ಇನ್ಮೇಲೆ ಪ್ರತಿ ಬಸ್ ನಿಲ್ದಾಣದಲ್ಲು ಸ್ವಚ್ಛವಾಗಿರುವಂಥಹ ಶೌಚಾಲಯವನ್ನು BBMP ನಿರ್ಮಿಸಲಿದೆ, ರೋಸಿ ಹೋದ ಬೆಂಗಳೂರು ನಾಗರಿಕರಿಗೆ ಇದೊಂದೇ ಒಳ್ಳೆ ಸುದ್ದಿ!!

0
421

ಬಿಬಿಎಂಪಿ ತನ್ನ ಉತ್ತಮ ಕಾರ್ಯದಿಂದ ಜನರ ಮನಸ್ಸಿನಲ್ಲಿ ಸ್ಥಾನ ಪಡೆದಿದೆ. ಇಂತಹ ಉದಾಹರಣೆಗೆ ಮತ್ತೊಂದು ಸೇರ್ಪಡೆ ಆಗುತ್ತಿದೆ.
ಜನರ ಸಮಸ್ಯೆ ಅರಿತು ಅದಕ್ಕೆ ಉಪಾಉಗಳನ್ನು ಹೆಣೆಯುತ್ತಿರುವ ಬೆಂಗಳೂರು ಮಹಾನಗರ ಪಾಲಿಕೆ ಜನರಿಗೆ ಹತ್ತಿರವಾಗಲು ಇನ್ನಷ್ಟು ಯೋಜನೆಗಳನ್ನು ಹೆಣೆದುಕೊಂಡಿದೆ.
ಬಿಎಂಟಿಸಿ ಬಸ್ ನಿಲ್ದಾಣ ಗಳನ್ನು ಉನ್ನತ ಮಟ್ಟಕ್ಕೆ ಏರಿಸುವ ಗುರಿಯನ್ನು ಹೊಂದಿರುವ ಬಿಬಿಎಂಪಿ, ನಗರದ 550 ಬಸ್ ನಿಲ್ದಾಣಗಳಲ್ಲಿ ಶೌಚಾಲಯ ನಿರ್ಮಿಸುವ ಯೋಜನೆಯನ್ನು ಹಾಕಿಕೊಂಡಿದೆ.


ಇನ್ಮುಂದೆ ಬಸ್​ಗಾಗಿ ಕಾಯುವಾಗ ನೀರಡಿಕೆ ಅಥವಾ ಮಲಭಾದೆ ಉಂಟಾದ್ರೆ ಸಾರ್ವಜನಿಕರು ಶೌಚಗೃಹಗಳನ್ನು ಹುಡುಕಿಕೊಂಡು ಅಲೆಯಬೇಕಿಲ್ಲ. ಬಸ್ ನಿಲ್ದಾಣಗಳ ಪಕ್ಕದಲ್ಲಿ ಬಿಬಿಎಂಪಿ ಸುಸಜ್ಜಿತ ಶೌಚಾಲಯ ನರ್ಮಿಸುವ ಯೋಜನೆಯನ್ನು ಹಾಕಿಕೊಂಡಿದೆ. ನಗರದ ಜನಸಂಖ್ಯೆಯ ಶೆಕಡಾ ಅರ್ಧದಷ್ಟು ಜನ ಬಸ್ ನಲ್ಲಿ ಓಡಾಡ್ತಾರೆ. ಈಗ ಕೇವಲ 587 ಶೌಚಾಲಯಗಳು ಮಾತ್ರ ಇವೆ. ಮುಂದಿನ ದಿನಗಳಲ್ಲಿ ಬಿಬಿಎಂಪಿ 550 ಬಸ್​ ಶೆಲ್ಟರ್​ ನಿರ್ಮಾಣ ಮಾಡುತ್ತಿದ್ದು ಈ ಎಲ್ಲಾ ಕಡೆಗಳಲ್ಲಿ ಶೌಚಗೃಹ ನಿರ್ಮಾಣಕ್ಕೆ ಟೆಂಡರ್​ ಆಹ್ವಾನಿಸಲಾಗಿದೆ.

ಬಿಬಿಎಂಪಿ 250 ದೊಡ್ಡ ಶೌಚಗೃಹ ಮತ್ತು 100 ಇ ಟಾಯ್ಲೆಟ್​ ನಿರ್ಮಿಸಲು ನಿರ್ಧರಿಸಿದೆ. ಇನ್ನು ಬಸ್ ತಂಗುದಾಣಾದ ಇನ್ನೊಂದಿ ಬದಿ ನೂರು ಲೀಟರ್ ಸಾಮರ್ಥ್ಯ ದ ಕುಡಿಯುವ ನೀರಿನ ಘಟಕ ತೆರೆಯಲು ಚಿಂತನೆ ನಡೆದಿದೆ. ಟೆಂಡರ್ ಕರೆಯುವ ವೇಳೆ ಈ ಎಲ್ಲ ವ್ಯವಸ್ಥೆ ಗಳನ್ನು ಅಚ್ಚುಕಟ್ಟಾಗಿ ಮಾಡುವರಿಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ಬಿಬಿಎಂಪಿ ತಿಳಿಸಿದೆ.


ಈ ತಂಗುದಾಣಗಳಲ್ಲಿ ಜಾಹೀರಾತು ಅಂಟಿಸಲು ಅವಕಾಶ ನೀಡಲಾಗಿದೆ. ಅದರಂತೆ ಬೊಕ್ಕಸ ತುಂಬಿಕೊಳ್ಳುವ ಪ್ಲಾನ್ ಬಿಬಿಎಂಪಿಯದ್ದಾಗಿದೆ. ಮುಂದಿನ ದಿನಗಳಲ್ಲಿ ಬಿಬಿಎಂಪಿ ಪ್ರಯಾಣಿಕರ ಹಿತದ ದೃಷ್ಟಿಯಿಂದ ಇನ್ನು ಹಲವು ಯೋಜನೆಗಳನ್ನು ಹಾಕಿಕೊಳ್ಳುವ ಇರಾದೆಯನ್ನು ಹೊಂದಿದೆ.