ಇಂದಿರಾ ಕ್ಯಾಂಟೀನ್-ನಲ್ಲಿ ಅವ್ಯವಹಾರ ನಡೆಯುತ್ತಿದೆ ಎಂದು ಕೆಲ ನಾಗರೀಕರು ದೂರು ಮಾಡಿದ ಕಾರಣ ಈ ವಿನೂತನ ಕಾರ್ಯಕ್ಕೆ ಮುಂದಾಗಿದೆ BBMP!!!

0
550

ಇಂದಿರಾ ಕ್ಯಾಂಟೀನ್‌ ಆಹಾರದಲ್ಲಿ ಸಮಸ್ಯೆ; ತಡೆಗೆ ಬಿಬಿಎಂಪಿ ಹೊಸ ಪ್ಲಾನ್

ಭಾರೀ ಪ್ರಚಾರ ಮತ್ತು ಭರವಸೆಗಳ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ರಾಜ್ಯ ಸರ್ಕಾರ ಜಾರಿಗೆ ತಂದಿರೋ ಇಂದಿರಾ ಕ್ಯಾಂಟೀನ್ ಶುರುವಾಗಿ ತಿಂಗಳುಗಳೇ ಕಳೆದ್ರೂ ಸಮಸ್ಯೆಗಳು ಮಾತ್ರ ಕಡಿಮೆಯಾಗಿಲ್ಲ.

ಸಾರ್ವಜನಿಕರಿಂದ ಹಲವು ದೂರುಗಳು ಬರುತ್ಲೇ ಇದೆ. ಕ್ಯಾಂಟೀನ್ ನಲ್ಲಿ ಆಹಾರದ ಕೊರತೆ ಮತ್ತು ಅಸಮರ್ಪಕ ಪೂರೈಕೆ ಇನ್ನೂ ಮುಂದುವರಿದಿದೆ. ದಿನನಿತ್ಯ ಕಡಿಮೆ ಬೆಲೆಯ ಆಹಾರಕ್ಕೆ ಸರದಿಯಲ್ಲಿ ನಿಲ್ಲಬೇಕಾದ ಪರಿಸ್ಥಿತಿಯಿದ್ದು, ಅಷ್ಟು ಹೊತ್ತು ನಿಂತರೂ ಕೂಡ ಹೊಟ್ಟೆ ತುಂಬುವಷ್ಟು ಊಟ-ತಿಂಡಿ ಸಿಗುವುದಿಲ್ಲ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.

10 ರೂಪಾಯಿಗೆ ಊಟ ಸಿಗೋದ್ರಿಂದ ಬಡವರಿಗೆ ಖಂಡಿತಾವಾಗಿಯೂ ಅನುಕೂಲವಾಗುತ್ತೆ. ಆದ್ರೆ ಊಟ ಅಷ್ಟು ರುಚಿಯಾಗಿಲ್ಲ ಅಂತಿದ್ದಾರೆ ಜನ. ಇಂದಿರಾ ಕ್ಯಾಂಟೀನ್ ನಲ್ಲಿ ಮಧ್ಯಾಹ್ನ ಮತ್ತು ರಾತ್ರಿಯ ಊಟಕ್ಕೆ 300 ಗ್ರಾಂ ಅನ್ನ, 150 ಗ್ರಾಂ ಸಾಂಬಾರು ಮತ್ತು 100 ಗ್ರಾಂ ಮೊಸರನ್ನ ಕೊಡ್ಬೇಕು. ಆದ್ರೆ ಕೆಲವು ಸಲ ಕಡಿಮೆ ಕೊಡ್ತಾರೆ ಅನ್ನೋ ಆರೋಪವೂ ಕೇಳಿ ಬಂದಿದೆ.

ಸಮಸ್ಯೆ ಪರಿಹಾರಕ್ಕೆ ಬಿಬಿಎಂಪಿ ಹೊಸ ಪ್ಲಾನ್

ಈ ಎಲ್ಲಾ ಆರೋಪಗಳನ್ನು ಮನದಟ್ಟು ಮಾಡಿಕೊಂಡಿರೋ ಬೆಂಗಳೂರು ಮಹಾನಗರ ಪಾಲಿಕೆ, ಈ ಎಲ್ಲಾ ಸಮಸ್ಯೆಗಳಿಗೂ ಬ್ರೇಕ್ ಹಾಕೋಕೆ ಹೊರಟಿದೆ. ನಿಮ್ಗೆ ಗೊತ್ತಿರೋ ಹಾಗೆ ಇದು ಸ್ಮಾರ್ಟ್ ಯುಗ.. ಹಾಗಾಗಿ ಬಿಬಿಎಂಪಿ ಕೂಡ ಸ್ಮಾರ್ಟ್ ಫೋನ್ ಬಳಸಿ ಇಂದಿರಾ ಕ್ಯಾಂಟೀನ್ ಕುಂದು ಕೊರತೆಗಳನ್ನ ದೂರ ಮಾಡಲು ಹೊರಟಿದೆ.

ಮುಂದಿನ ತಿಂಗಳು ಬರಲಿದೆ ಸ್ಮಾರ್ಟ್ ಫೋನ್ ನಲ್ಲಿ ಸ್ಮಾರ್ಟ್ ಅಪ್ಲಿಕೇಶನ್

ಬಿಬಿಎಂಪಿ ಮುಂದಿನ ತಿಂಗಳು ಈ ನೂತನ ಅಪ್ಲಿಕೇಷನ್ ಅನ್ನು ಲಾಂಚ್ ಮಾಡಲಿದೆ. ಪ್ರತಿಯೊಂದು ಇಂದಿರಾ ಕ್ಯಾಂಟೀನ್ ನಲ್ಲೂ ಸರ್ವ್ ಮಾಡೋ ಪ್ರತಿಯೊಂದು ಪ್ಲೇಟ್ ನ ಫೋಟೋ ತೆಗೆದು ಈ ಅಪ್ಲಿಕ್ಷೇನ್ ನಲ್ಲಿ ಆಹಾರ ವಿತರಿಸೋ ಸಿಬ್ಬಂದಿ ಅಪ್ಲೋಡ್ ಮಾಡ್ಬೇಕು. ಅದೂ ಕೂಡ ಪ್ಲೇಟ್ ಗೆ ಆಹಾರ ಬಡಿಸಿದ ನಂತರ ವೇಯ್ಟ್ ಚೆಕ್ಕಿಂಗ್ ಮಷಿನ್ ನಲ್ಲಿ ಅದರ ತೂಕ ಮಾಡಿ ಫೋಟೋ ತೆಗೀಬೇಕು. ಪ್ರತಿಯೊಂದು ಪ್ಲೇಟ್ ಗೂ ಆಯಾ ಕ್ಯಾಂಟೀನ್ ನ ಕೋಡ್ ನಂಬರ್ ಜತೆಗೆ ಊಟದ ಆರ್ಡರ್ ನಂಬರ್ ಹಾಕಿ ಅಪ್ಲೋಡ್ ಮಾಡಲಾಗುತ್ತೆ.

ಹೀಗೆ ಅಪ್ಲೋಡ್ ಮಾಡಿದ ಫೋಟೋಗಳನ್ನು ಕಮೀಷನರ್, ಮೇಯರ್, ಜಂಟಿ ಆಯುಕ್ತರು, ಬಿಬಿಎಂಪಿ ಅಧಿಕಾರಿಗಳು ತಮ್ಮ ಸ್ಮಾರ್ಟ್ ಫೋನ್ ಮೂಲಕ ನೋಡಿ ಪರಿಶೀಲಿಸಬಹುದು. ಸೋ.. ಈ ಮೂಲಕ ಯಾವ ಕ್ಯಾಂಟೀನ್ ನಲ್ಲಿ ಏನು ಲೋಪ ಆಗ್ತಿದೆ ಅನ್ನೋ ಮಾಹಿತಿ ಪಡೆದು ಆಯಾ ವಾರ್ಡ್ ಕ್ಯಾಂಟೀನ್ ಗುತ್ತಿಗೆ ಪಡೆದಿರೋರಿಗೆ ಕ್ಲಾಸ್ ತಗೋಳೋಕೆ ಬಿಬಿಎಂಪಿ ಸಿದ್ದವಾಗಿದೆ. ಇದು ಸರ್ಕಾರ ಮತ್ತು ಸಾರ್ವಜನಿಕರಿಗೆ ಶಂಚಿಸುತ್ತಿರೋ ಗುತ್ತಿಗೆದಾರರಿಗೆ  ಕಂಟಕವಾಗೋದಂತೂ ಸುಳ್ಳಲ್ಲ.

ಇದಿಷ್ಟೇ ಅಲ್ಲ ಇದರ ಮಾಹಿತಿಯನ್ನು ಇಂದಿರಾ ಕ್ಯಾಂಟೀನ್ ವೆಬ್ ಸೈಟ್ ನಲ್ಲಿ ಕೂಡ ಅದಿಕಾರಿಗಳು ಅಪ್ಲೋಡ್ ಮಾಡ್ತಾರೆ. ಇದರಿಂದ ಪ್ರತಿಯೊಬ್ಬ ಫಲಾನುಭವಿಯೂ ಆಹಾರ ಗುಣಮಟ್ಟ ಮತ್ತು ಪ್ರಮಾಣದ ಮಾಹಿತಿಯನ್ನು ಸುಲಭವಾಗಿ ತಿಳಿಯಬಹುದು.

24 ಇಂದಿರಾ ಮೊಬೈಲ್ ಕ್ಯಾಂಟೀನ್ ಆರಂಭ

ಈ ಹೊಸ ಆ್ಯಪ್ ಜತೆಗೆ ಮುಂದಿನ ತಿಂಗಳು ನಗರಾದ್ಯಂತ 24 ಇಂದಿರಾ ಮೊಬೈಲ್ ಕ್ಯಾಂಟೀನ್ ಅನ್ನು ಕೂಡ ಆರಂಭಿಸಲು ಬಿಬಿಎಂಪಿ ನಿರ್ಧರಿಸಿದೆ. ಬನಶಂಕರಿ, ಕೋರಮಂಗಲ, ಬೊಮ್ಮನಹಳ್ಳಿ, ಆರ್.ಆರ್.ನಗರ, ಬಿಟಿಎಂ ಲೇಔಟ್, ಛಲವಾದಿಪಾಳ್ಯ, ಯಲಹಂಕ ನ್ಯೂ ಟೌನ್ ಮತ್ತು ಜೆ.ಪಿ.ನಗರದಲ್ಲಿ ಮೊಬೈಲ್ ಕ್ಯಾಂಟೀನ್ ಆರಂಭಗೊಳ್ಳಲಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳಿದ್ದಾರೆ.