅಂತ ಅಂಗಡಿಯ ಮುಂದೆ ಮುಗಿ ಬಿಳ್ಳುವ ಜನರು ಸಾವಿರಾರು ರೂ ಕೊಟ್ಟು ಪಟಾಕಿ ತರುತ್ತಾರೆ. ಪಟಾಕಿ ಹೊಡೆಯೋದು ಅಪಾಯ ಅಂತ ಎಲ್ಲರಿಗೂ ಗೊತ್ತಿದ್ರು ಸರ್ಕಾರ ಅದಕ್ಕೆ ಅನುಮತಿ ನಿಡುತ್ತೆ ಮತ್ತೆ ಜನ ಆದರು ಹೇಗೆ ಸುಮ್ಮನೆ ಇರೋದು ಹೇಳಿ? ಹಬ್ಬಕ್ಕೆ ಮಜಾ ಕೊಡುವ ಪಟಾಕಿಯನ್ನು ತಯಾರಿಸುವುದು ಮತ್ತು ಮಾರಾಟ ಮಾಡುವುದು ಎಷ್ಟೊಂದು ಅಪಾಯಕರವಾಗಿದೆ. ಬೆಂಗಳೂರಿನಲ್ಲಿ ಸುರಕ್ಷತೆಯ ದೃಷ್ಟಿಯಿಂದ ಕೆಲವೂ ನಿಯಮಿತ ಸ್ಥಳಗಳಲ್ಲಿ ಮಾತ್ರ ಪಟಾಕಿ ಮಾರಟಕ್ಕೆ BBMP ಮತ್ತು ಅಗ್ನಿಶಾಮಕ ದಳಗಳು ಸೂಚಿಸಿದ ಸ್ಥಳಗಳಲ್ಲಿ ಪಟಾಕಿ ಮಾರಟಕ್ಕೆ ತ್ಕಾಲಿಕವಾಗಿ ಅನುಮತಿಗಾಗಿ ಸಲ್ಲಿಸಲು ತಿಳಿಸಿದೆ.

ಬೆಂಗಳೂರಿನಲ್ಲಿ ಎಲ್ಲಲ್ಲಿ ಸಿಗುತ್ತೆ ಪಟಾಕಿ?

  • ಕಾವಲ್ ಬೈರಸಂದ್ರ ಪಾನಿಪುರಿ ಗ್ರೌಂಡ್.
  • ಪಾಟರಿಟೌನ್ ಆಟದ ಮೈದಾನ.
  • ಸಗಾಯಪುರಂ ಪಾನಿಪುರಿ ಗ್ರೌಂಡ್.
  • ದೊಮ್ಮಲೂರು ಐಎಸ್ ಆರ್‌ಓ ಕ್ವಾಟರ್ಸ್.
  • ಮಾರತ್-ಹಳ್ಳಿ ಪೊಲೀಸ್ ಠಾಣೆ ಹಿಂಭಾಗ.
  • ಬೆಳ್ಳಂದೂರು ಪೊಲೀಸ್ ಠಾಣೆ ಹತ್ತಿರ.
  • ಬಿಟಿಎಂ ಲೇಔಟ್, ಜಕ್ಕಸಂದ್ರ ಟೀಚರ್ಸ್ ಕಾಲೊನಿ ಆಟದ ಮೈದಾನ, ನಂದಿನಿ ಆಟದ ಮೈದಾನ.
  • ಬಿಟಿಎಂ ಲೇಔಟ್ ಎಸ್‌ಎನ್‌ಎಸ್‌ರಾಜ್ ಲೇಕ್ ವ್ಯೂ ಅಪಾರ್ಟ್ ಮೆಂಟ್ ಎದುರಿನ ಆಟದ ಮೈದಾನ.
   • ಬೆಳ್ಳಂದೂರು, ಅಂಬಲೀಪುರ ಸಮುದಾಯ ಭವನದ ಜಾಗ.
   • ಯಲಹಂಕ, ಉನ್ನಿಕೃಷ್ಣನ್ ರಸ್ತೆಗೆ ಹೊಂದಿಕೊಂಡಿರುವ ಜಾಗ ಹಾಗೂ ಯಲಹಂಕ ಉಪನಗರ ಕರ್ನಾಟಕ ಗೃಹ ಮಂಡಳಿ ವಾಝಿಜ್ಯ ಸಂಕೀರ್ಣ ಮುಂಭಾಗ ಹೀಗೆ 21 ಜಾಗಗಳನ್ನು ಗುರುತಿಸಲಾಗಿದೆ.
   • ಕೋರಮಂಗಲ, ಕೆಎಚ್‌ಬಿ ಕಾಲೊನಿ ಆಟದ ಮೈದಾನ.
   • ಕೋಣನಕುಂಟೆ ರಿಸರ್ವ್ ಬ್ಯಾಂಕ್ ಸಿಬ್ಬಂದಿ ಗೃಹ ನಿರ್ಮಾಣ ಸಹಕಾರಿ ಸಂಘದ ಮೈದಾನ.
   • ಕೈಗೊಂಡ್ರಹಳ್ಳಿ ಅಗ್ನಿ ಶಾಮಕ ಠಾಣೆ ಜಾಗ.
   • ರಾಮಗೊಂಡನಹಳ್ಳಿ- ಬಿಬಿಎಂಪಿ ಕಚೇರಿ ಮುಂದೆ.
   • ರಾಮಗೊಂಡನಹಳ್ಳಿ ಬಿಬಿಎಂಪಿ ಕಚೇರಿ ಮುಂಭಾಗ.
   • ವಾರ್ಡ್ 85ರ ಇಂದಿರಾ ಕ್ಯಾಂಟೀನ್ ಬಳಿ, ಬಿಬಿಎಂಪಿ ಜಾಗ.
   • ಎಚ್‌ಎಸ್ ಆರ್ ಬಡಾವಣೆ ಬಿಬಿಎಂಪಿ ಖಾಲಿ ಜಾಗ ಹಾಗೂ 1ನೇ ಸೆಕ್ಟರ್ 27ನೇ ಮುಖ್ಯರಸ್ತೆ ಬಿಬಿಎಂಪಿ ಜಾಗ
   • BBMP ಸ್ಥಳಗಳನ್ನು ಬಿಟ್ಟು ಬೇರೆಕಡೆ ಮಾರಾಟ ಮಾಡಿದರೆ ಕ್ರಿಮಿನಲ್ ಕೇಸ್;

ಮಾರಾಟಗಾರರು ಹೆಚ್ಚಿನ ಲಾಭಕ್ಕಾಗಿ ಬಿಬಿಎಂಪಿ ನಿಗದಿಪಡಿಸಿರುವ ಮೈದಾನ ಮತ್ತು ಸ್ಥಳಗಳನ್ನು ಹೊರತುಪಡಿಸಿ ಬೇರೆಡೆ ಅಂದರೆ ಸ್ವಂತ ಅಂಗಡಿ, ಮನೆ, ವಾಹನ ಹೀಗೆ ಇತರೆ ಸ್ಥಳಗಳಲ್ಲಿ ಪಟಾಕಿ ಮಾರಾಟ ಮಾಡಿದರೆ ತಕ್ಷಣ ಕ್ರಮ ಕೈಗೊಳ್ಳಲಾಗುತ್ತದೆ. ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ. ಹಾಗೆಯೇ ಪರವಾನಗಿ ಪಡೆಯಲು ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ ಕಡ್ಡಾಯವಾಗಿದ್ದು, ಪ್ರತಿಯೊಬ್ಬ ಅರ್ಜಿದಾರ ಕಡ್ಡಾಯವಾಗಿ ಜಿಎಸ್‌ಟಿ ಸಂಖ್ಯೆ ಹೊಂದಿರಬೇಕು. ಅದನ್ನು ತಾತ್ಕಾಲಿಕ ಪಟಾಕಿ ಅಂಗಡಿ ತೆರಯುವ ಉದ್ದೇಶಕ್ಕಾಗಿ ಪಡೆಯಬೇಕು. ಮತ್ತು ಪರವಾನಗಿ ಪಡೆಯಲು ಅರ್ಜಿಯಲ್ಲಿ ಆಧಾರ್ ಕಾರ್ಡ್ ಅಥವಾ ಮತದಾರರ ಗುರುತಿನ ಚೀಟಿ ಕಡ್ಡಾಯವಾಗಿರುತ್ತದೆ.

ಪಟಾಕಿ ಮಾರಟಕ್ಕೆ ಸುಪ್ರೀಂಕೋರ್ಟ್ ನೀಡಿದ ಆದೇಶ.

ಸುಪ್ರಿಂಕೋರ್ಟ್ ಆದೇಶದ ಪ್ರಕಾರ ದೀಪಾವಳಿಯಂದು ಪಟಾಕಿ ಸಿಡಿಸಲು ನವೆಂಬರ್ 5 ರಿಂದ 8 ರವರೆಗೆ ರಾತ್ರಿ 8ರಿಂದ 10ರವರೆಗೆ ಮಾತ್ರ ಪಟಾಕಿ ಸಿಡಿಸಬಹುದಾಗಿದೆ. ಎಂದು ರಾಜ್ಯ ಸರ್ಕಾರವು ಮಾರ್ಗಸೂಚಿಯನ್ನು ಪ್ರಕಟಿಸಿ ಸುಪ್ರೀಂಕೋರ್ಟ್ ಆದೇಶದನುಸಾರವೇ ಪಟಾಕಿ ಸಿಡಿಸಲು ಸೂಚಿಸಿದೆ.