ತೆರಿಗೆ ಕಟ್ಟಲು ಬಿಬಿಎಂಪಿ ಕದ ತಟ್ಟುವ ಮುನ್ನ ಇದನೊಮ್ಮೆ ಓದಿ…

0
765

ಬಿಬಿಎಂಪಿ ಬಾಕಿ ಇರುವ ತೆರಿಗೆಯನ್ನು ಹಳೇ ನೋಟುಗಳಲ್ಲಿ ಕಟ್ಟಿಸಿಕೊಳ್ಳಲು ಮುಂದಾಗಿತ್ತಾದರೂ ಆನ್ಲೈನ್ ತೆರಿಗೆ ಪಾವತಿ ಕ್ರಮದಿಂದ ನಿರೀಕ್ಷಿತ ತೆರಿಗೆ ಬಿಬಿಎಂಪಿಗೆ ಬರುತ್ತಿಲ್ಲ.ಈ ನಡುವೆ ಬಿಬಿಎಂಪಿಗೆ ಕೇವಲ 11 ಕೋಟಿ ರೂ. ಹಣ ಮಾತ್ರ ಪಾವತಿಯಾಗಿದೆ. ಒಟ್ಟಾರೆ 8 ವಲಯಗಳಿಂದ ಒಂದು ವರ್ಷದಲ್ಲಿ 3,600 ಕೋಟಿ ರೂ. ಹಣ ತೆರಿಗೆ ರೂಪದಲ್ಲಿ ಬರಬೇಕಿತ್ತು.

ನಗದಿನ ರೂಪದಲ್ಲಿ ತೆರಿಗೆ ಪಾವತಿಗೆ ಅವಕಾಶವನ್ನು ಸಾರ್ವ ಜನಿಕರಿಗೆ ಕಲ್ಪಿಸಿದ್ದರೆ ಗುರಿ ಮೀರಿ ತೆರಿಗೆ ಸಂಗ್ರಹವಾಗುವ ಸಾಧ್ಯತೆ ಇತ್ತು. ಆದರೆ ಹಾಲಿ ಇರುವ ಆನ್ಲೈನ್ ಪದ್ಧತಿಯಲ್ಲಿ ತೆರಿಗೆ ಪಾವತಿ ಮಾಡ ಬೇಕಾಗಿರುವುದರಿಂದ ಸಾರ್ವಜನಿಕರಿಗೆ ಸಾಕಷ್ಟು ತೊಂದರೆಯಾಗಿದೆ. ನೋಟು ನಿಷೇಧದ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ನೇರ ನಗದು ಹಳೆಯ ನೋಟು ಪಾವತಿಗೆ ಬಿಬಿಎಂಪಿ ಅವಕಾಶ ಕಲ್ಪಿಸಿದ್ದರೆ ಹಣದ ಹೊಳೆಯೇ ಹರಿದು ಬರುತ್ತಿತ್ತು. ಆದರೆ ಆನ್ಲೈನ್ ಪದ್ಧತಿಗೆ ಬಿಬಿಎಂಪಿ ಅಂಟಿಕೊಂಡು ಕೂತಿದೆ. ಹೀಗಾಗಿ ನಿರೀಕ್ಷಿತ ತೆರಿಗೆ ಬರುತ್ತಿಲ್ಲ ಎಂಬುದು ಅಧಿಕಾರಿಗಳು ಅಭಿಪ್ರಾಯವಾಗಿದೆ.

ಈಗಲೂ ಕಾಲ ಮಿಂಚಿಲ್ಲ, ಸರ್ಕಾರದೊಂದಿಗೆ ಮಾತುಕತೆ ನಡೆಸಿ ನಿಯಮಾವಗಳಿಗಳನ್ನು ಸಡಿಲಗೊಳಿಸಿದರೆ ನೂರಾರು ಕೋಟಿ ದುಡ್ಡು ಹರಿದು ಬರುವುದರಲ್ಲಿ ಅನುಮಾನವಿಲ್ಲ. ತಮ್ಮಲ್ಲಿರುವ ಕಪ್ಪು ಹಣವನ್ನು, ಲೆಕ್ಕ ರಹಿತ ಹಣವನ್ನು ಬಾಕಿ ಉಳಿಸಿಕೊಂಡಿರುವ ತೆರಿಗೆಯನ್ನು ಜನ ಕಟ್ಟಲು ತಯಾರಿದ್ದರು, ಅದಕ್ಕೆ ಬಿಬಿಎಂಪಿ ಅವಕಾಶ ಮಾಡಿಕೊಡಬೇಕು.

ಎರಡು ವರ್ಷಗಳ ಮುಂಗಡ ತೆರಿಗೆ ಪಾವತಿಗೆ ಅವಕಾಶ ನೀಡಿದರೆ ಸಾವಿರಾರು ಕೋಟಿ ರೂ. ಹಣ ಹರಿದುಬರುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಬಿಬಿಎಂಪಿ ಹಿರಿಯ ಅಧಿಕಾರಿಗಳು ಹೇಳುತ್ತಾರೆ. ಕೇಂದ್ರ ಕಚೇರಿಗಳಲ್ಲಿ ಹಳೆಯ ನೋಟುಗಳ ಮೂಲಕ ತೆರಿಗೆ ಪಾವತಿಸಿಕೊಳ್ಳಲು ಅನುಮತಿ ನೀಡಿದರೆ ಬಹುತೇಕ ಇದುವರೆಗೆ ಬಾಕಿ ಉಳಿದಿರುವ ಎಲ್ಲ ತೆರಿಗೆಯೂ ಒಮ್ಮೆಲೆ ಪಾಲಿಕೆಗೆ ಬರುತ್ತದೆ. ಗುತ್ತಿಗೆದಾರರಿಗೆ ನೀಡಬೇಕಾಗಿರುವ ಬಾಕಿ ಹಣವನ್ನು ಪಾಲಿಕೆ ಕೊಡಬಹುದು. ಅಭಿವೃದ್ಧಿ ಕೆಲಸಗಳಿಗೂ ಬಳಸಿಕೊಳ್ಳಬಹುದು. ಇಚ್ಛಾಶಕ್ತಿಯನ್ನು ಬಳಸಿಕೊಂಡು ಈ ಕೆಲಸವನ್ನು ಮಾಡಬೇಕು.