ಬೆಂಗಳೂರಿನ ಮೂಲ ಸೌಕರ್ಯಗಳು ಮಾತ್ರ ಸುಧಾರಣೆ ಕಾಣುತ್ತಿಲ್ಲ, ಆದರೆ BBMP ಮಾತ್ರ ತೆರಿಗೆ ಏರಿಕೆ ಮಾಡುತ್ತಲೇ ಇದೆ, ಇದು ಸರೀನಾ??

0
201

ಬಿಬಿಎಂಪಿಯ ಕೆಮೆಂಸಿ ಕಾಯ್ದೆಯಲ್ಲಿ ಪ್ರತಿ ಮೂರು ವರ್ಷಕ್ಕೊಮ್ಮೆ ಆಸ್ತಿ ತೆರಿಗೆ ಹೆಚ್ಚಿಸಲು ಅವಕಾಶವಿದೆ. ಆದರೂ 2008ರಿಂದ ಆಸ್ತಿ ತೆರಿಗೆ ಹೆಚ್ಚಳದ ಪ್ರಸ್ತಾವನೆ ಮುಂದೂಡಿಕೊಂಡು ಬಂದಿದ್ದ ಬಿಬಿಎಂಪಿ 2016-17 ನೇ ಸಾಲಿನಲ್ಲಿ ಪರಿಷ್ಕರಿಸಿ ವಸತಿ ಸ್ವತ್ತುಗಳಿಗೆ ಶೇ.20ರಷ್ಟು ಮತ್ತು ವಸತಿಯೇತರ ಸ್ವತ್ತುಗಳಿಗೆ ಶೇ.25ರಷ್ಟು ಆಸ್ತಿ ತೆರಿಗೆ ಹೆಚ್ಚಳ ಮಾಡಿತ್ತು. ಇಂದಿಗ ಮತ್ತೆ ಮೂರು ವರ್ಷ ತುಂಬಿದರಿಂದ ಬೆಂಗಳೂರಿಗರ ಆಸ್ತಿಯ ಮೇಲೆ ಶೇ.25ರಷ್ಟು ವಸತಿ ಸ್ವತ್ತುಗಳಿಗೆ ಮತ್ತು ಶೇ.30ರಷ್ಟು ಆಸ್ತಿ ತೆರಿಗೆ ಪರಿಷ್ಕರಣೆ ಮಾಡಲು ಮುಂದಾಗಿದೆ.

Also read: ಇನ್ಮೇಲೆ ಪ್ರತಿ ಬಸ್ ನಿಲ್ದಾಣದಲ್ಲು ಸ್ವಚ್ಛವಾಗಿರುವಂಥಹ ಶೌಚಾಲಯವನ್ನು BBMP ನಿರ್ಮಿಸಲಿದೆ, ರೋಸಿ ಹೋದ ಬೆಂಗಳೂರು ನಾಗರಿಕರಿಗೆ ಇದೊಂದೇ ಒಳ್ಳೆ ಸುದ್ದಿ!!

ಹೌದು ಬೆಂಗಳೂರು ಮಹಾನಗರ ಪಾಲಿಕೆ 2019-2020ನೇ ಆರ್ಥಿಕ ವರ್ಷದಿಂದ ಅನ್ವಯವಾಗುವಂತೆ ಬೆಂಗಳೂರಿಗರ ಮೇಲೆ ಆಸ್ತಿ ತೆರಿಗೆ ಪರಿಷ್ಕರಣೆ ಮಾಡಲು ಸಿದ್ಧತೆ ಮಾಡಿಕೊಂಡಿದೆ. ಈ ಕುರಿತು ಪಾಲಿಕೆ ಅಧಿಕಾರಿಗಳು ಈಗಾಗಲೇ ಪ್ರಸ್ತಾವನೆ ಸಿದ್ಧಪಡಿಸಿದ್ದು, ಇದರ ಅನುಮೋದನೆಗಾಗಿ ಪಾಲಿಕೆಯ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಹಾಗೂ ಕೌನ್ಸಿಲ್ ಸಭೆಯ ಮುಂದೆ ಬಿಬಿಎಂಪಿ ಆಯುಕ್ ಎನ್ ಮಂಜುನಾಥ್ ಪ್ರಸಾದ್ ಅವರು ವರದಿ ಮಂಡಿಸಿದ್ದಾರೆ.

ಬೆಂಗಳೂರು ಮಹಾನಗರ ಪಾಲಿಕೆ ಕೆಮೆಂಸಿ ಕಾಯ್ದೆಯಲ್ಲಿ ಪ್ರತಿ ಮೂರು ವರ್ಷಕ್ಕೊಮ್ಮೆ ಆಸ್ತಿ ತೆರಿಗೆ ಹೆಚ್ಚಿಸಲು ಯೋಜನೆಯಲ್ಲಿ ಮೂರು ವರ್ಷ ಕಳೆದಿದೆ. ಈ ಹಿಂದೆ 2008ರಿಂದ ಆಸ್ತಿ ತೆರಿಗೆ ಹೆಚ್ಚಳದ ಪ್ರಸ್ತಾವನೆ ಮುಂದೂಡಿಕೊಂಡು ಬಂದಿದ್ದ ಬಿಬಿಎಂಪಿ 2016-17 ನೇ ಸಾಲಿನಲ್ಲಿ ಪರಿಷ್ಕರಿಸಿ ವಸತಿ ಸ್ವತ್ತುಗಳಿಗೆ ಶೇ.20ರಷ್ಟು ಮತ್ತು ವಸತಿಯೇತರ ಸ್ವತ್ತುಗಳಿಗೆ ಶೇ.25ರಷ್ಟು ಆಸ್ತಿ ತೆರಿಗೆ ಹೆಚ್ಚಳ ಮಾಡಿದು ಬೆಂಗಳೂರಿಗರಿಗೆ ಹೊರೆಯಾಗುವ ಸಂಭವವಿದೆ.

ಕಳೆದ ಬಾರಿ ತೆರಿಗೆಗಿಂತ ಶೇ.5ರಷ್ಟು ತೆರಿಗೆ ಹೊರೆ:

Also read: ಪ್ಯಾನ್ ಕಾರ್ಡ್​ ನಿಯಮದಲ್ಲಿ ಆದಾಯ ತೆರಿಗೆ ಇಲಾಖೆ ತಂದ ಬದಲಾವಣೆ: Pan Card ಪಡೆಯುವ ಮುನ್ನ ಈ ಮಾಹಿತಿ ನೋಡಿ..

2019- 20 ರ ಅನ್ವಯ ಆಯುಕ್ತರು ಮಂಡಿಸಿರುವ ಆಸ್ತಿ ತೆರಿಗೆ ಹೆಚ್ಚಿಸುವ ಟಿಪ್ಪಣಿಗೆ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಒಪ್ಪಿಗೆ ನೀಡಿ ಮುಂದಿನ ಕೌನ್ಸಿಲ್ ಸಭೆಯಲ್ಲಿ ಈ ವಿಚಾರವನ್ನು ಮಂಡಿಸಿ ಯಥಾವತ್ತಾಗಿ ಅನುಮೋದನೆ ದೊರೆತರೆ 2019ರ ಏಪ್ರಿಲ್ ನಿಂದ ತೆರಿಗೆ ಹೆಚ್ಚಳವಾಗಲಿದೆ. ಇದು 2016ರಲ್ಲಿ ಏರಿಸಲಾಗಿದ್ದ ಆಸ್ತಿ ತೆರಿಗೆ ಪ್ರಮಾಣಕ್ಕಿಂತ ಶೇ.5ರಷ್ಟು ಹೆಚ್ಚುವರಿಯಾಗಲಿದೆ.

ತೆರಿಗೆ ನಿಗದಿ ಹೇಗೆ?

ಹಳೆಯ ದರಂದತೆ ಎ ವಲಯದಲ್ಲಿನ ವಸತಿ ಕಟ್ಟಡಗಳಿಗೆ ಚದರಡಿಗೆ 2.50ರೂ, ವಾಣಿಜ್ಯ ಸ್ವತ್ತುಗಳಿಗೆ 5 ರೂ, ಬಿ ವಲಯಯದ ವಸತಿ ಕಟ್ಟಡಗಳಿಗೆ 2 ರೂ ಮತ್ತು ವಾಣಿಜ್ಯ ಕಟ್ಟಡಗಳಿಗೆ 4 ರೂ ತೆರಿಗೆ ನಿಗದಿಪಡಿಸಲಾಗಿದೆ. 2016-17ರಲ್ಲಿ ಎ ವಲಯದ ವಸತಿ ಕಟ್ಟಡಗಳಿಗೆ 3 ರೂ, ವಾಣಿಜ್ಯ ಸ್ವತ್ತುಗಳಿಗೆ 6 ರೂ ನಿಗದಿಪಡಿಸಲಾಗಿದೆ. ಇದಕ್ಕೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ವಲಯ ವರ್ಗೀಕರಣ ಕೈಬಿಡಲಾಗಿತ್ತು.

ತೆರಿಗೆ ಸಂಗ್ರಹಕ್ಕೆ ಹೇಗೆ?

Also read: ಆಧಾಯ ತೆರಿಗೆ ರಿಟರ್ನ್ಸ್‌ ಮಾಡೋದು ಹೇಗೆ ಎಂಬ ಗೊಂದಲವಿದೆಯೇ ಹಾಗಿದ್ದರೆ ಇದನ್ನು ಓದಿ ರಿಲ್ಯಾಕ್ಸ್ ಆಗಿರಿ…!

ಸ್ಥಿರಾಸ್ತಿಗಳ ಮಾರ್ಗಸೂಚಿ ದರಕ್ಕೆ ಅನುಗುಣವಾಗಿ ಆರು ವಲಯಗಳನ್ನು ವರ್ಗೀಕರಣ ಮಾಡಿ, ಆಸ್ತಿ ತೆರಿಗೆ ಸಂಗ್ರಹ ಮಾಡಲಾಗುತ್ತದೆ. ಇದಕ್ಕಾಗಿ ಎಬಿಸಿಡಿಇಎಫ್ ಎಂಬ ವಲಯಗಳನ್ನು ವಿಂಗಡಣೆ ಮಾಡಿಕೊಳ್ಳಲಾಗಿದೆ. ಒಂದೊಂದು ವಲಯಕ್ಕೆ ಪ್ರತ್ಯೇಕ ಆಸ್ತಿ ತೆರಿಗೆ ಮಾಡಿ ಆಸ್ತಿಯ ಮಾಲೀಕರಿಂದ ಸಂಗ್ರಹಿಸಲಾಗುತ್ತದೆ.