ಪ್ಲಾಸ್ಟಿಕ್ ವಸ್ತುಗಳನ್ನು ಮಾರಾಟ ಹಾಗೂ ಬಳಕೆಗೆ ದಂಡ ವಿಧಿಸುವುದಾಗಿ ಎಚ್ಚರಿಸಿದ ಮೇಯರ್ ಗಂಗಾಬಿಕೆಗೆ ಬಿತ್ತು ದಂಡ!!

0
205

ಬೆಂಗಳೂರಿನಲ್ಲಿ ಪ್ಲಾಸ್ಟಿಕ್‌ ಬಳಕೆ ನಿಷೇಧ ಕಾನೂನು ಅನುಷ್ಠಾನಕ್ಕೆ ನಗರಸಭೆ ಕಟ್ಟುನಿಟ್ಟಿನ ಕ್ರಮ ವಹಿಸಿದೆ. ನಿಯಮ ಉಲ್ಲಂಘಿಸಿದವರ ವಿರುದ್ಧ ಸಮರ ಸಾರಿದ ಬಿಬಿಎಂಪಿ ಪರಿಸರ ಸಂರಕ್ಷಣೆ ಕಾಯಿದೆಯಡಿ ದಂಡ ವಿಧಿಸುವ ಎಚ್ಚರಿಕೆ ನೀಡಿದ್ದು, ಹಲವು ಹೋಟೆಲ್, ಮಾಲ್, ಸೇರಿದಂತ ಹಲವು ಅಂಗಡಿಗಳ ಮೇಲೆ ದಾಳಿ ಮಾಡಿ ಲಕ್ಷಾಂತರ ದಂಡ ವಿಧಿಸಿದೆ. ಅದರಂತೆ ಪ್ಲಾಸ್ಟಿಕ್ ಕೈಚೀಲಗಳಲ್ಲಿ ಸಾಮಾನುನೀಡುವ ಮಳಿಗೆಗಳಿಗಷ್ಟೇ ಅಲ್ಲದೆ ಪ್ಲಾಸ್ಟಿಕ್ ಚೀಲಗಳಲ್ಲಿ ವಸ್ತುಗಳನ್ನು ಕೊಂಡೊಯ್ಯುವ ಗ್ರಾಹಕನಿಗೂ ದಂಡ ಬೀಳಲಿದೆ ಎಂದು ಬಿಬಿಎಂಪಿ ಮೇಯರ್ ಗಂಗಾಬಿಕೆ ಕೆಲ ದಿನಗಳ ಹಿಂದೆ ಎಚ್ಚರಿಸಿದ್ದರು. ಆದರೆ ಅವರೇ ಈಗ ಬೇಲಿ ಎದ್ದು ಹೊಲ ಮೇದ ಹಾಗೆ ದಂಡಕ್ಕೆ ಗುರಿಯಾಗಿದ್ದಾರೆ.


Also read: ಬಿಗ್ ಬ್ರೇಕಿಂಗ್ ಜಮ್ಮು-ಕಾಶ್ಮೀರದಲ್ಲಿ ಯುದ್ದದ ವಾತಾವರಣ; 370 ವಿಶೇಷ ಸ್ಥಾನಮಾನಕ್ಕೆ ಅಂತಿಮ?ಕಾಶ್ಮೀರದಲ್ಲಿ ನಿಷೇಧಾಜ್ಞೆ ಜಾರಿ..

ಪ್ಲಾಸ್ಟಿಕ್ ಬಳಸಿದ ಮೇಯರ್ ಗೆ ದಂಡ?

ಹೌದು ಬೆಂಗಳೂರು ಸೇರಿದಂತೆ ರಾಜ್ಯದ ಹಲವು ನಗರಗಳಲ್ಲಿ ಪ್ಲಾಸ್ಟಿಕ್ ನಿಷೇಧಿಸಲಾಗಿದೆ. ವಾಣಿಜ್ಯ ಅಂಗಡಿಗಳಲ್ಲಿ ಪ್ಲಾಸ್ಟಿಕ್ ಪತ್ತೆಯಾದರೆ ಮೊದಲ ಬಾರಿಗೆ 25 ಸಾವಿರ ರೂ ದಂಡ, ಎರಡನೇ ಬಾರಿಗೆ 50 ಸಾವಿರ ಮೂರನೇ ಬಾರಿಗೆ ಲಕ್ಷರೂ ವಿಧಿಸಲಾಗುತ್ತದೆ. ಸಣ್ಣಪುಟ್ಟ ಅಂಗಡಿಗಳಿಗೆ ಮೊದಲ ಬಾರಿಗೆ 500 ರೂ ಹಾಗೂ ಎರಡನೇ ಬಾರಿಗೆ ಸಾವಿರ ರೂ ವಿಧಿಸಲಾಗುತ್ತದೆ. ಆದರೆ ಪ್ಲಾಸ್ಟಿಕ್ ನಿಷೇಧಕ್ಕೆ ಪಣತೊಟ್ಟಿದ್ದ ಮೇಯರ್ ಅವರೇ ಖುದ್ದು ಪ್ಲಾಸ್ಟಿಕ್ ಬಳಕೆ ಮಾಡಿ ಇದೀಗ ದಂಡ ಕಟ್ಟಿದ ಘಟನೆ ನಡೆದಿದೆ. ಇದು ನಡೆದಿದ್ದು ಕೂಡ ಮುಖ್ಯಮಂತ್ರಿಯಾಗಿ ಬಿ.ಎಸ್​ ಯಡಿಯೂರಪ್ಪ ಪ್ರಮಾಣವಚನ ಸ್ವೀಕರಿಸಿದ್ದರು. ಹೊಸ ಸಿಎಂರನ್ನು ಭೇಟಿ ಮಾಡಿದ ಮೇಯರ್ ಗಂಗಾಬಿಕೆ ಶುಭಾಶಯದೊಂದಿಗೆ ಡ್ರೈಫ್ರೂಟ್ಸ್ ಬುಟ್ಟಿಯೊಂದನ್ನು ನೀಡಿದ್ದರು.


Also read: ಮಳೆ ಕೈಕೊಟ್ಟರು ತಿಂಗಳವರೆಗೂ ನೀರಿನಂಶ ಹಿಡಿದಿಟ್ಟು ಬೆಳೆಯನ್ನು ಬದುಕಿಸುವ ಪುಡಿಯನ್ನು ಕಂಡು ಹಿಡಿದ ರಾಷ್ಟ್ರೀಯ ಪ್ರಶಸ್ತಿ ಪಡೆದಿರುವ ಸಂಶೋಧಕ..

ಈ ಬುಟ್ಟಿಯ ಮೇಲ್ಬಾಗವನ್ನು ಪ್ಲಾಸ್ಟಿಕ್ ಕವರ್​ನಿಂದ ಮುಚ್ಚಲಾಗಿತ್ತು. ಈ ಭೇಟಿಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದಲ್ಲದೇ, ಮಹಾನಗರ ಪಾಲಿಕೆಯ ಮೇಯರ್ ಪ್ಲಾಸ್ಟಿಕ್ ಬಳಸಿದ್ದಾರೆಂಬ ಆರೋಪಗಳು ಕೇಳಿ ಬಂದಿದ್ದವು. ಇದರಿಂದ ಎಚ್ಚೆತ್ತ ಮೇಯರ್ ನಿಯಮ ಉಲ್ಲಂಘಿಸಿದಕ್ಕಾಗಿ 500 ರೂ ದಂಡ ಕಟ್ಟಿದ್ದಾರೆ. ನಿಮಯ ಮೀರಿರುವುದಕ್ಕೆ ಕ್ಷಮೆಯಾಚಿಸಿದ ಮೇಯರ್ ಗಂಗಾಬಿಕೆ ಬಿಬಿಎಂಪಿ ಆರೋಗ್ಯ ಇಲಾಖೆಗೆ ತೆರಳಿ ದಂಡ ಕಟ್ಟಿದರು. ನಿಮಯ ಮೀರಿರುವುದಕ್ಕೆ ಕ್ಷಮೆಯಾಚಿಸಿದ ಮೇಯರ್ ಗಂಗಾಬಿಕೆ ಬಿಬಿಎಂಪಿ ಆರೋಗ್ಯ ಇಲಾಖೆಗೆ ತೆರಳಿ ದಂಡ ಕಟ್ಟಿದರು. ಆದರೆ ನಗರದ ಜವಾಬ್ದಾರಿಯುತ ಹುದ್ದೆಯಲ್ಲಿರುವವರಿಗೆ ತಾವು ಹೇಗಿರಬೇಕು ಎನ್ನುವುದು ಮರೆಯುತ್ತಿದ್ದಾರೆ ಎಂದು ಕೆಲವರು ಟಿಕೆ ಮಾಡಿದರೆ ಇನ್ನೂ ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


Also read: ರಾಜ್ಯ ಸರ್ಕಾರದಿಂದ ರೈತರ ಖಾತೆಗೆ 15 ದಿನದ ಒಳಗಾಗಿ ಹಣ ಜಮಾ; ವೇಗವಾಗಿ ರೈತರಿಗೆ ಹಣ ತಲುಪಿಸುವಂತೆ ಅಧಿಕಾರಿಗಳಿಗೆ ಬಿಎಸ್​ವೈ ಖಡಕ್ ಸೂಚನೆ..

ಕಳೆದ ತಿಂಗಳು ಸಗಟುಮಾರಾಟಗಾರರು ಮತ್ತು ಸಾಮಾನು ಸರಂಜಾಮುಗಳನ್ನು ಪ್ಲಾಸ್ಟಿಕ್ ಚೀಲಗಳಲ್ಲಿಕಟ್ಟಿಕೊಡುತ್ತಿದ್ದ ಹೋಟೆಲ್, ಮಾಲ್, ಅಂಗಡಿಗಳ ಮೇಲಷ್ಟೇ ದಾಳಿ ನಡೆಸಿ ದಂಡ ವಿಧಿಸಿ. ಮತ್ತಷ್ಟು ಸುಧಾರಣೆ ತರಲು ಪ್ಲಾಸ್ಟಿಕ್ ಕವರ್ ಹಿಡಿದುಕೊಂಡವರ ಮೇಲೂ ದಂಡ ವಿಧಿಸಲು ಮುಂದಾಗಿದೆ. ಬಿಬಿಎಂಪಿ ಅಧಿಕಾರಿಗಳ ಕಾಣ್ಣಿಗೆ ಬಿದ್ದರೆ ಸ್ಥಳದಲ್ಲೇ 500 ರೂ ದಂಡ ಕಟ್ಟಬೇಕಾಗುತ್ತದೆ. ಹಾಗಾಗಿ ಆದಷ್ಟು ಪ್ಲಾಸ್ಟಿಕ್ ಕವರ್‌ಗಳಿಂದ ದೂರವಿರಿ. ಎಂದು ಹೇಳಿದೆ.