ಹೊಸ ವರ್ಷದಂದು ಹುಟ್ಟುವ ಮೊದಲ ಹೆಣ್ಣು ಮಗುವಿಗೆ ಬಿ.ಬಿ.ಎಂ.ಪಿ. ದೊಡ್ಡ ಉಡುಗೊರೆಯನ್ನು ಕೊಡುತ್ತಿದೆ, ಅದೇನು ಗೊತ್ತಾ?

0
658

ಹೊಸ ವರ್ಷದ ಆಚರಣೆಗಾಗಿ ಉದ್ಯಾನ ನಗರಿ ಬೆಂಗಳೂರಿನಲ್ಲಿ ಭರದಿಂದ ಸಿದ್ದತೆಗಳು ನಡೆದಿದೆ, ನಗರದ ಪ್ರಮುಖ ರಸ್ತೆಗಳಾದ ಮಹಾತ್ಮ ಗಾಂಧಿ ರಸ್ತೆ, ಬ್ರಿಗೇಡ್ ರಸ್ತೆ ಹಾಗು ನಗರದ ಎಲ್ಲ ಪಬ್, ಹೋಟೆಲ್ ಮತ್ತು ರೆಸ್ಟೋರೆಂಟ್ಗಳಲ್ಲಿ ನೂತನ ವರ್ಷಾರಂಭಕ್ಕೆ ಸುಂದರವಾದ ಹೂವುಗಳು, ಬಲೂನ್ಗಳಿಂದ ಸಿಂಗಾರಗೊಂಡಿವೆ. ಇದರ ಖುಷಿಯನ್ನು ಇನ್ನು ಹೆಚ್ಚಿಸಲು BBMP ಇನ್ನೊಂದು ಕೊಡುಗೆಯನ್ನು ನೀಡಿದೆ.

BBMP ಬೆಂಗಳೂರಿನ ನಾಗರಿಕರಿಗೆ ಒಂದು ಭರ್ಜರಿ ಕೊಡುಗೆಯನ್ನು ನೀಡಿದೆ. ಅದೇನೆಂದರೆ ಡಿಸೆಂಬರ್ 31 ಸರಿಯಾಗಿ ಮಧ್ಯರಾತ್ರಿ ನಾಗರಿಕ ಆಸ್ಪತ್ರೆಯಲ್ಲಿ ಹುಟ್ಟುವ ಮೊದಲ ಹೆಣ್ಣು ಮಗುವಿಗೆ ನಗದು ಸಹಿತ ಬಹುಮಾನವನ್ನು ನೀಡಲಿದೆಯಂತೆ. ಈ ವಿಷಯವನ್ನು ಖುದ್ದು BBMP ಮೇಯರ್ ಅವರೇ ಸುದ್ದಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಬೆಂಗಳೂರಿನ ಯಾವುದೇ ನಾಗರಿಕ ಆಸ್ಪತ್ರೆಯಲ್ಲಿ ಯಾವುದೇ ಸಿಜರಿಯನ್‌‌ ಇಲ್ಲದೇ ಜನಿಸುವ ಮಗುವಿಗೆ ಈ ಸೌಲಭ್ಯ ದೊರೆಯಲಿದೆ ಎಂದು ಅವರು ಹೇಳಿದ್ದಾರೆ. ಜನವರಿ 1ರಂದು ಹುಟ್ಟುವ ಮಗು ಪದವಿ ಮಟ್ಟದವರೆಗೆ ಅದರ ಶಿಕ್ಷಣದ ಖರ್ಚನ್ನು BBMP ಯೇ ನೋಡಿಕೊಳ್ಳಲಿದೆಯಂತೆ.

ಇದಲ್ಲದೆ BBMP ಮಗುವಿನ ಬ್ಯಾಂಕ್ ಖಾತೆಯಲ್ಲಿ 5 ಲಕ್ಷ ರೂಪಾಯಿಗಳ ಹಣವನ್ನು ಫಿಕ್ಸೆಡ್ ಡೆಪಾಸಿಟ್ ಮಾಡಲಿದೆಯಂತೆ, ಇದನ್ನು ಹುಡುಗಿ 18 ವರ್ಷ ತುಂಬಿದ ನಂತರ ನಗದಾಗಿ ಬಳಸಿಕೊಳ್ಳಬಹುದಂತೆ. ಇನ್ನು ಮಗುವಿನ ಮಾಹಿತಿ ಪಡೆಯಲು ಆರೋಗ್ಯ ಅಧಿಕಾರಿಗಳನ್ನು ನೇಮಕ ಮಾಡಿಯಂತೆ, ಇವರು ಅದೃಷ್ಟಶಾಲಿ ವಿಜೇತ ಮಗು ಯಾರೆಂದು BBMP ಗೆ ಮಾಹಿತಿ ಕೊಡಲಿದ್ದಾರೆ